PSI Recruitment Scam: ಪ್ರಕರಣದ‌ ತನಿಖೆ ಮುಗಿದ ಬಳಿಕ ಪರೀಕ್ಷಾ ದಿನಾಂಕ ತಿಳಿಸುತ್ತೇವೆ: ಆರಗ ಜ್ಞಾನೇಂದ್ರ

ಕಿಂಗ್​ಪಿನ್ ಹೆಸರು ಹೇಳಿದ್ರೆ ಸರ್ಕಾರ ಬಿದ್ದು ಹೋಗುತ್ತೆ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಬರೀ ಹಿಟ್ ಆ್ಯಂಡ್ ರನ್‌ ಮಾಡಬಾರದು. ಕಿಂಗ್​ಪಿನ್ ಯಾರು ಅಂತಾ ಹೇಳಿ.

PSI Recruitment Scam: ಪ್ರಕರಣದ‌ ತನಿಖೆ ಮುಗಿದ ಬಳಿಕ ಪರೀಕ್ಷಾ ದಿನಾಂಕ ತಿಳಿಸುತ್ತೇವೆ: ಆರಗ ಜ್ಞಾನೇಂದ್ರ
ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ
Edited By:

Updated on: May 06, 2022 | 5:14 PM

ಕಲಬುರಗಿ: ಪರೀಕ್ಷಾ ಅಕ್ರಮ ಸಂಬಂಧ ನಿನ್ನೆ DySP, ಸಿಪಿಐ ಸೇರಿದಂತೆ ಪ್ರಕರಣದಲ್ಲಿ ಇದುವರೆಗೆ ಒಟ್ಟು 47 ಜನರನ್ನು ಬಂಧಿಸಲಾಗಿದೆ. ಪಿಎಸ್​ಐ ದೈಹಿಕ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಹೀಗಾಗಿ PSI ಮರು ಪರೀಕ್ಷೆ ಘೋಷಣೆ ಮಾಡಲಾಗಿದೆ. ಪ್ರಕರಣದ‌ ತನಿಖೆ ಮುಗಿದ ಬಳಿಕ ಪರೀಕ್ಷಾ ದಿನಾಂಕ ತಿಳಿಸ್ತೇವೆ ಎಂದು ಕಲಬುರಗಿಯಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಒಂದೇ ಸೆಂಟರ್​ ಅಲ್ಲ ಬೇರೆಬೇರೆ ಸೆಂಟರ್​​ಗಳಲ್ಲಿ ಅಕ್ರಮ ಆಗಿದೆ. ನಾವು ಯಾರನ್ನೂ ಬಿಡುವುದಿಲ್ಲ, ಕ್ರಮ ತೆಗೆದುಕೊಳ್ಳುತ್ತೇವೆ. ಅಕ್ರಮ ನಡೆದಿರುವ ಕೇಂದ್ರಗಳಲ್ಲಿ ಕರ್ತವ್ಯಕ್ಕಿದ್ದವರ ವಿಚಾರಣೆ ಮಾಡಲಾಗುತ್ತಿದೆ. ಪರೀಕ್ಷಾ ಅಕ್ರಮದಲ್ಲಿ ಇಷ್ಟು ಆಳವಾದ ತನಿಖೆ ಯಾರೂ ಮಾಡಿಲ್ಲ. ನಮ್ಮ ಸರ್ಕಾರ ಪ್ರಕರಣದ ಸಮಗ್ರವಾದ ತನಿಖೆ ಮಾಡುತ್ತಿದೆ. ಪ್ರಕರಣದಲ್ಲಿ ನಮ್ಮ ಸರ್ಕಾರ ಯಾರನ್ನೂ ಬಿಡುವುದಿಲ್ಲ. ಪರೀಕ್ಷಾ ಅಕ್ರಮದಿಂದ ಅಧಿಕಾರಿಗಳನ್ನ ವರ್ಗಾವಣೆ ಮಾಡಿಲ್ಲ. ಅಧಿಕಾರಿಗಳು ಬದಲಾವಣೆ ಬಯಸಿದ್ದಕ್ಕೆ ವರ್ಗಾಯಿಸಲಾಗ್ತಿದೆ. ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಮನವಿ ಮಾಡ್ತೇವೆ. ಅಧಿಕಾರಿಗಳ ತಪ್ಪಿದ್ದರೆ ವರ್ಗಾವಣೆ ಅಷ್ಟೇ ಅಲ್ಲ ಶಿಕ್ಷೆ ನೀಡ್ತೇವೆ. ಮುಂದಿನ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ನಡೆಸಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಪ್ರಿಯಾಂಕ್​ ಖರ್ಗೆ ಬಳಿ ದಾಖಲೆ ಇದ್ದರೆ ನೀಡಬಹುದಲ್ಲಾ? ಶಾಸಕ ಪ್ರಿಯಾಂಕ್ ಖರ್ಗೆಯ ಬೆಂಬಲಿಗರೆ ಕಿಂಗ್​ಪಿನ್. ದಾಖಲೆ ಇಟ್ಟುಕೊಂಡು ಏನು ಮಾಡುತ್ತಾರೆ ಎಂದು ಪ್ರಿಯಾಂಕ್​ ಖರ್ಗೆ ವಿರುದ್ಧ ಕಿಡಿಕಾರಿದರು. ನೋಟಿಸ್​ ನೀಡಿದ್ರೂ ಬಂದು ವಿಚಾರಣೆ ಹಾಜರಾಗುವುದಿಲ್ಲ. ಹೀಗಿದ್ರು ಸಹ ಸಿಐಡಿ‌ ಮೂರು ನೋಟಿಸ್ ನೀಡಿದ್ರು ಪ್ರಿಯಾಂಕ್ ಖರ್ಗೆ ಉತ್ತರ ಕೊಡಲು ಬರ್ತಿಲ್ಲ. ಖರ್ಗೆಯವರು ಓರ್ವ ಮಾಜಿ‌ ಮಂತ್ರಿ ಆಗಿದ್ದಾರೆ. ಸರ್ಕಾರಕ್ಕಿಂತ ಹೆಚ್ಚಿನ ಮಾಹಿತಿ ಇರುವದ್ದಾಗಿ ಹೇಳಿದ್ದಾರೆ ನಮಗೆ ಮಾಹಿತಿ ಸಿಕ್ಕಿದ್ದರಿಂದ ನಾವು ತನಿಖೆ ಮಾಡುತ್ತಿದ್ದೇವೆ. ಈ ವಿಚಾರದಲ್ಲೂ ರಾಜಕೀಯ ಮಾಡಬಾರದು ಎಂದರು.

ಕಿಂಗ್​ಪಿನ್ ಹೆಸರು ಹೇಳಿದ್ರೆ ಸರ್ಕಾರ ಬಿದ್ದು ಹೋಗುತ್ತೆ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಬರೀ ಹಿಟ್ ಆ್ಯಂಡ್ ರನ್‌ ಮಾಡಬಾರದು. ಕಿಂಗ್​ಪಿನ್ ಯಾರು ಅಂತಾ ಹೇಳಿ. ದಾಖಲೆಗಳು ಇದ್ರೆ ನಮ್ಮಗೆ ಕೊಡಲಿ,‌ ನಾವು ತನಿಖೆ ನಡೆಸುತ್ತೇವೆ. ಸರ್ಕಾರ ಬಿದ್ದರು ಸಹ ಪರ್ವಾಗಿಲ್ಲ. ಆರೋಪಿ ವಿರುದ್ಧ ಸರ್ಕಾರ ಕ್ರಮ ಜರುಗಿಸಲು ಸಿದ್ದ ಎಂದು ಹೇಳಿದರು.

ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.