ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಥಳಿಸಿದ ಸ್ಥಳೀಯರು; ವಿಡಿಯೋ ವೈರಲ್

| Updated By: sandhya thejappa

Updated on: Jun 26, 2021 | 9:09 AM

ಅಸಭ್ಯವಾಗಿ ವರ್ತಿಸಿದ ಯುವಕನ ಪ್ಯಾಂಟ್ ಬಿಚ್ಚಿ ಹೈವೆನಲ್ಲಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಜಿಲ್ಲೆ ಜೇವರ್ಗಿ ತಾಲೂಕಿನ ಇಜೇರಿ ಬಳಿ ನಿನ್ನೆ (ಜೂನ್ 25) ಸಂಜೆ ಈ ಘಟನೆ ನಡೆದಿದೆ. ತಾಲೂಕಿನ ಹಾಲಬಾವಿ ಗ್ರಾಮದ ಮಲ್ಲಿಕಾರ್ಜುನ ಹಲ್ಲೆಗೊಳಗಾದ ಯುವಕ.

ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಥಳಿಸಿದ ಸ್ಥಳೀಯರು; ವಿಡಿಯೋ ವೈರಲ್
ಯುವಕನಿಗೆ ಥಳಿಸಿದ ಸ್ಥಳೀಯರು
Follow us on

ಕಲಬುರಗಿ: ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಯುವಕನಿಗೆ ಹೊಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹನುಮಂತ ಎಂಬವವರ ತಾಯಿ ಜೊತೆ ಯುವಕನೊಬ್ಬ ಅಸಭ್ಯ ವರ್ತಿಸಿದ್ದ. ರೊಚ್ಚಿಗೆದ್ದ ಮಗ ಹನುಮಂತ ಮತ್ತು ಆತನ ಸ್ನೇಹಿತರು ಯುವನಿಗೆ ಹಲ್ಲೆ ಮಾಡಿದ್ದಾರೆ.

ಅಸಭ್ಯವಾಗಿ ವರ್ತಿಸಿದ ಯುವಕನ ಪ್ಯಾಂಟ್ ಬಿಚ್ಚಿ ಹೈವೆನಲ್ಲಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಜಿಲ್ಲೆ ಜೇವರ್ಗಿ ತಾಲೂಕಿನ ಇಜೇರಿ ಬಳಿ ನಿನ್ನೆ (ಜೂನ್ 25) ಸಂಜೆ ಈ ಘಟನೆ ನಡೆದಿದೆ. ತಾಲೂಕಿನ ಹಾಲಬಾವಿ ಗ್ರಾಮದ ಮಲ್ಲಿಕಾರ್ಜುನ ಹಲ್ಲೆಗೊಳಗಾದ ಯುವಕ. ನಂತರ ಹಲ್ಲೆಗೊಳಗಾದ ಯುವಕನ ಸಂಬಂಧಿಕರು ಬಂದು ಹನುಮಂತ ಮತ್ತು ಆತನ ಸ್ನೇಹಿತರ ಮೇಲೆ ನಡೆಸಿದ್ದಾರೆ. ಸದ್ಯ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಜನರು ಹಿಗ್ಗಾಮುಗ್ಗ ಥಳಿಸಿದ್ದು, ಹಲ್ಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೃಷಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರ ಜೊತೆ ಮಲ್ಲಿಕಾರ್ಜುನ ಅಸಭ್ಯವಾಗಿ ವರ್ತಿಸಿದ್ದನಂತೆ. ಈ ವಿಷಯ ತಿಳಿದ ಸ್ಥಳೀಯರು ಆತನಿಗೆ ಮನಸ್ಸಿಚ್ಚೆಯಂತೆ ಹೊಡೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ದೂರನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ

ಹಾಸನದಲ್ಲಿ ಬಾಲಕಿ ಜೊತೆ ಅಸಭ್ಯ ವರ್ತನೆ, ಸ್ಥಳೀಯರಿಂದ ಧರ್ಮದೇಟು

ಸ್ವಾತಂತ್ರ್ಯ ದಿನಾಚರಣೆಗೆ ಅಕ್ಷಯ್​ ಕುಮಾರ್​ ಕಡೆಯಿಂದ ಸಿಗಲಿದೆ ಗಿಫ್ಟ್​; ಲೀಕ್​ ಆಯ್ತು ಬಿಗ್​ ನ್ಯೂಸ್​

(Kalaburagi people beaten to Young Man for Misbehave with woman)