ಕಲಬುರಗಿ: ಇಂಜಿನಿಯರ್​ಗಳ ಕೆಲಸಕ್ಕೆ ಗುಡ್ ಬೈ, ಪೊಲೀಸ್​ ಕೆಲಸಕ್ಕೆ ಜೈ ಜೈ

ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಕೇಂದ್ರದಲ್ಲಿ ಇತ್ತೀಚೆಗಷ್ಟೇ 3 ನೇ ತಂಡದ ಪಿಎಸ್ಐ ಗುಪ್ತವಾರ್ತೆ, 5 ನೇ ತಂಡದ ವೈರಲೆಸ್ ಪಿಎಸ್ಐ, ವಿಶೇಷ ಆರ್​ಎಸ್​ಐನ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು. ವಿಶೇಷವೆಂದರೆ ತರಬೇತಿ ಮುಗಿಸಿದ 108 ಪ್ರಶಿಕ್ಷಣಾರ್ಥಿಗಳ ಪೈಕಿ 28 ಜನ ಇಂಜಿನಿಯರ್ (ಬಿಇ) ಪದವಿ ಪಡೆದವರಿದ್ದಾರೆ.

ಕಲಬುರಗಿ: ಇಂಜಿನಿಯರ್​ಗಳ ಕೆಲಸಕ್ಕೆ ಗುಡ್ ಬೈ, ಪೊಲೀಸ್​ ಕೆಲಸಕ್ಕೆ ಜೈ ಜೈ
ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಕೇಂದ್ರದಲ್ಲಿ ಪಥಸಂಚಲನ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Apr 08, 2021 | 2:24 PM

ಕಲಬುರಗಿ: ಒಂದು ಸಮಯದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ಎಂದರೆ ಅವರನ್ನು ಜನರು ನೋಡುವ ದೃಷ್ಟಿಯೇ ಬದಲಿತ್ತು. ಹೆಚ್ಚಿನ ಯುವ ಜನರು ಇಂಜಿನಿಯರ್ ಆಗಲು ಮುಗಿಬಿದ್ದಿದ್ದರು. ಆದರೆ ಇದೀಗ ಅದೇ ಇಂಜಿನಿಯರ್​ಗಳು ಸಾಫ್ಟ್​ವೇರ್​ ಕೆಲಸ ಬಿಟ್ಟು, ಸರ್ಕಾರಿ ಕೆಲಸದ ಬೆನ್ನು ಬಿದ್ದಿದ್ದಾರೆ. ಸಾಫ್ಟ್​ವೇರ್​ ಹುದ್ದೆಗಳನ್ನು ತೊರೆದು, ಅನೇಕರು ಸರ್ಕಾರಿ ನೌಕರಿಗೆ ಸೇರುತ್ತಿದ್ದಾರೆ. ಕಂಪ್ಯೂಟರ್ ಕೀಲಿಮಣೆಗಳನ್ನು ಹಿಡಿಯುತ್ತಿದ್ದವರು ಇದೀಗ ಕೈಯಲ್ಲಿ ಲಾಠಿ ಹಿಡಿದಿದ್ದಾರೆ. ಬಿಇ ಅಂತಹ ಪದವಿ ಪಡೆದವರು ಅನೇಕ ಕಂಪನಿಗಳಲ್ಲಿ ಕೆಲಸಕ್ಕೆ ಅವಕಾಶವಿದ್ದರು ಕೂಡಾ ಆ ಕೆಲಸಕ್ಕೆ ಹೋಗದೆ ಸರ್ಕಾರಿ ಕೆಲಸಕ್ಕೆ ಸೇರುತ್ತಿದ್ದಾರೆ.

ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಕೇಂದ್ರದಲ್ಲಿ ಇತ್ತೀಚೆಗಷ್ಟೇ 3 ನೇ ತಂಡದ ಪಿಎಸ್ಐ ಗುಪ್ತವಾರ್ತೆ, 5 ನೇ ತಂಡದ ವೈರಲೆಸ್ ಪಿಎಸ್ಐ, ವಿಶೇಷ ಆರ್​ಎಸ್​ಐನ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು. ವಿಶೇಷವೆಂದರೆ ತರಬೇತಿ ಮುಗಿಸಿದ 108 ಪ್ರಶಿಕ್ಷಣಾರ್ಥಿಗಳ ಪೈಕಿ 28 ಜನ ಇಂಜಿನಿಯರ್ (ಬಿಇ) ಪದವಿ ಪಡೆದವರಿದ್ದಾರೆ.

ಬಿಇ ಪದವಿ ಪಡೆದಿದ್ದ 28 ಜನರು, ಬಿಎಸ್​ಸಿ ಪದವಿ ಪಡೆದಿದ್ದ 18 ಜನರು, ಬಿಕಾಂ ಪದವಿ ಪಡೆದಿದ್ದ 14 ಜನರು ಪೊಲೀಸ್ ಇಲಾಖೆಗೆ ಸೇರಿದ್ದರೆ, 108 ಜನರ ಪೈಕಿ ಬಿಎ ಪದವಿ ಪಡೆದವರು 33 ಜನರಿದ್ದಾರೆ. ಇನ್ನು ಅಚ್ಚರಿಯ ವಿಷಯವೆಂದರೆ ಬಿಇ ಪದವಿ ಪಡೆದು ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಿಎಸ್ಐಗಳಾಗಿ ನೇಮಕವಾಗಿ ಇದೀಗ ತರಬೇತಿಯನ್ನು ಪೂರ್ಣಗೊಳಿಸಿ, ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸಾಫ್ಟ್​ವೇರ್ ಇಂಜಿನಿಯರ್ ಆಗಬೇಕು ಅಂತ ಕನಸು ಕಂಡು ಬಿಇ ಪದವಿ ಪಡೆದಿದ್ದವರು ಇದೀಗ ಸಾಫ್ಟ್​ವೇರ್ ಕೆಲಸ ಬಿಟ್ಟು ಸರ್ಕಾರಿ ಕೆಲಸಕ್ಕೆ ಹಾಜರಾಗಿದ್ದಾರೆ.

ಪಥಸಂಚಲನ

ಟೆಕ್ಕಿಗೆ ಬೈಬೈ, ಸರ್ಕಾರಿ ಕೆಲಸಕ್ಕೆ ಜೈಜೈ ಇತ್ತೀಚೆಗೆ ಅನೇಕ ಟೆಕ್ಕಿಗಳು ಸಾಫ್ಟ್​ವೇರ್ ಕೆಲಸ ಬಿಟ್ಟು, ಸರ್ಕಾರಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಕೆಲಸ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ಮಾಡುತ್ತಿದ್ದರೆ, ಇನ್ನು ಕೆಲವರು ಕೆಲಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ಕೆಲಸ ಸೇರುತ್ತಿದ್ದಾರೆ. ಇದಕ್ಕೆ ಕಾರಣ, ಸಾಫ್ಟ್​ವೇರ್ ಕ್ಷೇತ್ರದಲ್ಲಿ ಕೂಡಾ ಅನೇಕ ಬದಲಾಣೆಗಳು ಆಗುತ್ತಿರುವುದು. ಕೊರೊನಾದ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡರು. ಅನೇಕರು ಅರ್ಧ ಸಂಬಳ ಪಡೆದರು. ವೃತ್ತಿ ಭದ್ರತೆ ಕಡಿಮೆ. ಕೆಲಸದ ಸಮಯದಲ್ಲಿ ಕೈ ತುಂಬಾ ಸಂಬಳ ಬಂದರು ಕೂಡಾ ಸೇವಾ ಭದ್ರತೆ ಇಲ್ಲಾ. ಹೀಗಾಗಿ ಸಾಫ್ಟ್​ವೇರ್ ಬಿಟ್ಟು ಸರ್ಕಾರಿ ಕೆಲಸದತ್ತ ಹೆಚ್ಚಿನ ಜನರು ಹೋಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಸಾಫ್ಟ್​ವೇರ್ ಕೆಲಸ ಬಿಟ್ಟು ಪಿಎಸ್ಐ ಆಗಿ ನೇಮಕವಾಗಿರುವ ಅನೇಕರು.

ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಹಿಡಿದು ಪಿಎಸ್ಐ ಸೇರಿದಂತೆ ಅನೇಕ ಹುದ್ದೆಗಳಿಗೆ ತರಬೇತಿ ನೀಡಲಾಗುತ್ತದೆ. ನೇಮಕವಾಗುತ್ತಿರುವವರ ಪೈಕಿ ಹೆಚ್ಚಿನ ಜನರು ಸಾಫ್ಟ್​ವೇರ್ ಇಂಜಿನಿಯರ್ ಸೇರಿದಂತೆ ಅನೇಕ ಉನ್ನತ ಶಿಕ್ಷಣ ಪಡೆದವರು ಇರುತ್ತಾರೆ. ಈ ಮೊದಲು ಬಿಎ, ಬಿಕಾಂ ಪದವಿ ಪಡೆದವರು ಹೆಚ್ಚು ಪೊಲೀಸ್ ಇಲಾಖೆಗೆ ಸೇರುತ್ತಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಬಿಇ ಸೇರಿದಂತೆ ಅನೇಕ ವೃತ್ತಿಪರ ಕೋರ್ಸ್​ಗಳನ್ನು ಮುಗಿಸಿರುವ ಅನೇಕರು ಕೂಡಾ ಪೊಲೀಸ್ ಇಲಾಖೆಗೆ ಸೇರುತ್ತಿದ್ದಾರೆ ಎಂದು ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಯಡಾ ಮಾರ್ಟಿನ್ ತಿಳಿಸಿದರು.

ನಾನು ಬಿಇ ಮೆಕ್ಯಾನಿಕಲ್ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದೆ. ಆದರೆ ಕಳೆದ ಕೆಲ ವರ್ಷಗಳಿಂದ ಖಾಸಗಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಸರ್ಕಾರಿ ಕೆಲಸ ಸೇರಬೇಕೆನ್ನುವ ಆಸೆ ಹುಟ್ಟಿತು. ಜೊತೆಗೆ ನಮ್ಮ ಕುಟುಂಬದಲ್ಲಿ ಯಾರು ಕೂಡಾ ಸರ್ಕಾರಿ ಕೆಲಸದಲ್ಲಿರಲಿಲ್ಲಾ. ಹೀಗಾಗಿ ಕೆಲ ವರ್ಷ ಕಷ್ಟಪಟ್ಟು ಓದಿ ಇದೀಗ ಪೊಲೀಸ್ ಇಲಾಖೆಗೆ ಸೇರಿದ್ದೇನೆ. ಸರ್ಕಾರಿ ಕೆಲಸಕ್ಕೆ ಸೇರಿದ್ದು ಮತ್ತು ಪೊಲೀಸ್ ಇಲಾಖೆಗೆ ಸೇರಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಆರ್​ಎಸ್​ಐ ನೇಮಕಗೊಂಡಿರುವ ಅಭಿಷೇಕ ನಾಡಗೌಡರ ಅಭಿಪ್ರಾಯಪಟ್ಟರು

(ವರದಿ: ಸಂಜಯ್ ಚಿಕ್ಕಮಠ -9980510149)

ಇದನ್ನೂ ಓದಿ

ಮದುವೆಯಾಗಿ ಮನೆಬಿಟ್ಟು ಹೋದ ಲವರ್ಸ್​.. ರೊಚ್ಚಿಗೆದ್ದ ಯುವತಿ ಕುಟುಂಬಸ್ಥರಿಂದ ಯುವಕನ ಮನೆಗೆ ಬೆಂಕಿ

ಯುಗಾದಿ ಬರುತ್ತಿದೆ ಎಂದು ಕೊರೊನಾ ಸುಮ್ಮನಾಗಲ್ಲ.. ಪಟ್ಟಣದಿಂದ ಹಳ್ಳಿಗೆ ಹೋಗುವವರು ಎಚ್ಚರದಿಂದಿರಿ: ಆರೋಗ್ಯ ಸಚಿವ ಸುಧಾಕರ್

(Kalaburagi News in a recent development 28 engineers joined government Job)

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್