ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ? ಚಿತ್ತಾಪುರ ಪೊಲೀಸರ ಚಿತ್ತ ಶವಪರೀಕ್ಷೆ ವರದಿಗಾಗಿ ಕಾಯುತ್ತಿರುವುದು ಏಕೆ?

Chittapur police: ಸಹೋದರನದ್ದು ಸಹಜ ಸಾವಲ್ಲಾ, ಬದಲಾಗಿ ಕೊಲೆ ಅಂತಿದ್ದಾರೆ ಸಿದ್ದಣ್ಣನ ನಾಲ್ವರು ಸಹೋದರಿಯರು. ಮೃತ ಪಡುವ ಒಂದು ದಿನಕ್ಕೆ ಮುಂಚೆ, ಸ್ವತಃ ಸಿದ್ದಣ್ಣ ತಮ್ಮ ಸಹೋದರಿಯರಿಗೆ ಪೋನ್ ಮಾಡಿದ್ದನಂತೆ. ತನಗೆ ಪತ್ನಿ ಮತ್ತು ಅವರ ಮನೆಯವರು ಹೊಟ್ಟೆ ಸೇರಿದಂತೆ ಅನೇಕ ಕಡೆ ಹೊಡೆದಿದ್ದಾರೆ ಅಂತ ಹೇಳಿದ್ದನಂತೆ.

ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ? ಚಿತ್ತಾಪುರ ಪೊಲೀಸರ ಚಿತ್ತ ಶವಪರೀಕ್ಷೆ ವರದಿಗಾಗಿ ಕಾಯುತ್ತಿರುವುದು ಏಕೆ?
ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 17, 2023 | 6:33 PM

ಅಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಆತ ತನ್ನ ಪತಿಯಾಗಿದ್ದು, ಸಹಜ ಸಾವು ಅಂತ ಪತ್ನಿ ಹೇಳಿದರೆ, ಸಹೋದರಿಯರು ಮಾತ್ರ ತಮ್ಮ ಸಹೋದರದ್ದು ಕೊಲೆ ಅಂತಿದ್ದಾರೆ. ತಮ್ಮ ಸಹೋದರನನ್ನು ಆತನ ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಕೊಲೆ ಮಾಡಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ಈ ಮಧ್ಯೆ ಪೊಲೀಸರು (Chittapur police) ಆರೋಪಿಗಳನ್ನು ಮಾತ್ರ ಬಂಧಿಸುತ್ತಿಲ್ಲ (Postmortem ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೈ ಮುಗಿದು ಮನವಿ ಮಾಡುತ್ತಾ, ನಮಗೆ ಎಲ್ಲಿಯೂ ನ್ಯಾಯ ಸಿಗ್ತಿಲ್ಲಾ, ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಕಣ್ಣ ಮುಂದೆಯೆ ಆರೋಪಿಗಳು (murder) ಇದ್ದರೂ ಯಾರನ್ನೂ ಬಂಧಿಸುತ್ತಿಲ್ಲ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತ ಮನವಿ ಮಾಡ್ತಿರುವವರು ಕಲಬುರಗಿ ಜಿಲ್ಲೆಯ ಶಹಬಾದ್ ನಿವಾಸಿಗಳು. ಇನ್ನು ಇವರ ನೋವಿಗೆ ಕಾರಣವಾಗಿದ್ದು ಇವರ ಸಹೋದರನ ಸಾವು. ಹೌದು ಕಲಬುರಗಿ (Kalaburgi) ಜಿಲ್ಲೆಯ ಶಹಬಾದ್ ಪಟ್ಟಣದ ನಿವಾಸಿಯಾಗಿದ್ದ ಸಿದ್ದಣ್ಣ ಆಂದೇಲಿ ಅನ್ನೋ 38 ವರ್ಷದ ವ್ಯಕ್ತಿ 2023 ರ ಜನವರಿ 15 ರಂದು ಮೃತಪಟ್ಟಿದ್ದಾನೆ. ಕೆಲ ದಿನಗಳಿಂದ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಪತ್ನಿಯ ತವರು ಮನೆಯಲ್ಲಿಯೇ ವಾಸವಾಗಿದ್ದ ಸಿದ್ದಣ್ಣ ಮೃತಪಟ್ಟಿದ್ದಾನೆ. ಗೋಡೆ ಮೇಲಿಂದ ಬಿದ್ದು ಸತ್ತಿದ್ದಾನೆ ಅಂತ ಪತ್ನಿ ಹೇಳಿದ್ದಾಳೆ.

ಆದ್ರೆ ಸಹೋದರನದ್ದು ಸಹಜ ಸಾವಲ್ಲಾ, ಬದಲಾಗಿ ಕೊಲೆ ಅಂತಿದ್ದಾರೆ ಸಿದ್ದಣ್ಣನ ನಾಲ್ವರು ಸಹೋದರಿಯರು. ಮೃತ ಪಡುವ ಒಂದು ದಿನಕ್ಕೆ ಮುಂಚೆ, ಸ್ವತಃ ಸಿದ್ದಣ್ಣ ತಮ್ಮ ಸಹೋದರಿಯರಿಗೆ ಪೋನ್ ಮಾಡಿದ್ದನಂತೆ. ತನಗೆ ಪತ್ನಿ ಮತ್ತು ಅವರ ಮನೆಯವರು ಹೊಟ್ಟೆ ಸೇರಿದಂತೆ ಅನೇಕ ಕಡೆ ಹೊಡೆದಿದ್ದಾರೆ ಅಂತ ಹೇಳಿದ್ದನಂತೆ. ಇನ್ನು ಸಿದ್ದಣ್ಣನ ಪತ್ನಿ ಭೀಮಾಬಾಯಿ ಕೂಡಾ ನಿಮ್ಮ ಸಹೋದರನನ್ನು ಕರೆದುಕೊಂಡು ಹೋಗಿ ಅಂತ ಹೇಳಿದ್ದಳಂತೆ. ಆದ್ರೆ ಹೀಗೆ ಹೇಳಿದ ಮಾರನೇ ದಿನವೇ, ಸಿದ್ದಣ್ಣ ಮೃತಪ್ಟಟಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದ್ದು, ಸಿದ್ದಣ್ಣನ ಪತ್ನಿ ಮತ್ತು ಅವರ ಕುಟುಂಬದವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಅಂತ ಸಿದ್ದಣ್ಣನ ಸಹೋದರಿಯರು ಆರೋಪಿಸುತ್ತಿದ್ದಾರೆ.

ಇನ್ನು ಸಿದ್ದಣ್ಣ ಮತ್ತು ಭೀಮಬಾಯಿ ಮದುವೆಯಾಗಿ 15 ವರ್ಷವಾಗಿದೆಯಂತೆ. ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಸಿದ್ದಣ್ಣ ಮತ್ತು ಭೀಮಬಾಯಿ ಅನೇಕ ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದುಕೊಂಡು, ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದರಂತೆ. ಆದ್ರೆ ಬೆಂಗಳೂರಲ್ಲಿ ಇರುವಾಗ, ಭೀಮಬಾಯಿಗೆ ಶರಣು ಅನ್ನೋ ಯುವಕ ಪರಿಚಯವಾಗಿದ್ದನಂತೆ.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ನಿವಾಸಿಯಾಗಿದ್ದ ಶರಣು ಜೊತೆ ಭೀಮಬಾಯಿ ಅಕ್ರಮ ಸಂಬಂಧ ಹೊಂದಿದ್ದಳು. ಪತಿಗಿಂತ, ಪ್ರಿಯಕರನ ಜೊತೆಯೇ ಭೀಮಬಾಯಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಸಿದ್ದಣ್ಣ ಕೆಲಸಕ್ಕೆ ಹೋದ್ರೆ, ಮನೆಯಲ್ಲಿ ಪ್ರಿಯಕರನ ಜೊತೆ ಭೀಮಬಾಯಿ ಇರ್ತಿದ್ದಳು ಅಂತ ಮೃತ ಸಿದ್ದಣ್ಣನ ಸಹೋದರಿಯರು ಆರೋಪಿಸಿದ್ದಾರೆ.

ಇನ್ನು ಪತ್ನಿಯ ಅಕ್ರಮ ಸಂಬಂಧ ಸಿದ್ದಣ್ಣನಿಗೆ ಗೊತ್ತಾಗಿತ್ತಂತೆ. ಹೀಗಾಗಿ ಬೆಂಗಳೂರು ಬಿಟ್ಟು, ಕಲಬುರಗಿ ಜಿಲ್ಲೆಗೆ ಬಂದಿದ್ದನಂತೆ. ಆದ್ರೆ ತವರು ಮನೆಯಲ್ಲಿಯೇ ಇದ್ದ ಭೀಮಬಾಯಿ, ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಿರಲಿಲ್ಲವಂತೆ. ಇದಕ್ಕೆ ಸಿದ್ದಣ್ಣ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದನಂತೆ. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಬಂದಿದ್ದರಿಂದ, ಪತ್ನಿ ಮತ್ತು ಆಕೆಯ ಮನೆಯವರು ಸಿದ್ದಣ್ಣನನ್ನು ಕೊಲೆ ಮಾಡಿದ್ದಾರೆ ಅಂತ ಸಿದ್ದಣ್ಣನ ಸಹೋದರಿಯರು ಆರೋಪಿಸುತ್ತಿದ್ದಾರೆ.

ಇನ್ನು ಕೊಲೆ ಮಾಡಿದ ನಂತರ ಸಿದ್ದಣ್ಣನ ಪತ್ನಿ ಭೀಮಬಾಯಿ, ನಾವೇ ಕೊಲೆ ಮಾಡಿದ್ದೇವೆ. 15 ಲಕ್ಷ ಕೊಡ್ತೇವೆ ಸುಮ್ಮನಿರಿ ಅಂತ ಕೂಡಾ ಹೇಳಿದ್ದಳಂತೆ. ಆದ್ರೆ ಸಿದ್ದಣ್ಣನ ಸಹೋದರಿಯರು ಈ ಬಗ್ಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಆದರೂ ಇಲ್ಲಿಯವರಗೆ ಆರೋಪಿಗಳ ಬಂಧನವಾಗಿಲ್ಲಾ ಅಂತ ಸಿದ್ದಣ್ಣನ ಸಹೋದರಿಯರು ಆರೋಪಿಸಿದ್ದಾರೆ.

ಇನ್ನು ಸಿದ್ದಣ್ಣನದು ಕೊಲೆಯಾ ಅನ್ನೋ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಮರಣೋತ್ತವರ ವರದಿಗಾಗಿ ಕಾಯುತ್ತಿದ್ದೇವೆ. ಮರಣೋತ್ತರ ವರದಿ ಬಂದ ಮೇಲೆ ಕೊಲೆಯಾಗಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಅಂತಾ ಕಲಬುರಗಿ ಎಸ್ಪಿ ಇಶಾ ಪಂತ್ ಹೇಳುತ್ತಿದ್ದಾರೆ. ಬಾಳಿ ಬದುಕಬೇಕಿದ್ದ ವ್ಯಕ್ತಿ ಸಣ್ಣ ವಯಸ್ಸಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಹತ್ತಾರು ಸಂಶಯಗಳಿಗೆ ಕಾರಣವಾಗಿದೆ, ಎಲ್ಲದಕ್ಕೂ ಮರಣೋತ್ತರ ವರದಿಯೇ ಉತ್ತರ ನೀಡಲಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್