AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರಿಯಾದಲ್ಲಿ ಏನೇ ಸಮಸ್ಯೆ ಇದ್ದರೂ ಮನೆಯಲ್ಲೇ ಕುಳಿತುಕೊಂಡು ದೂರು ನೀಡಿ; ರಾಜ್ಯದಲ್ಲೇ ಮೊದಲ ಪ್ರಯತ್ನಕ್ಕೆ ಕಲಬುರಗಿಯಲ್ಲಿ ಚಾಲನೆ

Kalaburagi Connect; ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ರಾಜ್ಯದ ವಿನೂತನ ಮತ್ತು ಮೊದಲ ಪ್ರಯತ್ನವಾಗಿ ಆರಂಭಿಸಿರುವ ಕಲಬುರಗಿ ಕನೆಕ್ಟ್​​​ಗೆ ಚಾಲನೆ ಸಿಕ್ಕಿದೆ. ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಐಟಿಬಿಟಿ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಕನೆಕ್ಟ್​​​ಗೆ ಚಾಲನೆ ನೀಡಿದ್ದಾರೆ.

ಏರಿಯಾದಲ್ಲಿ ಏನೇ ಸಮಸ್ಯೆ ಇದ್ದರೂ ಮನೆಯಲ್ಲೇ ಕುಳಿತುಕೊಂಡು ದೂರು ನೀಡಿ; ರಾಜ್ಯದಲ್ಲೇ ಮೊದಲ ಪ್ರಯತ್ನಕ್ಕೆ ಕಲಬುರಗಿಯಲ್ಲಿ ಚಾಲನೆ
ಕಲಬುರಗಿ ಕನೆಕ್ಟ್​ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 15, 2023 | 3:15 PM

Share

ಕಲಬುರಗಿ, ಆಗಸ್ಟ್ 15: ಅನೇಕರಿಗೆ ತಮ್ಮ ಏರಿಯಾಕ್ಕೆ ಸರಿಯಾಗಿ ನೀರು ಬರ್ತಿಲ್ಲಾ, ಬೀದಿ ದೀಪ ಹಾಳಾಗಿದೆ, ಯಾರೂ ಸರಿ ಮಾಡ್ತಿಲ್ಲಾ, ರಸ್ತೆ ಹಾಳಾಗಿದೆ ಅನ್ನೋದು ಸೇರಿದಂತೆ ಹತ್ತಾರು ದೂರುಗಳು (Complaints) ಇರುತ್ತವೆ. ತಮ್ಮ ದೂರುಗಳನ್ನು ಹೇಳಲು, ತಮಗಾಗುತ್ತಿರುವ ತೊಂದರೆಯನ್ನು ತಿಳಿಸಲು ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಅನೇಕರು ಸುಸ್ತಾಗುತ್ತಾರೆ. ಸಚಿವರನ್ನು ಬೇಟಿಯಾಗಲು ಕೂಡಾ ಆಗದೇ ಇದ್ದಾಗ, ಮೇಲಾಧಿಕಾರಿಗಳು ಸಿಗದೇ ಇದ್ದಾಗ ಸಮಸ್ಯೆಗೆ ಪರಿಹಾರ ಹೇಗೆ ಅನ್ನೋದು ಗೊತ್ತಾಗದೇ ಕಂಗಾಲಾಗುತ್ತಾರೆ. ಆದ್ರೆ ರಾಜ್ಯದಲ್ಲಿ ಮೊದಲ ಬಾರಿಗೆ, ಕಲಬುರಗಿಯಲ್ಲಿ ‘ಕಲಬುರಗಿ ಕನೆಕ್ಟ್ (Kalaburagi Connect)’ ಮೂಲಕ ಜನರು ತಾವಿದ್ದಲ್ಲಿಂದಲೇ ದೂರನ್ನು ನೀಡಬಹುದು, ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬಹುದು. ಜೊತೆಗೆ ತಾವು ನೀಡಿದ ದೂರಿನ ಸ್ಥಿತಿಗತಿ ಬಗ್ಗೆ ಕೂಡಾ ಮನಯೆಲ್ಲಿಯೇ ಇದ್ದು ತಿಳಿದುಕೊಳ್ಳಬಹುದು.

ರಾಜ್ಯದಲ್ಲಿ ವಿನೂತನ ಪ್ರಯೋಗಕ್ಕೆ ಕಲಬುರಗಿಯಲ್ಲಿ ಚಾಲನೆ

ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ರಾಜ್ಯದ ವಿನೂತನ ಮತ್ತು ಮೊದಲ ಪ್ರಯತ್ನವಾಗಿ ಆರಂಭಿಸಿರುವ ಕಲಬುರಗಿ ಕನೆಕ್ಟ್​​​ಗೆ ಚಾಲನೆ ಸಿಕ್ಕಿದೆ. ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಐಟಿಬಿಟಿ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಕನೆಕ್ಟ್​​​ಗೆ ಚಾಲನೆ ನೀಡಿದ್ದಾರೆ. ಆ ಮೂಲಕ ಜನರು ತಮ್ಮ ಮನೆಯಲ್ಲಿಯೇ ಕುಳಿತು ತಮ್ಮ ದೂರುಗಳನ್ನು ಸಲ್ಲಿಸಲು ಅನಕೂಲ ಕಲ್ಪಿಸುವ ವಿನೂತನ ಪ್ರಯೋಗಕ್ಕೆ ಇಂದು ಕಲಬುರಗಿಯಲ್ಲಿ ಚಾಲನೆ ಸಿಕ್ಕಿದೆ.

ಹೌದು ಅನೇಕ ಜನರು, ತಮ್ಮ ದೂರುಗಳನ್ನು ಸಲ್ಲಿಸಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಾರೆ. ಸಚಿವರು ಜಿಲ್ಲೆಗೆ ಬಂದಾಗ, ಮುಂಜಾನೆಯಿಂದ ಸಂಜೆವರಗೆ ಕಾದು, ಸಚಿವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನೂರಾರು ಜನರಿಂದ ಅಹವಾಲು ಸ್ವೀಕರಿಸೋ ಸಚಿವರು ಕೂಡಾ, ಮನವಿ ಪಡೆದು ಸುಮ್ಮನಾಗುವ ಅನೇಕ ಘಟನೆಗಳೇ ಹೆಚ್ಚಾಗಿರುತ್ತವೆ. ಹೀಗಾಗಿ ಜನರ ದೂರುಗಳು ತಲುಪಬೇಕಾದ ಅಧಿಕಾರಿಗಳಿಗೆ ತಲುಪಿದವಾ, ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತಾ ಅನ್ನೋದು ಹೆಚ್ಚಿನ ಸಮಯದಲ್ಲಿ ಗೊತ್ತಾಗೋದಿಲ್ಲಾ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ತೆಗ್ಗಳಿ, ವಿಶೇಷ ಪ್ರಯತ್ನವಹಿಸಿ, ಕಲಬುರಗಿ ಕನೆಕ್ಟ್ ಆರಂಭಿಸಿದ್ದಾರೆ.

ಕಲಬುರಗಿ ಕೆನಕ್ಟ್ ಹೇಗೆ ಕೆಲಸ ಮಾಡುತ್ತೆ?

ಕಲಬುರಗಿ ಕನೆಕ್ಟ್​​​ನಲ್ಲಿ ಎಲ್ಲಡೆ ಕ್ಯೂ ಆರ್ ಕೂಡ ಸಿಗುವಂತಹ ವ್ಯವಸ್ಥೆ ಮಾಡಿದ್ದು, ಆ ಕ್ಯೂ ಆರ್ ಕೋಡ್ ಅನ್ನು ಜನರು, ತಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿದ್ರೆ ಸಾಕು, ಕಲಬುರಗಿ ಕನೆಕ್ಟ್ ಲಿಂಗ್ ಓಪನ್ ಆಗುತ್ತೆ. ಅಲ್ಲಿ ಸಾರ್ವನಿಜಕರು ತಮ್ಮ ಹೆಸರು, ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಂಡು, ತಮ್ಮ ಸಮಸ್ಯೆಗಳನ್ನು ಉಲ್ಲೇಖಿಸಿದ್ರೆ ಸಾಕು. ಕಲಬುರಗಿ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಸಿಬ್ಬಂದಿ, ಜನರಿಂದ ಬಂದಿರುವ ದೂರುಗಳನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಮೇಲಾಧಿಕಾರಿಗಳು, ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರಿನ ಮಾಹಿತಿ ನೀಡಿ, ಅರ್ಜಿ ವಿಲೇವಾರಿ ಮಾಡಲು ಸೂಚನೆ ನೀಡ್ತಾರೆ. ಅರ್ಜಿ ವಿಲೇವಾರಿಯಾದ ನಂತರ ದೂರು ನೀಡಿದ ವ್ಯಕ್ತಿಗಳಿಗೆ ಅರ್ಜಿ ವಿಲೇವಾರಿಯಾಗಿದ್ದರ ಬಗ್ಗೆ ಮಾಹಿತಿ ಕೂಡಾ ಬರುತ್ತದೆ. ಜೊತೆಗೆ ಅರ್ಜಿದಾರರು ಕೂಡಾ ತಾವು ನೀಡಿರೋ ಅರ್ಜಿ, ದೂರಿನ ಸ್ಥಿತಿಗತಿಯನ್ನು ಕೂಡಾ ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: 77th independence day: ಪದ್ಮನಾಭನಗರ ನಿವಾಸದಲ್ಲೇ ಬಾವುಟ ಹಾರಿಸಿ, ಸ್ವಾತಂತ್ರ್ಯ ಸಂಭ್ರಮಿಸಿದ ಮಾಜಿ ಪ್ರಧಾನಿ

ಇನ್ನು ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕೂಡಾ, ಪ್ರತಿನಿತ್ಯ ಮತ್ತು ಆಗಾಗ ಕೂಡಾ ಎಷ್ಟು ಅರ್ಜಿ ಗಳು ಬಂದಿದ್ದಾವೆ, ಎಷ್ಟು ಅರ್ಜಿಗಳು ವಿಲೇವಾರಿಯಾಗಿವೆ, ಬಾಕಿ ಇರೋ ಅರ್ಜಿಗಳು ಎಷ್ಟು, ಯಾವ ರೀತಿಯ ಅರ್ಜಿಗಳು ಬಾಕಿ ಉಳದಿವೆ, ಅವುಗಳಿಗೆ ಕಾರಣವೇನು ಅನ್ನೋದನ್ನು ಕೂಡಾ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅಧಿಕಾರಿಗಳ ಸಭೆಯಲ್ಲಿ ಅವುಗಳ ಬಗ್ಗೆ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲು ಸಾದ್ಯವಾಗವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇನ್ನು ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು, ಸುಲಭವಾಗಿ ಜನರು ತಮ್ಮ ದೂರನ್ನು ಸಲ್ಲಿಸಲು ಕಲಬುರಗಿ ಕನೆಕ್ಟ್ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಇದಕ್ಕೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದರ ಮೇಲೆ ಅದರ ಪ್ರಯೋಜನ ಎಷ್ಟಾಗುತ್ತದೆ ಅನ್ನೋದು ಮುಂದಿನ ದಿನದಲ್ಲಿ ಗೊತ್ತಾಗಲಿದೆ. ಆದ್ರೆ ಹೊಸ ಪ್ರಯತ್ನ ಸಮರ್ಪಕವಾಗಿ ಜಾರಿಯಾದ್ರೆ ಜನರಿಗೆ ಮನೆಯಲ್ಲಿಯೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುವದು ಗ್ಯಾರಂಟಿ.

ರಾಜ್ಯದಲ್ಲಿ ಹೊಸ ಪ್ರಯತ್ನವನ್ನು ಕಲಬುರಗಿಯಲ್ಲಿ ಆರಂಭಿಸಿದ್ದೇವೆ. ಸಮಪರ್ಕವಾಗಿ ಇದು ಜಾರಿಯಾದ್ರೆ ಹೆಚ್ಚಿನ ಜನರಿಗೆ ಅನಕೂಲವಾಗುತ್ತದೆ. ಕಲಬುರಗಿ ಕನೆಕ್ಟ್ ಯಶಸ್ವಿಯಾಗಿಸಲು ಎಲ್ಲರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಅಂತ ಅಧಿಕಾರಿಗಳಿಗೆ ಕೂಡಾ ತಿಳಿಸಲಾಗಿದೆ.ಹೊಸ ಯೋಚನೆ, ಖಂಡಿತ ಯಶಸ್ವಿಯಾಗುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​