ಬೆಂಗಳೂರು, ಜುಲೈ 28: ರವಿವಾರ ಮನೆಯಲ್ಲಿ ಹಾಯಾಗಿ ಸಮಯ ಕಳೆಯಬೇಕು ಎಂದುಕೊಂಡಿರುವ ಬೆಂಗಳೂರು (Bengaluru) ನಗರ ಮತ್ತು ಗ್ರಾಮಾಂತರದ ಜನರಿಗೆ ವಿದ್ಯುತ್ ಶಾಕ್ ಕಾದಿದೆ. ಹೌದು ಬೆಂಗಳೂರು ನಗರ ಮತ್ತು ಗ್ರಾಮಾಂತರದ ಕೆಲವು ಏರಿಯಾಗಳಲ್ಲಿ ಇಂದು (ಜುಲೈ.28) ಬೆಳಗ್ಗೆಯಿಂದ ಸಾಯಂಕಾಲದವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ.
ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ವಿದ್ಯುತ್ ವ್ಯತ್ಯಯಕ್ಕೆ ಬೆಸ್ಕಾಂ ವಿಷಾಧ ವ್ಯಕ್ತಪಡಿಸಿದೆ.
ರಾಜಾಜಿನಗರದ 6ನೇ ಬ್ಲಾಕ್ ಇಂಡಸ್ಟ್ರಿಯಲ್ ಎಸ್ಟೇಟ್ ರಾಜಾಜಿನಗರದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ವರೆಗು ವಿದ್ಯುತ್ ವ್ಯತ್ಯಯವಾಗಲಿದೆ. ಶಿವಮಂದಿರ, ಕರೆಕಲ್ಲು, ಕಾಮಶಿಪಾಳ್ಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗು ವಿದ್ಯುತ್ ಕಟ್ ಆಗಲಿದೆ. ಜನಪ್ರಿಯ ಅಪಾರ್ಟ್‌ಮೆಂಟ್, ವಿಘ್ನೇಶ್ವರ ನಗರ ಮುಖ್ಯ ರಸ್ತೆ, ಹೊಯ್ಸಳನಗರದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪವರ್ ಕಟ್ ಆಗಲಿದೆ.
ನೆಲಮಂಗಲದ ದೊಡ್ಡಬಳ್ಳಾಪುರ ನಗರದ ದೊಡ್ಡಬಳ್ಳಾಪುರ ಟೌನ್, ರಾಜಘಟ್ಟ, ತಿಪ್ಪೂರು, ರಘುನಾಥಪುರ, ತಳಗವಾರ, ಗಂಡ್ರಾಜಪುರ, ಕೋನಗಟ್ಟಾ, ಮುದ್ದನಾಯಕನಪಾಳ್ಯ, ಹಣಬೆ, ಎಸ್ಎಸ್ ಘಾಟಿ, ಅಂತರಹಳ್ಳಿ, ಕಂಟನಕುಂಟೆ, ನೇರಲಗಟ್ಟಾ, ಹಾಡೋನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ
ಹೊಸಕೋಟೆ ವಿಭಾಗದ ದೇವನಹಳ್ಳಿಯ ರಾಮನಾಥಪುರ, ಚಪ್ಪರದಕಲ್ಲಿನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿದ್ಯುತ್ಯ ಪೂರೈಕೆ ಇರುವುದಿಲ್ಲ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 am, Sun, 28 July 24