ಕಲಬುರಗಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನಡುವಿನ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ಮಣಿಕಂಠ ರಾಠೋಡ್ ವಿಡಿಯೋ ರಿಲೀಸ್ ಮಾಡಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗ ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ್ನನ್ನು ಇಂದು(ಡಿಸೆಂಬರ್ 03) ಪೊಲೀಸು ಬಂಧಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಗುರಲಿಂಗಪ್ಪ ಎಂಬುವರಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್ ಹಾಗೂ 30 ಗುಂಡು ಖರೀದಿ ಮಾಡಿದ್ದ ಆರೋಪದ ಮೇಲೆ ರಾಜು ಕಪನೂರ್ ಅವರನ್ನ ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ನಾಡ ಪಿಸ್ತೂಲ್ಗಳನ್ನು ರಾಜು ಕಪನೂರ್ಗೆ ನೀಡಿದ್ದೆ ಎಂದು ಗುರಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಹೇಳಿಕೆಯಲ್ಲಿ ರಾಜು ಹೆಸರು ಉಲ್ಲೇಖಿಸಿದ್ದ. ಬಳಿಕ ಪೊಲೀಸರು ರಾಜು ಕಪನೂರ್ಗೆ ಎರಡು ನೊಟೀಸ್ ನೀಡಿದ್ದರು. ಆದ್ರೆ, ಪೊಲೀಸ್ ನೊಟೀಸ್ಗೆ ರಾಜು ಉತ್ತರ ನೀಡಿರಲಿಲ್ಲ,
ಇದನ್ನೂ ಓದಿ: ಕಲಬುರಗಿ: ನಗರ ಪೊಲೀಸ್ ಕಮಿಷನರ್ ಪತ್ನಿ ವಿರುದ್ಧ ಹಣಕ್ಕೆ ಬೇಡಿಕೆ; ಬಿಜೆಪಿ ಮುಖಂಡನಿಂದ ಆರೋಪ
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸುದ್ದಿಗೋಷ್ಠಿ ನಡೆಸಿ, ರಾಜು ಕಪನೂರ್ ನನ್ನನ್ನು ಕೊಲೆ ಮಾಡುವುದಕ್ಕೆ ಗನ್ ಖರೀದಿ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದರು.
ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟರು ನನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ. ಅದಕ್ಕಾಗಿ ದೇಶಿ ನಿರ್ಮಿತ ಪಿಸ್ತೂಲ್ ನಿಂದ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ. ಕೊಲೆ ಮಾಡೋದಕ್ಕೆ 2 ದೇಶಿ ನಿರ್ಮಿತ ಪಿಸ್ತೂಲ್, 30 ಬುಲೆಟ್‌ಗಳನ್ನು ಖರೀದಿಸಿದ್ದಾರೆ. ಆದರೆ ದೇಶಿ ನಿರ್ಮಿತ ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು, ಗನ್ ಕೇಸ್‌ನಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಹೆಸರು ತೆಗೆಯೋದಕ್ಕೆ ಡಿವೈಎಸ್‌ಪಿ 10 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ನನಗೆ ಜೀವ ಬೆದರಿಕೆ ಇದೆ ಅಂತ ಗನ್ ಮ್ಯಾನ್ ನೀಡುವಂತೆ ಕೇಳಿದ್ದೆ, ಜೀವ ಬೆದರಿಕೆ ಇದ್ದರು ಇಲ್ಲಿವರೆಗೂ ಗನ್ ಮ್ಯಾನ್ ಕೊಟ್ಟಿಲ್ಲ. ಎಲ್ಲರ ಗಮನಕ್ಕೆ ಇದ್ದರು ಯಾರೂ ಕೇರ್ ಮಾಡುತ್ತಿಲ್ಲ. ದೂರು ಕೊಡಲು ಹೋದರು ನನ್ನ ದೂರು ಸ್ವೀಕರಿಸಿಲ್ಲ ಎಂದು ಮಣಿಕಂಠ ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:00 pm, Sat, 3 December 22