IPL 2022 Points Table: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಎಲ್ಲದರಲ್ಲೂ ರಾಜಸ್ಥಾನವೇ ಟಾಪ್

IPL 2022 Points Table: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಎಲ್ಲದರಲ್ಲೂ ರಾಜಸ್ಥಾನವೇ ಟಾಪ್
Rajasthan Royals IPL 2022

IPL 2022 Orange Cap and Purple Cap: ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

TV9kannada Web Team

| Edited By: Vinay Bhat

Apr 23, 2022 | 10:49 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15ನೇ ಆವೃತ್ತಿಯ ಅಸಲಿ ಆಟ ಈಗ ಶುರುವಾಗಿದೆ. ಒಂದು ತಂಡದ ಸೋಲು-ಗೆಲುವು ಇನ್ನೊಂದು ತಂಡದ ಅಳಿವು-ಉಳಿವಿನ ಲೆಕ್ಕಚಾರ ಆರಂಭವಾಗಿದೆ. ಈ ಬಾರಿ ಹಿಂದಿನ ಸೀಸನ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದ ತಂಡ ಹೊಸ ಆಟಗಾರರನ್ನು ಸೇರಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಹಾಲಿ ಚಾಂಪಿಯನ್, ಮಾಜಿ ಚಾಂಪಿಯನ್ ತಂಡಗಳು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಇದರ ನಡುವೆ ಎರಡು ಹೊಸ ತಂಡಗಳಾದ ಗುಜರಾತ್ ಮತ್ತು ಲಖನೌ ಕೂಡ ನಿರೀಕ್ಷೆ ಹುಟ್ಟಿಸಿದೆ. ಈ ಬಾರಿ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

ಪಾಯಿಂಟ್ ಟೇಬಲ್:

  • ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಗೆಲುವಿನ ಬಳಿಕ ಅಗ್ರಸ್ಥಾನಕ್ಕೇರಿದೆ. ಆಡಿದ ಏಲು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಎರಡರಲ್ಲಿ ಸೋಲುಂಡು ಒಟ್ಟು 10 ಅಂಕ ಸಂಪಾದಿಸಿದೆ. ಆರ್​ಆರ್​ +0.432 ರನ್​​ರೇಟ್ ಹೊಂದಿದೆ.
  • ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಆರು ಪಂದ್ಯದಲ್ಲಿ ಒಂದರಲ್ಲಿ ಸೋಲು ಐದರಲ್ಲಿ ಗೆದ್ದು ಬೀಗಿದೆ. 10 ಅಂಕದೊಂದಿಗೆ ಗುಜರಾತ್ ನಿವ್ವಳ ರನ್ ರೇಟ್ +0.395 ಆಗಿದೆ.
  • ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೃತೀಯ ಸ್ಥಾನದಲ್ಲಿದ್ದು, ಆಡಿದ ಏಳು ಪಂದ್ಯದಲ್ಲಿ ಎರಡರಲ್ಲಿ ಸೋಲು ಐದರಲ್ಲಿ ಗೆದ್ದು ಬೀಗಿದೆ.  ಹತ್ತು ಅಂಕದೊಂದಿಗೆ RCB ನಿವ್ವಳ ರನ್ ರೇಟ್ 0.251 ಆಗಿದೆ.
  • ಹೊಸ ತಂಡವಾದ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 8 ಅಂಕದೊಂದಿಗೆ ಲಖನೌದ ನಿವ್ವಳ ರನ್ ರೇಟ್ 0.124.
  • ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐದನೇ ಸ್ಥಾನದಲ್ಲಿದೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದ್ದು 8 ಅಂಕ ಸಂಪಾದಿಸಿ -0.077 ರನ್ ರೇಟ್ ಹೊಂದಿದೆ.
  • ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಡೆಲ್ಲಿಯ ನಿವ್ವಳ ರನ್ ರೇಟ್ 0.715 ಆಗಿದೆ.
  • ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏಳನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು, ನಾಲ್ಕರಲ್ಲಿ ಸೋಲು ಕಂಡು ಒಟ್ಟು 6 ಅಂಕದೊಂದಿಗೆ +0.160 ರನ್​​ರೇಟ್​ನೊಂದಿಗೆ 6ನೇ ಸ್ಥಾನದಲ್ಲಿದೆ.
  • ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಎಂಟನೇ ಸ್ಥಾನಕ್ಕೆ ಕುಸಿದಿದೆ. 6 ಅಂಕದೊಂದಿಗೆ ಪಂಜಾಬ್ ನಿವ್ವಳ ರನ್ ರೇಟ್ -0.562 ಆಗಿದೆ.
  • ಇತ್ತ ಆಡಿದ ಏಳು ಪಂದ್ಯಗಳಲ್ಲಿ 5 ರಲ್ಲಿ ಸೋಲು ಎರಡರಲ್ಲಿ ಗೆಲುವು ಕಂಡಿರುವ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ಅಂಕದೊಂದಿಗೆ -0.534 ರನ್​ರೇಟ್​​ ಹೊಂದಿ ಒಂಬತ್ತನೇ ಸ್ಥಾನದಲ್ಲಿದೆ.
  • ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಆಡಿದ ಏಳೂ ಪಂದ್ಯದಲ್ಲಿ ಸೋಲುಂಡಿದೆ. ಮುಂಬೈ ನಿವ್ವಳ ರನ್ ರೇಟ್ -1.862.

ಆರೆಂಜ್ ಕ್ಯಾಪ್:

ಅತಿ ಹೆಚ್ಚು ರನ್ ಗಳಿಸಿದವರ ಮೊದಲ ಸ್ಥಾನದಲ್ಲಿ ಆರ್​ ಆರ್​ ತಂಡದ ಜೋಸ್ ಬಟ್ಲರ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದು ಮೂರು ಶತಕದೊಂದಿಗೆ ಇವರು ಏಳು ಪಂದ್ಯಗಳಿಂದ 491 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ಲಖನೌ ತಂಡದ ನಾಯಕ ಕೆಎಲ್ ರಾಹುಲ್ ಅವರಿದ್ದು ಇವರು 265 ರನ್ ಸಿಡಿಸಿದ್ದಾರೆ. ಮೂರನೇ ಸ್ಥಾನಕ್ಕೆ ಡೆಲ್ಲಿ ಆಟಗಾರ ಪೃಥ್ವಿ ಶಾ ಜಿಗಿದಿದ್ದು ಇವರು ಆಡಿದ ಏಳು ಪಂದ್ಯಗಳಿಂದ 254 ರನ್ ಗಳಿಸಿದ್ದಾರೆ. ಅಂತೆಯೆ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ 7 ಪಂದ್ಯಗಳಿಂದ 250 ರನ್ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಿಎಸ್​ಕೆ ಆಲ್ರೌಂಡರ್ ಶಿವಂ ದುಬೆ 7 ಪಂದ್ಯಗಳಲ್ಲಿ 239 ರನ್ ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್:

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಯುಜ್ವೇಂದ್ರ ಚಹಲ್ ಟಾಪ್​ನಲ್ಲಿದ್ದಾರೆ. ಇವರು ಆಡಿದ ಏಳು ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು 18 ವಿಕೆಟ್ ಕಬಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಇದ್ದು ಇವರು ಏಳು ಪಂದ್ಯಗಳಿಂದ 13 ಕಿತ್ತಿದ್ದಾರೆ. ನಂತರದ ಮೂರು ಸ್ಥಾನಕ್ಕೆ ಡ್ವೇನ್ ಬ್ರಾವೋ ಜಿಗಿದಿದ್ದು ಇವರು ಏಳು ಪಂದ್ಯಗಳಿಂದ 12 ವಿಕೆಟ್ ತಮ್ಮದಾಗಿಸಿದ್ದಾರೆ. ಅಂತೆಯೆ ಟಿ. ನಟರಾಜನ್ ನಾಲ್ಕನೇ ಸ್ಥಾನದಲ್ಲಿದ್ದು ಇವರು 6 ಪಂದ್ಯಗಳಿಂದ 12 ವಿಕೆಟ್ ಕಿತ್ತಿದ್ದಾರೆ. ಆರು ಪಂದ್ಯಗಳಿಂದ 11 ವಿಕೆಟ್ ಪಡೆದಿರುವ ಖಲೀಲ್ ಅಹ್ಮದ್ 5ನೇ ಸ್ಥಾನದಲ್ಲಿದ್ದಾರೆ.

Rishabh Pant: ನೋ ಬಾಲ್ ವಿವಾದ: ಪಂದ್ಯ ಮುಗಿದ ಬಳಿಕ ಅಂಪೈರ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್

Rishabb Pant: ಅಂಪೈರ್ ನೋ ಬಾಲ್ ಕೊಟ್ಟಿಲ್ಲ ಹೋಗಿ ಕೇಳೆಂದು ಕೋಚ್ ಅನ್ನೇ ಮೈದಾನಕ್ಕೆ ಅಟ್ಟಿದ ಪಂತ್

Follow us on

Related Stories

Most Read Stories

Click on your DTH Provider to Add TV9 Kannada