ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಕೆಎಸ್ಎಸ್ ಅಧಿಕಾರಿ ಶಂಕರಣ್ಣ 7.50 ಲಕ್ಷ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊವಿಡ್ ಸುರಕ್ಷಾ ಚಕ್ರ ಹೆಲ್ಪ್ಲೈನ್ ಮಾಲೀಕ ಶರಣು ಎಂಬುವರ ಬಳಿ ಶೇಕಡಾ 2ರಷ್ಟು ಕಮಿಷನ್ಗೆ ಬೇಡಿಕೆ ಇಟ್ಟಿದ್ದರು.
ಕೊವಿಡ್ 2ನೇ ಅಲೆಯಲ್ಲಿ ಹೆಲ್ಪ್ಲೈನ್ ಪ್ರಾರಂಭಿಸಲಾಗಿತ್ತು. 50 ಲಕ್ಷಕ್ಕೂ ಹೆಚ್ಚಿನ ಬಿಲ್ ಪಾವತಿ ಬಾಕಿ ಉಳಿದಿತ್ತು. ಈ ಪೈಕಿ 2ನೇ ಕಂತಿನ ಹಣ ಬಿಡುಗಡೆಗೆ ಪಾಲಿಕೆ ಅಕೌಂಟೆಂಟ್ ಚನ್ನಪ್ಪ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಎಸಿಬಿ ಅಧಿಕಾರಿಗಳಿಗೆ ಶರಣು ದೂರು ನೀಡಿದ್ದ. ಇಂದು ಸಂಜೆ ಹಣ ಪಡೆಯುವಾಗ ಎಸಿಬಿ ತಂಡ ದಾಳಿ ನಡೆಸಿ ಆಯುಕ್ತ ಶಂಕರಣ್ಣ, ಅಕೌಂಟೆಂಟ್ ಚನ್ನಪ್ಪನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ತುಮಕೂರು: ಈ ಅಪಘಾತದಲ್ಲಿ ಕೇವಲ ಸಣ್ಣಪುಟ್ಟ ಗಾಯಗಳಿಂದ ಪಾರಾದ ಬೈಕ್ ಸವಾರರು ನಿಜಕ್ಕೂ ಅದೃಷ್ಟವಂತರು!
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಚೆನ್ನಪ್ಪ ಶರಣು ಅನ್ನೋರಿಂದ 14,500 ರೂಪಾಯಿ ಲಂಚ ಪಡೆದಿದ್ದ. ಶರಣು ಹಣ ನೀಡಿರೋ ಬಗ್ಗೆ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳ್ ಗೆ ಮಾಹಿತಿ ನೀಡಿದ್ದ. ಆಗ ಮನೆಗೆ ಹಣ ತಗೆದುಕೊಂಡು ಬಂದು ಕೊಡುವಂತೆ ಶಂಕರಣ್ಣ ವನಿಕ್ಯಾಳ್ ಹೇಳಿದ್ದರು. ಈ ವೇಳೆ ಎಸಿಬಿ ಪೊಲೀಸರು ಶಂಕರಣ್ಣ ವನಿಕ್ಯಾಳ್ ಮತ್ತು ಚೆನ್ನಪ್ಪನನ್ನು ಬಂಧಿಸಿದ್ದಾರೆ. ಚೆನ್ನಪ್ಪನನ್ನು ಟ್ರ್ಯಾಪ್ ಮಾಡಿದಾಗ ಒಂದು ಲಕ್ಷ ನಲವತ್ತೆರಡು ಸಾವಿರ ರೂಪಾಯಿ ಕೂಡಾ ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಸಂಗ್ರಹಿಸಿದ್ದ ಲಂಚದ ಹಣ ಪತ್ತೆಯಾಗಿದೆ. ಇದನ್ನೂ ಓದಿ: ಅಂಡರ್ ಪಾಸ್ ನಲ್ಲಿ 10 ದಿನಗಳಿಂದ ನಿಂತ ನೀರು ಕೊಳೆತು ನಾರುತ್ತಿದ್ದರೂ ಕ್ಯಾರೇ ಅನ್ನದ ದಾವಣಗೆರೆ ನಗರಸಭೆ ಸಿಬ್ಬಂದಿ
Published On - 11:15 pm, Wed, 1 June 22