ರಾಮನವಮಿ ಆಚರಿಸಿದ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿನ್ನೆ ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆಯಂತೆ. ವಿದ್ಯಾರ್ಥಿಗಳಾದ ವಿಶ್ವನಾಥ್, ನರೇಂದ್ರಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರಗಿ: ಏಪ್ರಿಲ್ 10ರಂದು ರಾಮನವಮಿ(Rama Navami) ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ(Assault on Students) ನಡೆಸಿರುವ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿನ್ನೆ ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆಯಂತೆ. ವಿದ್ಯಾರ್ಥಿಗಳಾದ ವಿಶ್ವನಾಥ್, ನರೇಂದ್ರಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಖಂಡಿಸಿ ಕಲಬುರಗಿಯಲ್ಲಿ ಇಂದು ಎಬಿವಿಪಿ ಪ್ರತಿಭಟನೆ ನಡೆಯಲಿದೆ. ಇನ್ನು ಘಟನೆ ಸಂಬಂಧ ರಾಹುಲ್, ತೆಲಂಗಾಣದ ಸಾದಿಕ್, ರಾಹುಲ್ ಸೇರಿ ಮೂವರು ವಿದ್ಯಾರ್ಥಿಗಳ ವಿರುದ್ಧ ನರೋಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹಲ್ಲೆಗೊಳಗಾದ ಇಬ್ಬರು ಎಬಿವಿಪಿ ಕಾರ್ಯಕರ್ತರಾಗಿದ್ದಾರೆ ಘಟನೆ ಸಂಬಂಧ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ವಿವಿ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಮನವಮಿ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ರಾಹುಲ್, ಪ್ರದೀಪ್, ಸಾದಿಕ್, ರಾಹುಲ್ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ಇಬ್ಬರು ಎಬಿವಿಪಿ ಕಾರ್ಯಕರ್ತರಾಗಿದ್ದಾರೆ ಎಂದಿದ್ದಾರೆ.
ಕೇಂದ್ರೀಯ ವಿವಿಯನ್ನು ದೆಹಲಿಯ ಜೆಎನ್ಯು ವಿವಿ ಮಾಡಲು ಹೊರಟಿದ್ದಾರೆ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರೋರು ಎಡಪಂಥೀಯ ಸಂಘಟನೆ ಸೇರಿದವರಾಗಿದ್ದಾರೆ. ಅವರೆಲ್ಲಾ ಕೇಂದ್ರೀಯ ವಿವಿಯನ್ನು ದೆಹಲಿಯ ಜೆಎನ್ಯು ವಿವಿ ಮಾಡಲು ಹೊರಟಿದ್ದಾರೆ. ಹಲ್ಲೆ ಮಾಡಿರೋ ಎಡಪಂಥೀಯ ಸಂಘಟನೆಗಳಿಗೆ ಕೆಲ ಉಪನ್ಯಾಸಕರು ಕುಮ್ಮಕ್ಕು ಕೊಟ್ಟಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಎಬಿವಿಪಿ ಮುಖಂಡ ಪೃಥ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ನಗರದಲ್ಲಿ ರಾಮನವಮಿ ಪ್ರಯುಕ್ತ ಶೋಭಾಯಾತ್ರೆ ಕಲಬುರಗಿ ನಗರದಲ್ಲಿ ನಿನ್ನೆ ಶ್ರೀರಾಮನವಮಿ ಪ್ರಯುಕ್ತ ಭರ್ಜರಿ ಕಾರ್ಯಕ್ರಮ ಜರುಗಿದೆ. ಕಲಬುರಗಿ ನಗರದಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ ಆದೇಶ ಮಾಡಿದ್ದಾರೆ. ಕಲಬುರಗಿ ನಗರದಲ್ಲಿ ರಾಮತೀರ್ಥದಿಂದ ಶ್ರೀರಾಮಶೋಭಾಯಾತ್ರೆ ನಡೆದಿದೆ. ಮೆರವಣಿಗೆಯಲ್ಲಿ ರಾಮ ಭಕ್ತರು ಕುಣಿದು ಕುಪ್ಪಳಿಸಿದ್ದಾರೆ. ಇನ್ನು ವಿಶೇಷವೆಂದರೆ ಶೋಭಾಯಾತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿರೋ ಅನೇಕ ಮಹನೀಯರ ಭಾವಚಿತ್ರವನ್ನೂ ಮೆರವಣಿಗೆ ಮಾಡಲಾಗಿದೆ. ಬಿಪಿನ್ ರಾವತ್, ಲತಾ ಮಂಗೇಶ್ಕರ್, ಪುನಿತ್ ರಾಜಕುಮಾರ ಮತ್ತು ಹಿಂದು ಕಾರ್ಯಕರ್ತ ಹರ್ಷ ಭಾವಚಿತ್ರಗಳು ರಾರಾಜಿಸಿವೆ.
ಕಲಬುರಗಿಯಲ್ಲಿ ನಡೆದ ಶ್ರೀರಾಮನವಮಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶೋಭೆಯಾತ್ರೆ ಹಿನ್ನೆಲೆ ಮುಸ್ಲಿಂ ಬಾಂಧವರು ಜ್ಯೂಸ್, ತಂಪು ಪಾನಿಯ ವ್ಯವಸ್ಥೆ ಮಾಡಿದ್ದಾರೆ. ಕಲಬುರಗಿ ನಗರದ ಖಾದ್ರಿ ಚೌಕ್ ನಲ್ಲಿ ತಪ್ಪು ಪಾನಿಯ ವ್ಯವಸ್ಥೆ ಮಾಡಿದ್ದಾರೆ. ಶ್ರೀರಾಮನ ಭಕ್ತರಿಗಾಗಿ ಜ್ಯೂಸ್ ತಂಪು ಪಾನಿಯ ವಿತರಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರಾಮ ನವಮಿಯಂದು ಮುಸ್ಲಿಂ ಬಾಂಧವರು ಇದೇ ರೀತಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: ಜೆಎನ್ಯು ಗುಂಪು ಘರ್ಷಣೆ: ಮಾಂಸಾಹಾರ ಪೂರೈಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬೈಡನ್ ವರ್ಚುವಲ್ ಸಭೆ ಇಂದು
Published On - 7:42 am, Mon, 11 April 22