AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Risbah Pant: ಇದು ಕ್ರಿಕೆಟ್, ಫುಟ್ಬಾಲ್ ಅಲ್ಲ: ರಿಷಭ್ ಪಂತ್ ಮೈಚಳಿ ಬಿಡಿಸಿದ ಕೆವಿನ್ ಪೀಟರ್ಸನ್

Kevin Pietersen, DC vs RR: ನೋ ಬಾಲ್ ವಿಚಾರವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ನಾಯಕ ರಿಷಭ್ ಪಂತ್ ನಡೆದುಕೊಂಡ ರೀತಿ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತೆಯೆ ಇಂಗ್ಲೆಂಡ್ ಮಾಜಿ ಆಟಗಾರ, ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು ರಿಷಭ್ ಪಂತ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

Risbah Pant: ಇದು ಕ್ರಿಕೆಟ್, ಫುಟ್ಬಾಲ್ ಅಲ್ಲ: ರಿಷಭ್ ಪಂತ್ ಮೈಚಳಿ ಬಿಡಿಸಿದ ಕೆವಿನ್ ಪೀಟರ್ಸನ್
Rishabh Pant DC vs RR IPL 2022
TV9 Web
| Updated By: Vinay Bhat|

Updated on: Apr 23, 2022 | 11:47 AM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (DC vs RR) ನಡುವಣ ಪಂದ್ಯ ಐಪಿಎಲ್ 2022ರ ಮೊದಲ ವಿವಾದಕ್ಕೆ ಕಾರಣವಾಯಿತು. ಅಂಪೈರ್ ನೀಡಿದ ತೀರ್ಮಾನದಿಂದ ಬೇಸತ್ತ ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್​ನಲ್ಲಿ ಹೈ ಡ್ರಾಮವೇ ನಡೆಸಿತು. ಒಂದುಕಡೆ ರಿಷಭ್ ಪಂತ್ (Rishabh Pant) ತಾಳ್ಮೆ ಕಳೆದುಕೊಂಡು ಬ್ಯಾಟ್ಸ್​ಮನ್​ಗಳನ್ನು ಆಟ ನಿಲ್ಲಿಸಿ ಬನ್ನಿ ಎಂದು ಕರೆ ಕೊಟ್ಟರೆ ಇತ್ತ ಡೆಲ್ಲಿ ಕೋಚ್ ಪ್ರವೀಣ್‌ ಆಮ್ರೆ ಪಂದ್ಯ ಮಧ್ಯೆಯೇ ಮೈದಾನಕ್ಕೆ ಪ್ರವೇಶಿಸಿ ಅಂಪೈರ್ ಜೊತೆ ವಾದಕ್ಕಿಳಿದರು. ಕನಿಷ್ಠ ಥರ್ಡ್ ಅಂಪೈರ್​ಗೆ ಮನವಿ ಸಲ್ಲಿಸಿ ಎಂಬ ಬೇಡಿಕೆ ಇಟ್ಟರು. ಆದರೆ, ಇದು ಯಾವುದಕ್ಕೂ ಬಗ್ಗದ ಲೆಗ್‌ ಅಂಪೈರ್‌ ಅದು ನೋ-ಬಾಲ್‌ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣ, ಅದೇ ತೀರ್ಪಿಗೆ ಬದ್ಧರಾಗಿ ನಿಂತು ಆಟ ಮುಂದುವರಿಸಲು ಆನ್‌ಫೀಲ್ಡ್‌ ಅಂಪೈರ್‌ ತೀರ್ಮಾನಿಸಿದರು. ಇದೀಗ ಈ ನೋ ಬಾಲ್ (No Ball) ಕುರಿತು ನಡೆದ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಹೌದು, ನೋ ಬಾಲ್ ವಿಚಾರವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ನಾಯಕ ರಿಷಭ್ ಪಂತ್ ನಡೆದುಕೊಂಡ ರೀತಿ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತೆಯೆ ಇಂಗ್ಲೆಂಡ್ ಮಾಜಿ ಆಟಗಾರ, ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು ರಿಷಭ್ ಪಂತ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಕ್ರಿಕೆಟ್ ಪಂದ್ಯ, ಫುಟ್ಬಾಲ್ ಅಲ್ಲ. ನೀವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಪೀಟರ್ಸನ್ ಹೇಳಿದ್ದಾರೆ.

ಕೋವಿಡ್ ಕಾರಣದಿಂದಾಗಿ ಈ ಪಂದ್ಯಕ್ಕೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಹಾಜರಿರಲಿಲ್ಲ. ಇವರು ಇದ್ದಿದ್ದರೆ ಈರೀತಿ ಘಟನೆ ನಡೆಯುತ್ತಿರಲಿಲ್ಲ ಎಂಬುದು ಪೀಟರ್ಸನ್ ಮಾತು. “ರಿಕಿ ಪಾಂಟಿಂಗ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪಂತ್ ಬಳಿ ಹೋಗಿ ನೀವು ಕೋಚನ್ನು ಆಟದ ಮಧ್ಯೆ ಕಳುಹಿಸುವುದು ಸರಿಯಾದ ನಿರ್ಧಾರವಲ್ಲ. ಇದು ಜಂಟಲ್ ಮೆನ್ ಗೇಮ್. ಜನರು ತಪ್ಪು ಮಾಡುತ್ತಾರೆ. ಎಷ್ಟೋ ಬಾರಿ ನಮಗೆ ಔಟಾಗದಿದ್ದರೂ ಔಟ್ ನೀಡಿದ್ದಾರೆ, ನಾನು ಮತ್ತು ಸ್ವಾನಿ (ಗ್ರೇಮ್ ಸ್ವಾನ್) 20 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇವೆ. ಆದರೆ ಇಂತಹ ಘಟನೆಗಳು ಕ್ರಿಕೆಟ್ ಆಟಕ್ಕೆ ಒಳ್ಳೆಯದಲ್ಲ. ಇದು ಅವರ ಏಕಾಗ್ರತೆಗೆ ಅಡ್ಡಿಪಡಿಸಿರಬಹುದು. ಈ ವಿಚಾರ ಅಂಪೈರ್ ಕರೆಗಿಂತ ಹೆಚ್ಚು ಡೆಲ್ಲಿ ತಂಡದ ನಡವಳಿಕೆ ಸಂಬಂಧಿಸಿದೆ,” ಎಂದು ಪೀಟರ್ಸನ್ ಹೇಳಿದ್ದಾರೆ.

ಇನ್ನು ಈ ಬಗ್ಗೆ ಸ್ವತಃ ರಿಷಭ್ ಪಂತ್ ಅವರೇ ಮಾತನಾಡಿದ್ದು, “ಆ ಎಸೆತಕ್ಕೆ ನೋ ಬಾಲ್‌ ತೀರ್ಪು ಕೊಟ್ಟಿದ್ದರೆ, ನಮ್ಮ ಪಾಲಿಗೆ ಅತ್ಯಮೂಲ್ಯವಾಗಿರುತ್ತಿತ್ತು. ಅದನ್ನು ನಾವು ಕೂಡ ಪರಿಶೀಲನೆ ಮಾಡಬಹುದಿತ್ತು. ಆದರೆ ಇದು ನಮ್ಮ ನಿಯಂತ್ರಣದಲ್ಲಿಲ್ಲ. ಇದರಿಂದ ಎಲ್ಲರಿಗೂ ತುಂಬಾ ನೋವಾಗಿದೆ. ಏಕೆಂದರೆ, ಅದು ನೋ ಬಾಲ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಥರ್ಡ್ ಅಂಪೈರ್‌ ಮಧ್ಯ ಪ್ರವೇಶಿಸಿ ನೋ ಬಾಲ್ ಎಂದು ತೀರ್ಪು ನೀಡಬಹುದಿತ್ತು. ಆದರೆ, ಈ ಕೆಲಸ ಕೂಡ ಅಲ್ಲಿ ನಡೆಯಲಿಲ್ಲ. ಈ ನೋ ಬಾಲ್‌ ವಿಷಯದಲ್ಲಿ ಸರಿಯಾದ ತೀರ್ಪು ಮೂಡಿ ಬಂದಿದ್ದರೆ, ಇಡೀ ಪಂದ್ಯದ ಚಿತ್ರಣ ಬದಲಾಗುತ್ತಿತ್ತು. ಮೈದಾನದಲ್ಲಿ ನಮಗೆ ಏನಾಯಿತು ಅದು ಸರಿಯಲ್ಲ. ಇಬ್ಬರೂ ಅಂಪೈರ್‌ಗಳು ನೋ ಬಾಲ್‌ ವಿಷಯದಲ್ಲಿ ತಪ್ಪು ಮಾಡಿದ್ದಾರೆಂದು ನನಗೆ ಅನಿಸುತ್ತಿದೆ,” ಎಂದು ಪಂತ್ ಪಂದ್ಯದ ಬಳಿಕ ತಿಳಿಸಿದ್ದಾರೆ.

IPL 2022 Points Table: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಎಲ್ಲದರಲ್ಲೂ ರಾಜಸ್ಥಾನವೇ ಟಾಪ್

Rishabh Pant: ನೋ ಬಾಲ್ ವಿವಾದ: ಪಂದ್ಯ ಮುಗಿದ ಬಳಿಕ ಅಂಪೈರ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್