AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?

ಬಿಡುಗಡೆ ಮಾಡಿದ ಆಡಿಯೋದಲ್ಲಿ ಮಾತಾಡಿರುವ ವ್ಯಕ್ತಿ ಹಯ್ಯಾಳಿ ದೇಸಾಯಿ ಎಂದು ಹೇಳಲಾಗುತ್ತಿದೆ. ರುದ್ರಗೌಡ ಪಾಟೀಲ್ ಜೊತೆ ಹಯ್ಯಾಳಿ ಮಾತನಾಡಿರುವ ಶಂಕೆ ಇದೆ.

PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
TV9 Web
| Updated By: sandhya thejappa|

Updated on:Apr 23, 2022 | 12:18 PM

Share

ಕಲಬರುಗಿ: PSI ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೂ, ಬಿಜೆಪಿ ಸರ್ಕಾರಕ್ಕೂ (BJP Government) ಸಂಬಂಧವಿದೆ ಎಂದು ಆರೋಪಿಸಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಇಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿದ ಆಡಿಯೋದಲ್ಲಿ ಮಾತಾಡಿರುವ ವ್ಯಕ್ತಿ ಹಯ್ಯಾಳಿ ದೇಸಾಯಿ ಎಂದು ಹೇಳಲಾಗುತ್ತಿದೆ. ರುದ್ರಗೌಡ ಪಾಟೀಲ್ ಜೊತೆ ಹಯ್ಯಾಳಿ ಮಾತನಾಡಿರುವ ಶಂಕೆ ಇದೆ. ರುದ್ರಗೌಡ ಪಾಟೀಲ್ ಪ್ರಕರಣದ ಪ್ರಮುಖ ಕಿಂಗ್​ಪಿನ್​. ಹಯ್ಯಾಳಿ ದೇಸಾಯಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ರುದ್ರಗೌಡ ಮೂಲಕವೇ  ಪರೀಕ್ಷೆ ಬರೆದಿದ್ದ ಎಂದು ಹೇಳಲಾಗುತ್ತಿದೆ. ಹಯ್ಯಾಳಿ, ಅಫಜಲಪುರ ಶಾಸಕ ಎಂವೈ ಪಾಟೀಲ್ ಗನ್​ಮ್ಯಾನ್​. ಈತ ಪಿಎಸ್ಐ ಪರೀಕ್ಷೆಯಲ್ಲಿ ಮೊದಲ ಱಂಕ್ ಪಡೆದಿದ್ದ. ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಮೊದಲ ಱಂಕ್ ಪಡೆದಿದ್ದ.

ವ್ಯಕ್ತಿ 1 – ಸರ್. ವ್ಯಕ್ತಿ 2 – ಸರ್ ಎನ. ವ್ಯಕ್ತಿ 1 – ಸರ್ ಬ್ಯಾರೇ ಕೇಳಿದಾವ ಸರ್ ಏನೋ. ವ್ಯಕ್ತಿ 2 – ಏನ್ರಿ. ವ್ಯಕ್ತಿ 1 – ಅದೇ ಎನೋ ಬಬ್ಯಾರೇ ಕೇಳಿದಿವ ರೀ, ಏನೋ ಸ್ವಲ್ಪ ಹೆಚ್ಕೆದವರು ಎನೋ ಕೋರ್ಟಿಗೆ ಹೋಗ್ಯಾರ ಏನೋ, ಹಾಂಗ್ ಹಿಂಗ್ ಅಂದರ ರೀ. ವ್ಯಕ್ತಿ 2 – ಹಲೋ ಕೋರ್ಟಿಗ ವರ್ಷ, ವರ್ಷ ಇದ್ದಿದ್ದೆ ಸರ್, ವರ್ಷ ಇದ್ದಿದ್ದೆ ಅದು ಎಲ್ಲಾ. ವ್ಯಕ್ತಿ 1 – ಹೌದು ಇಲ್ಲ ರಿ ವ್ಯಕ್ತಿ 2- ವರ್ಷ ಇದ್ದುದ್ದೆ ಅಲ್ಲ ರಿ, ಎನ್ರಿದು, ಒಬ್ಬರದ್ರೆ ಅಚಚೆಪತ ಮಾಡೆ, ಮಾಡ್ತಾರಿ. ವ್ಯಕ್ತಿ 1 – ಅಂದರ ರಿ, ಈಗ 2014ರಾಗ ಆಯ್ತಲ್ಲ ರಿ KAS ಹಾಂಗ ಆದಂಗೆ ಅಂತಾ? ವ್ಯಕ್ತಿ 2- ಏನ ಆಗಲ್ಲ ರಿ, ಎನ ಆಗಲ್ಲ ರಿ. ವ್ಯಕ್ತಿ 1 – ಹಾ.. ಹಾ.. ಹಾ.. ವ್ಯಕ್ತಿ 2- ಎಲ್ಲಿ ಇದು ಹ್ಯಾಂಗದ ಇದು, ದೊಡ್ಡ ಇದುನೆ ಅದು ಅಲ್ಲ ರೀ. ವ್ಯಕ್ತಿ 1 – ಆ ಸರ್ ವ್ಯಕ್ತಿ 2 – ಇದು ಒಂದು ದೊಡ್ಡ ಇದುನೆ ಅದ ರೀ. ವ್ಯಕ್ತಿ 1 – ಹಾ.. ರಿ ವ್ಯಕ್ತಿ 2- ಇದು 1, 2 ಆದ್ರ ಏನು ಆಗಲ್ಲರಿ, ಜಾಸ್ತಿನೇ ಆಯ್ತು, ಇದರಾಗ ಶಾಮಿಲ ಆಯ್ತು. ವ್ಯಕ್ತಿ 1 – ಹೌದು, ಹೌದು, ಹೌದು ಎಲ್ಲರು ಇದರಾಗ ಶಾಮಿಲ ಆಯ್ತು. ವ್ಯಕ್ತಿ 2- ಹು.. ಏನ ಮಾಡರು ಆಗಲ್ಲ ರಿ.. ವ್ಯಕ್ತಿ 1 – ಹಾ… ಹಾ.. ವ್ಯಕ್ತಿ 2- ಫಸ್ಟ್ ಪೇಪರ್ದಾಗ ಹಾಕ್ಯಾರ ರಿ ಅವರು, ಫಸ್ಟ್ ಪೇಪರ್ದಾಗ ಹ್ಯಾಂಗ ಅಂತ ಹೇಳಿ ಬಿಟ್ಟು. ವ್ಯಕ್ತಿ 1 – ಹಾ… ಹಾ.. ವ್ಯಕ್ತಿ 2 – ಫಸ್ಟ್ ಪೇಪರ್ದಾಗ ಏನ್ರಿ, ಬರೆ ಈಗ T E State ಬರಿಬೇಕು ಅಂತೆ ತಿಳ್ಕೋರಿ State ಬರಿಬೇಕ ರಾ..

ರುದ್ರಗೌಡ ಪಾಟೀಲ್ ಬಂಧನ: ರುದ್ರಗೌಡ ಪಾಟೀಲ್​ನ ಸಿಐಡಿ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ವಶಕ್ಕೆ ಪಡಿದಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಿಐಡಿ ಪೊಲೀಸರು ಇನ್ನು ಅಧಿಕೃತ ಮಾಹಿತಿ ನೀಡಿಲ್ಲ. ನಿನ್ನೆ ಮಹಾಂತೇಶ್ ಪಾಟೀಲ್​ನನ್ನು ಬಂಧಿಸಿದಾಗ ರುದ್ರಗೌಡ ಪಾಟೀಲ್ ಪೋನ್ ಕರೆ ಮಾಡಿದ್ದ. ರುದ್ರಗೌಡ ಪಾಟೀಲ್ ಮಹಾಂತೇಶ್ ಪಾಟೀಲ್ ಸಹೋದರ. ಕೂಡಲೇ ಪೊಲೀಸರು ಆತನ ಲೋಕೆಷನ್ ಪತ್ತೆ ಮಾಡಿದ್ದರು. ಮಹಾರಾಷ್ಟ್ರದ‌ ಸೊಲ್ಲಾಪುರ ಬಳಿ ಟವರ್ ಲೋಕೆಷನ್ ತೋರಿಸಿತ್ತು. ನಿನ್ನೆಯೇ ಸೊಲ್ಲಾಪುರಕ್ಕೆ ತೆರಳಿದ್ದ ಪೊಲೀಸರು, ಇಂದು ಬಂಧಿಸಿದ್ದಾರೆ.

ಪ್ರಿಯಾಂಕ್​ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಶೇಷ ತನಿಖಾ ತಂಡದಿಂದ ಆಡಿಯೋ ಬಗ್ಗೆ ತನಿಖೆ ನಡೆಸುತ್ತೇವೆ. ಪಿಎಸ್​ಐ ನೇಮಕಾತಿ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೀತಿದೆ ಎಂದರು.

ಇದನ್ನೂ ಓದಿ

ಪಿಎಸ್​ಐ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿದ ಸಿಐಡಿ; ಒಎಂಆರ್​ ಶೀಟ್​​ಗಳನ್ನು ಎಫ್​ಎಸ್​ಎಲ್​ಗೆ ಕಳಿಸಲು ಸಿದ್ಧತೆ

Risbah Pant: ಇದು ಕ್ರಿಕೆಟ್, ಫುಟ್ಬಾಲ್ ಅಲ್ಲ: ರಿಷಭ್ ಪಂತ್ ಮೈಚಳಿ ಬಿಡಿಸಿದ ಕೆವಿನ್ ಪೀಟರ್ಸನ್

Published On - 11:54 am, Sat, 23 April 22