ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಉದ್ಯಮಿಗಳಿಂದ ವಿರೋಧ

Reservation for Kannadigas: ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು ಇದಕ್ಕೆ ಉದ್ಯಮಿ ಮೋಹನ್​ ದಾಸ್​ ಪೈ ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಉದ್ಯಮಿಗಳಿಂದ ವಿರೋಧ
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಉದ್ಯಮಿಗಳಿಂದ ವಿರೋಧ
Follow us
|

Updated on:Jul 17, 2024 | 1:37 PM

ಬೆಂಗಳೂರು, ಜುಲೈ 17: ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ (Job Reservation for Kannadigas) ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ (Karnataka Cabinet) ಮಂಗಳವಾರ (ಜು.16) ಅನುಮೋದನೆ ನೀಡಿದ್ದು, ಇದಕ್ಕೆ ಉದ್ಯಮಿ ಮೋಹನ್​ ದಾಸ್​ ಪೈ (Mohandas Pai) ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮಸೂದೆ ವಿಚಾರವಾಗಿ ಟ್ವೀಟ್​ ಮಾಡಿದ ಮೋಹನ್​ ದಾಸ್​ ಪೈ ಅವರು, “ಮಸೂದೆಯನ್ನು ಜಾರಿಗೆ ತರಬಾರದು. ಇದು ಸಂವಿಧಾನ ವಿರೋಧಿಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದುವರೆದು “ಖಾಸಗಿ ಕಂಪನಿಗಳಿಗೆ ನೇಮಕ ಮಾಡಿಕೊಳ್ಳುವಾಗ ಸರ್ಕಾರಿ ಅಧಿಕಾರಿಗಳು ಸಂದರ್ಶನಕ್ಕೆ ಬರುತ್ತಾರಾ? ಸಂದರ್ಶನ ಸಮಯದಲ್ಲಿ ಅವರ ಭಾಷೆಯನ್ನು ಪರೀಕ್ಷಿಸಿ ನೇಮಕ ಮಾಡಿಕೊಳ್ಳಬೇಕಾ?. ಕಾಂಗ್ರೆಸ್​ ಸರ್ಕಾರವು ಇಂತಹ ಮಸೂದೆ​ ಜಾರಿ ಮಾಡಲು ಮುಂದಾಗಿರುವುದು ನಂಬಲು ಅಸಾಧ್ಯ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ್ದಾರೆ.

ಈ ವಿಚಾರವಾಗಿ ಟವಿ9 ಡಿಜಿಟಲ್​ನೊಂದಿಗೆ ಮಾತನಾಡಿದ ಉದ್ಯಮಿ ಮೋಹನ್​ದಾಸ್​ ಪೈ,  ಯಾವುದೇ ಇಂಡಸ್ಟ್ರಿಗೂ ಈಗ ಜನರು ಬರುತ್ತಿಲ್ಲ. ಇದನ್ನು ನಮ್ಮ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಲಿ. ನಾನು ಹುಟ್ಟಿದ್ದು, ಕೆಲಸ ಮಾಡುತ್ತಿರುವುದು ಕರ್ನಾಟಕದಲ್ಲೇ. ಸರ್ಕಾರ ಮೊದಲು ಒಳ್ಳೆಯ ಶಿಕ್ಷಣ ಕೊಡಬೇಕು. ಯಾರಿಗೆ ಶಿಕ್ಷಣ ಸಿಗುತ್ತೆ ಅವರಿಗೆ ಉದ್ಯೋಗ ಸಿಗುತ್ತೆ. ಈ ನಿರ್ಧಾರದಿಂದ ಕರ್ನಾಟಕದ ಹೆಸರು ಕೆಡಿಸುತ್ತಿದ್ದಾರೆ. ನೀವು ಯಾವ ರೀತಿಯ ತರಬೇತಿ ಕೊಡುತ್ತೀರಿ. ಈ ವಿಧೇಯಕವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಮಸೂದೆಯ ವಿವರ ಇಲ್ಲಿದೆ ನೋಡಿ

“ಟೆಕ್​ ಹಬ್​ ಆಗಿ ನಮಗೆ ನುರಿತ ಪ್ರತಿಭೆಗಳ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸುವ ಗುರಿಯು ತಂತ್ರಜ್ಞಾನದಲ್ಲಿ ನಮ್ಮ ಪ್ರಮುಖ ಸ್ಥಾನದ ಮೇಲೆ ಪರಿಣಾಮ ಬೀರಬಾರದು. ಈ ನೀತಿಯಿಂದ ಹೆಚ್ಚು ನುರಿತ ನೇಮಕಾತಿಗೆ ವಿನಾಯಿತಿ ನೀಡುವ ಎಚ್ಚರಿಕೆಗಳು ಇರಬೇಕು ಎಂದು ಕಿರಣ್ ಮಜುಂದಾರ್ ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕಿರಣ್ ಮುಜುಂದಾರ್ ಸಲಹೆ ನೀಡಿದ್ದಾರೆ.

“ಕರ್ನಾಟಕ ಸರ್ಕಾರದಿಂದ ಮತ್ತೊಂದು ಜಾಣ ನಡೆ. ಸ್ಥಳೀಯ ಮೀಸಲಾತಿಯನ್ನು ಕಡ್ಡಾಯಗೊಳಿಸಿ ಮತ್ತು ಮೇಲ್ವಿಚಾರಣೆ ಮಾಡಲು ಪ್ರತೀ ಕಂಪನಿಯಲ್ಲಿ ಸರ್ಕಾರಿ ಅಧಿಕಾರಿಯನ್ನು ನೇಮಕ ಮಾಡಿ. ಇದು ಭಾರತೀಯ ಐಟಿ ಮತ್ತು ಜಿಸಿಸಿಗಳನ್ನು ಹೆದರಿಸುತ್ತದೆ. ದೂರದೃಷ್ಟಿಯುಳ್ಳದ್ದು” ಎಂದು ಆರ್​ಕೆ ಮಿಶ್ರಾ ಟ್ವೀಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Wed, 17 July 24