ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಕಲಬುರಗಿಯ ಬಾಲಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 15, 2023 | 7:55 AM

Asia Book of Record: ಕೋವಿಡ್ ಸಮಯದಲ್ಲಿ ಅನೇಕರ ಬದುಕು ನರಕಮಯವಾಗಿತ್ತು.ಲಾಕ್​ಡೌನ್​ನಿಂದ ಅನೇಕರು ಪರದಾಡಿದ್ದರು. ಆದ್ರೆ, ಆ ಸಮಯವನ್ನು ಕೂಡ ಕೆಲವರು ಸದುಪಯೋಗ ಮಾಡಿಕೊಂಡಿದ್ದರು. ಕೋವಿಡ್ ಸಮಯದಲ್ಲಿ ಮನೆಯಲ್ಲಿದ್ದಾಗ ಕಲಿತ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ಹೇಳುವ ಹವ್ಯಾಸ, ಮುಂದೆ ಬಾಲಕನ ಸಾಧನೆಗೆ ಕಾರಣವಾಗಿದೆ. ಹೌದು, ಕಲಬುರಗಿ ಬಾಲಕ ಇದೀಗ ವೇಗವಾಗಿ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ಹೇಳೋದರಲ್ಲಿ ಏಷಿಯಾ ಬುಕ್ ಆಪ್ ರೆಕಾರ್ಡ್ ಸೇರಿದ್ದಾರೆ.

ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಕಲಬುರಗಿಯ ಬಾಲಕ
ದ್ರುವಂತ್ ಆಲೂರ್, ಎಷಿಯಾ ಬುಕ್ ಆಪ್ ರೆಕಾರ್ಡ್ ಮಾಡಿರೋ ಬಾಲಕ
Follow us on

ಕಲಬುರಗಿ, ಆ.15: ವೇಗವಾಗಿ ಮತ್ತು ಹರಳು ಹುರಿದಂತೆ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್​ನ್ನು(Spelling of English Words) ಹೇಳುವ ಈ ಬಾಲಕ ಇದೀಗ ಎಲ್ಲರಿಗೂ ಸ್ಪೂರ್ತಿಯಾಗಿದ್ದಾನೆ. ಆತನ ಪರಿಶ್ರಮಕ್ಕೆ ಸಂದಿರುವ ಅನೇಕ ಬಹುಮಾನಗಳು ಮತ್ತು ಮಗನ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಕಲಬುರಗಿ(Kalaburagi)ಯ ಕುವರ ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್(Asia Book of Record) ಸಾಧನೆ ಮಾಡಿದ್ದಾನೆ. ತನಗೆ ಸಿಕ್ಕಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್ ಮೆಡಲ್​ಗಳನ್ನು ಹಾಕಿಕೊಂಡು, ಕೈಯಲ್ಲಿ ಪ್ರಮಾಣ ಪತ್ರ ಹಿಡಿದು ನಿಂತಿರುವ ಈ ಬಾಲಕನ ಹೆಸರು ದ್ರುವಂತ್ ಆಲೂರ್. ಕಲಬುರಗಿ ನಿಗರದ ನಿವಾಸಿಯಾಗಿರುವ ದ್ರುವಂತ್ ಆಲೂರ್ ಇದೀಗ ಏಷಿಯಾ ಬುಕ್ ಆಪ್ ರೆಕಾರ್ಡ್​ಗೆ ಸೇರಿದ್ದಾನೆ.

ಐದೇ ನಿಮಿಷದಲ್ಲಿ  310 ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ಹೇಳುವ ಬಾಲಕ

ನಗರದ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ದ್ರುವಂತ್ ಎಂಬ ಬಾಲಕ, ಐದು ವರ್ಷದೊಳಗಿನವರ ಸಾಲಿನಲ್ಲಿ ಬರೊಬ್ಬರಿ 310 ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್​ನ್ನು ಹೇಳಿದ್ದ. ಇದು ಈ ಹಿಂದೆ ಇಂಡಿಯಾ ಬುಕ್ ಆಪ್ ರೆಕಾರ್ಡ್​ಗೆ ಸೇರಿತ್ತಂತೆ. ನಂತರ ದ್ರುವಂತ್ ಪೋಷಕರು, ಏಷಿಯಾ ಬುಕ್ ಆಪ್ ರೆಕಾರ್ಡ್​ಗೆ ಈ ಬಗ್ಗೆ ಮಾಹಿತಿ ನೀಡಿದ್ದರಂತೆ. ಹೌದು, ಐದೇ ನಿಮಿಷದಲ್ಲಿ ಏಷಿಯಾದಲ್ಲಿ ಯಾರೂ ಕೂಡ ಇಷ್ಟೊಂದು ಶಬ್ದಗಳ ಸ್ಪೆಲ್ಲಿಂಗ್ ಹೇಳದೆ ಇರುವುದನ್ನು ಪರಿಶೀಲಿಸಿದ ತಂಡ, ಕೆಲ ದಿನಗಳ ಹಿಂದಷ್ಟೇ ದ್ರುವಂತ್ ಆಲೂರ್​ನ್ನು 2023 ರ ಏಷಿಯಾ ಬುಕ್ ಆಪ್ ರೆಕಾರ್ಡ್​ಗೆ ಸೇರಿಸಿ, ಪ್ರಮಾಣ ಪತ್ರ, ಮೆಡಲ್ ನ್ನು ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ:Chitradurga News: ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?

ಸಾಧನೆಗೆ ಕಾರಣವಾದ ಕೋವಿಡ್ ಸಮಯ

ಸದ್ಯ ದ್ರುವಂತ್ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಐದು ವರ್ಷದವನಿದ್ದಾಗಲೇ ಹೇಳಿದ್ದ ಇಂಗ್ಲಿಷ್ ಶಬ್ದಗಳಿಗೆ ಇದೀಗ ಏಷಿಯಾ ಬುಕ್ ಆಪ್ ರೆಕಾರ್ಡ್ ಗರಿ ಸಿಕ್ಕಿದೆ. ಈ ಮೂಲಕ ದ್ರುವಂತ್ ವರ್ಲ್ಡ್ ಬುಕ್ ಆಪ್ ರೆಕಾರ್ಡ್​ಗೆ ಹೋಗಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದೀಗ ದ್ರುವಂತ್ ವರ್ಲ್ಡ್ ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ಇನ್ನು ಇಂತಹದೊಂದು ಸಾಧನೆಗೆ ಕೋವಿಡ್ ಸಮಯ ಕಾರಣವಾಗಿದೆ. ಹೌದು, ಅನೇಕರು ಕೋವಿಡ್​ನಲ್ಲಿ ಲಾಕ್​ಡೌನ್​ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಆದ್ರೆ, ದ್ರುವಂತ್ ಹೆತ್ತವರು, ತಮ್ಮ ಮಗ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್​ನ್ನು ನಿರರ್ಗಳವಾಗಿ ಹೇಳುವುದನ್ನು ನೋಡಿ, ಆತನಿಗೆ ಹೆಚ್ಚಿನ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್​ನ್ನು ಹೇಳಿಕೊಟ್ಟಿದ್ದರು. ಕಲಬುರಗಿ ನಗರದ ಖಾಸಗಿ ಇಂಜನೀಯರಿಂಗ್ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ದ್ರುವಂತ್ ತಂದೆಯವರು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಇಂಗ್ಲಿಷ್ ಶಬ್ದಗಳನ್ನು ಯಾರು ಹೇಳದೆ ಇರುವ ಬಗ್ಗೆ ಮಾಹಿತಿ ಪಡೆದು, ಇಂಡಿಯಾ ಬುಕ್ ಆಪ್ ರೆಕಾರ್ಡ್ ಸಿಬ್ಬಂದಿಗೆ ತಮ್ಮ ಮಗನ ಬಗ್ಗೆ ಮಾಹಿತಿ ನೀಡಿದ್ದರು.

ಇಂಡಿಯಾ ಬುಕ್ ಆಪ್ ರೆಕಾರ್ಡ್ ತಂಡದ ಸೂಚನೆ ಮೇರೆಗೆ ವಿಡಿಯೋ ಮಾಡಿ ಕಳುಹಿಸಿದ್ದರು. ಐದೇ ನಿಮಿಷದಲ್ಲಿ 310 ಶಬ್ದಗಳ ಸ್ಪೆಲ್ಲಿಂಗ್​ನ್ನು ಹೇಳಿದ್ದನ್ನು ಪರಿಗಣಿಸಿದ್ದ ತಂಡ, ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಸೇರಿಸಿತ್ತು. ಇನ್ನು ಮಗನ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ಭಾಗವೆನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಕಲಬುರಗಿಯ ಬಾಲಕನೋರ್ವ ಇದೀಗ ಏಷಿಯಾ ಬುಕ್ ಆಪ್ ರೆಕಾರ್ಡ್​ಗೆ ಸೇರಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಸಾಧನೆ ಮಾಡುವ ಮನಸ್ಸಿದ್ದರೆ, ಸಾವಿರ ದಾರಿಗಳು ಇರುತ್ತವೆ ಎನ್ನುವುದನ್ನು ದ್ರುವಂತ್ ಮಾಡಿ ತೋರಿಸಿದ್ದಾನೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 am, Tue, 15 August 23