ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪರ-ವಿರೋಧ ಪೋಸ್ಟ್​

ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ಕೆಲ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಪರ-ವಿರೋಧದ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪರ-ವಿರೋಧ ಪೋಸ್ಟ್​
ಸಾಂದರ್ಭಿಕ ಚಿತ್ರ

Updated on: Jul 17, 2024 | 1:54 PM

ಬೆಂಗಳೂರು, ಜುಲೈ 17: ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ (Job Reservation for Kannadigas) ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ (Karnataka Cabinet) ಮಂಗಳವಾರ (ಜು.16) ಅನುಮೋದನೆ ನೀಡಿದೆ. ಸರ್ಕಾರದ ಈ ವಿಚಾರವಾಗಿ ಉದ್ಯಮಿಗಳು ಮತ್ತು ನೆಟ್ಟಿಗರ ನಡುವೆ ಪರ ವಿರೋಧದ ಚರ್ಚೆಯಾಗುತ್ತಿದೆ. ಫೀಡ್ಮೈಲ್ ಎಂಬ ಎಕ್ಸ್​ ಖಾತೆದಾರರು ಟ್ವೀಟ್​​ ಮಾಡಿ ” ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಅನುಸರಿಸದ ಕಂಪನಿಗಳಿಗೆ 10 ರಿಂದ 25 ಸಾವರಿದ ವರೆಗೆ ದಂಡ ವಿಧಿಸಿ ಎಂದು ಟ್ವೀಟ್​ ಮಾಡಿದ್ದಾರೆ.

“ಕನ್ನಡೇತರರು ಖಾಸಗಿ ಕಂಪನಿಗಳಲ್ಲಿನ ಕೆಲಸವನ್ನು ಕೂಡಲೇ ತೊರೆದು ಕರ್ನಾಟಕವನ್ನು ತೋರೆಯಿರಿ. ರಾಜ್ಯದ ಆರ್ಥಿಕತೆಯ ಹೇಗೆ ಕುಸಿತವಾಗುತ್ತದೆ ಎಂದು ಈ ವ್ಯಕ್ತಿ ನೋಡಲಿ” ಎಂದು ದೀಕ್ಷ ಕಂಡಪಾಲ್​ ಎಂಬುವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದೇ ರೀತಿಯಾಗಿ ಎಲ್ಲ ಕನ್ನಡೇತರರನ್ನು ತಮ್ಮ ಊರುಗಳಿಗೆ ತೆರಳುತ್ತಾರೆ. ಒಂದು ದಿನ ಎಲ್ಲರೂ ನಿಜವಾಗಿಯೂ ಹಿಂತಿರುಗುತ್ತದೆ ಎಂದು ಭಾವಿಸುತ್ತೇನೆ” ಎಂದು ಕೃಷ್ಣ ಎಂಬುವರು ದಿ. ಪುನಿತ್​ ರಾಜಕುಮಾರ್​ ಅವರು ನಟನೆಯ ಹುಡುಗರು ಚಿತ್ರದ ದೃಶ್ಯವನ್ನು ಪೋಸ್ಟ್​ ಮಾಡಿದ್ದಾರೆ.

“ಕರ್ನಾಟಕ ಸರ್ಕಾರವು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗಾಗಿ ಮಸೂದೆಯನ್ನು ಅಂಗೀಕರಿಸಿದೆ. ಬಹಳ ಒಳ್ಳೆಯ ನಿರ್ಧಾರ, ಒಳ್ಳೆಯ ಕೆಲಸ” ಎಂದು ವೀಣಾ ಜೈನ್​ ಎಂಬುವರು ಟ್ವೀಟ್​ ಮಾಡಿದ್ದಾರೆ. ಈ ರೀತಿಯಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ನೆಟ್ಟಿಗರು ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಲು ನಮ್ಮ ಸರ್ಕಾರ ಬಂದಿದೆ: ಡಿಕೆಶಿ

ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಲು ನಮ್ಮ ಸರ್ಕಾರ ಬಂದಿದೆ. ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ಕಡತಗಳಲ್ಲಿ ಕನ್ನಡ ಬಳಕೆ ಕಡ್ಡಾಯ. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಅಂತ ಉದ್ಯೋಗ ಇರಬೇಕು. ಇದರ ಬಗ್ಗೆ ತೀರ್ಮಾನ ನಾವು ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಿರಣ್ ಮಜುಂದಾರ್, ಮೋಹನ್​ದಾಸ್​ ಪೈ ವಿರೋಧ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ತಾಂತ್ರಿಕ ಸಮಸ್ಯೆ ಇದ್ದ ಕಡೆ ಏನೂ ಮಾಡಲು ಆಗಲ್ಲ. ತಾಂತ್ರಿಕತೆ ಅಗತ್ಯವಿರುವ ಕಡೆ ರಿಯಾಯಿತಿ ಕೊಡುತ್ತೇವೆ. ಸದನ ಇರುವುದರಿಂದ ಸಂಪೂರ್ಣ ಮಾಹಿತಿ ಹೇಳಲು ಆಗಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ