ಪಿಎಸ್​ಐ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿದ ಸಿಐಡಿ; ಒಎಂಆರ್​ ಶೀಟ್​​ಗಳನ್ನು ಎಫ್​ಎಸ್​ಎಲ್​ಗೆ ಕಳಿಸಲು ಸಿದ್ಧತೆ

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮವೀಗ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದ್ದು, ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಕೇಸ್​​ಗೆ ಸಂಬಂಧಪಟ್ಟು ಅಫಜಲ್​​ಪುರ ಬ್ಲಾಕ್​ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್​ ಪಾಟೀಲ್​​ನನ್ನು ಈಗಾಗಲೇ ಸಿಐಡಿ ಬಂಧಿಸಿದೆ.

ಪಿಎಸ್​ಐ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿದ ಸಿಐಡಿ; ಒಎಂಆರ್​ ಶೀಟ್​​ಗಳನ್ನು ಎಫ್​ಎಸ್​ಎಲ್​ಗೆ ಕಳಿಸಲು ಸಿದ್ಧತೆ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Apr 23, 2022 | 11:07 AM

ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ವಿವಿಧ ಆಯಾಮಗಳಲ್ಲಿ ವಿಚಾರಣೆ, ಪರಿಶೀಲನೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಈಗ ಅಭ್ಯರ್ಥಿಗಳ ಒಎಂಆರ್​ ಶೀಟ್​​ನ್ನು ಎಫ್​​ಎಸ್​ಎಲ್​​ಗೆ ಕಳಿಸಲು  ಅಂದರೆ ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಒಎಂಆರ್ ಕಾರ್ಬನ್​ ಶೀಟ್​​ಗಳನ್ನೂ ಸಂಗ್ರಹ ಮಾಡುತ್ತಿದ್ದಾರೆ.  ಕಾರ್ಬನ್​ ಒಎಂಆರ್ ಶೀಟ್​ ಮತ್ತು ಮೂಲ ಒಎಂಆರ್​ ಶೀಟ್​ ಎರಡನ್ನೂ ಎಫ್​ಎಸ್​ಎಲ್​​ಗೆ ಕಳಿಸಿ ಪರಿಶೀಲನೆ ನಡೆಸಲಿದ್ದು, ವರದಿಯ ಬಳಿಕವಷ್ಟೇ ಪರೀಕ್ಷೆಯಲ್ಲಿ ಎಷ್ಟರ ಮಟ್ಟಿಗೆ ಅಕ್ರಮ ನಡೆದಿದೆ ಎಂಬುದು ಗೊತ್ತಾಗುತ್ತದೆ.  

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮವೀಗ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದ್ದು, ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಕೇಸ್​​ಗೆ ಸಂಬಂಧಪಟ್ಟು ಅಫಜಲ್​​ಪುರ ಬ್ಲಾಕ್​ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್​ ಪಾಟೀಲ್​​ನನ್ನು ಈಗಾಗಲೇ ಸಿಐಡಿ ಬಂಧಿಸಿದ್ದು, ಈತನ ಸಹೋದರ ಪ್ರಕರಣದ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ಗಾಗಿ ಶೋಧ ಕಾರ್ಯ ನಡೆಯುತ್ತಿದೆ.  ಈ ಮಹಂತೇಶ್​ ಪಟೇಲ್​ ಮತ್ತು ರುದ್ರಗೌಡ ಪಟೇಲ್​ ರಾಜಕೀಯವಾಗಿ ಪ್ರಾಬಲ್ಯ ಹೊಂದುವ ಮಹದಾಶಯ ಹೊತ್ತಿದ್ದರು. ಮಹಂತೇಶ್​ ಪಟೇಲ್​​ನನ್ನು ಬಂಧಿಸಲು ಸಿಐಡಿ ಅಧಿಕಾರಿಗಳು ಹೋಗಿದ್ದಾಗ ಆತ ಅಧಿಕಾರಿಗಳಿಗೇ ಅವಾಜ್​ ಹಾಕಿದ್ದರಿಂದ ಕೊರಳು ಪಟ್ಟಿ ಹಿಡಿದು ಅರೆಸ್ಟ್​ ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇಂದು ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,  ಈಗಾಗಲೇ ಸಿಐಡಿ  ಅಧಿಕಾರಿಗಳು 13 ಆರೋಪಿಗಳನ್ನು ಬಂಧಿಸಿದ್ದಾರೆ. ಸಣ್ಣ ಮೀನುಗಳನ್ನು ಬಂಧಿಸಿದ್ದಾರೆ, ಆದರೆ ತಿಮಿಂಗಿಲಗಳು ಓಡಾಡುತ್ತಿವೆ. ಅಕ್ರಮದ ಹಣ ಮೇಲ್ಮಟ್ಟದವರೆಗೆ ಹೋಗುತ್ತಿದೆ ಎಂಬ ಮಾಹಿತಿ ಇದೆ. ಪೊಲೀಸರು ಕಲಬುರಗಿಯಲ್ಲಿ ಸಣ್ಣಪುಟ್ಟವರನ್ನು ಹಿಡಿದರೆ ಸಾಲದು. ನೇಮಕಾತಿ ಅಕ್ರಮದಲ್ಲಿ ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸಂಭಾಷಣೆಯೊಂದರ ಆಡಿಯೋವನ್ನೂ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮ; 8 ಜನ ಅರೆಸ್ಟ್, ಎಸ್ಕೇಪ್ ಆದವರಿಗಾಗಿ ತಲಾಶ್