24 ಗಂಟೆಯೂ ಮೋದಿ ಚುನಾವಣೆ ಬಗ್ಗೆ ಯೋಚಿಸ್ತಾರೆ, ಕರ್ನಾಟಕ ಗೆಲ್ಲಬೇಕೇಂದು ಅನೇಕ ಬಾರಿ ಭೇಟಿ ಕೊಡ್ತಿದ್ದಾರೆ -ಪ್ರಿಯಾಂಕ್ ಖರ್ಗೆ

| Updated By: ಆಯೇಷಾ ಬಾನು

Updated on: Nov 10, 2022 | 12:59 PM

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮೇಲಿಂದ ಮೇಲೆ ರಾಜ್ಯಕ್ಕೆ ಮೋದಿ ಬರ್ತಿದ್ದಾರೆ. ಧರ್ಮದ, ಜಾತಿಯ ರಾಜಕಾರಣ ಮಾಡಬೇಕು ಅಂತ ಬಿಜೆಪಿಯವರು ಅಂದುಕೊಂಡಿದ್ದರು. ಆದ್ರೆ ರಾಜ್ಯದಲ್ಲಿ ಅದು ವಿಫಲವಾಗಿದೆ. -ಪ್ರಿಯಾಂಕ್ ಖರ್ಗೆ

24 ಗಂಟೆಯೂ ಮೋದಿ ಚುನಾವಣೆ ಬಗ್ಗೆ ಯೋಚಿಸ್ತಾರೆ, ಕರ್ನಾಟಕ ಗೆಲ್ಲಬೇಕೇಂದು ಅನೇಕ ಬಾರಿ ಭೇಟಿ ಕೊಡ್ತಿದ್ದಾರೆ -ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
Follow us on

ಕಲಬುರಗಿ: ಮೋದಿಗೆ ರಾಜ್ಯದಲ್ಲಿ ಹೇಗಾದ್ರೂ ಮಾಡಿ ಚುನಾವಣೆ ಗೆಲ್ಲಬೇಕು. ದಿನದ 24 ಗಂಟೆಯೂ ಮೋದಿ(Narendra Modi) ಚುನಾವಣೆ ಬಗ್ಗೆ ಯೋಚಿಸುತ್ತಾರೆ. ಚುನಾವಣೆ ಹತ್ತಿರವಾದ ಹಿನ್ನೆಲೆ ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಜನರು ಗುಂಡಿ ಮುಚ್ಚಿ ಎಂದರೂ ಮುಚ್ಚಲಿಲ್ಲ ಆದ್ರೆ ಪ್ರಧಾನಿಮೋದಿ ಬರ್ತಾರೆಂದು ಈಗ ಗುಂಡಿ ಮುಚ್ಚುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ(Priyank Kharge) ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮೇಲಿಂದ ಮೇಲೆ ರಾಜ್ಯಕ್ಕೆ ಮೋದಿ ಬರ್ತಿದ್ದಾರೆ. ಧರ್ಮದ, ಜಾತಿಯ ರಾಜಕಾರಣ ಮಾಡಬೇಕು ಅಂತ ಬಿಜೆಪಿಯವರು ಅಂದುಕೊಂಡಿದ್ದರು. ಆದ್ರೆ ರಾಜ್ಯದಲ್ಲಿ ಅದು ವಿಫಲವಾಗಿದೆ. ನಮ್ಮ ಅವಧಿಯಲ್ಲಿ ಆರಂಭವಾದ ಕೆಲಸಕ್ಕೆ ಇದೀಗ ಪ್ರಚಾರ ತಗೋತಿದಾರೆ. ಜನರು ಬೆಂಗಳೂರಿನಲ್ಲಿ ಗುಂಡಿ ಮುಚ್ಚಿ ಅಂದ್ರೆ ಮುಚ್ಚಲಿಲ್ಲ. ಪ್ರಧಾನಿ ಬರ್ತಾಯಿದಾರೆ ಅಂತ ರಸ್ತೆ ಮಾಡ್ತಿದ್ದಾರೆ ಎಂದರು.

ಇದನ್ನೂ ಓದಿ: “ಶಾಸಕ ಪ್ರಿಯಾಂಕ್​ ಖರ್ಗೆ ಕಾಣೆಯಾಗಿದ್ದಾರೆ” : ಸ್ವ ಕ್ಷೇತ್ರ ಚಿತ್ರಾಪೂರದಲ್ಲಿ ಪೋಸ್ಟರ್​ ಅಭಿಯಾನ

ಇನ್ನು ಇದೇ ವೇಳೆ ಪ್ರಿಯಾಂಕ್ ಖರ್ಗೆ ನಾಪತ್ತೆ ಅನ್ನೋ ಪೋಸ್ಟರ್ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪೇ ಸಿಎಂ ನಿಂದ ಬಿಜೆಪಿಯವರಿಗೆ ಹೊರಗಡೆ ಬರಲು ಆಗ್ತಿಲ್ಲಾ. ಆರ್​ಎಸ್​ಎಸ್ ನವರು ಏನು ಹೇಳ್ತಾರೋ ಅದನ್ನು ಮಾಡ್ತಿದ್ದಾರೆ. ಬೇಕಾದರೆ ಹೇಳಲಿ ನಾನೇ ಪೋಸ್ಟರ್ ಮಾಡಿಸಿಕೊಡ್ತೇನೆ. ನಾನು ಏನು ಅನ್ನೋದು ನನ್ನ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಗೆ ಜನಬೆಂಬಲ ಬಿಜೆಪಿ ಯವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲಾ. ಭಾರತ್ ಜೋಡೋ ಯಾತ್ರಾ ಸೇರಿದಂತೆ ಕೆಲ ಕೆಲಸಗಳಿಂದ ಕ್ಷೇತ್ರಕ್ಕೆ ಹೋಗಲು ಆಗಿಲ್ಲಾ. ನಾನೇನು ಅಮೆರಿಕಾ, ಹಾಲೆಂಡ್ ಗೆ ಮೋಜು ಮಜಕ್ಕೆ ಹೋಗಿಲ್ಲ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲಾ. ಬದಲಾಗಿ ಇದು ಟ್ರಬಲ್ ಇಂಜಿನ್ ಸರ್ಕಾರವಾಗಿದೆ. ರಾಜ್ಯದಲ್ಲಿ ನಡೆದಿರೋ ಹಗರಣಗಳ ಬಗ್ಗೆ ಚರ್ಚೆಗೆ ಬರಲಿ. ನಾವು ಹೇಳಿರೋ ಹಗರಣಗಳ ಬಗ್ಗೆ ಮಾತಾಡೋ ಧಮ್, ತಾಕತ್ ಬಿಜೆಪಿಯವರಿಗೆ ಇದೆಯಾ? ನಮ್ಮ ಮೇಲೆ ಅನ್ಯಾಯ ನಡೆದ್ರೆ ನಾವು ಸುಮ್ಮನಿರಲ್ಲಾ.

ಬುದ್ದ, ಬಸವ ತತ್ವ ಎಷ್ಟು ನನ್ನಲಿದೆಯೋ ಅಷ್ಟೇ ಅಂಬೇಡ್ಕರ್ ಹೋರಾಟವು ನನ್ನಲ್ಲಿ ಇದೆ. ಮೇಲಿಂದ ಮೇಲೆ ನಮ್ಮ ತಾಳ್ಮೆಯನ್ನು ಕೂಡಾ ಪರೀಕ್ಷಿಸೋ ಕೆಲಸ ಮಾಡಬಾರದು. ಮೊದಲಿನಿಂದಲು ನಾನು ಬಿಜೆಪಿಯವರ ಟಾರ್ಗೇಟ್ ಇದ್ದೇನೆ. ಈ ಮೊದಲು ಟಾಪ್ 10 ನಲ್ಲಿದ್ದೆ, ಕೆಲ ಅಭಿಯಾನದ ನಂತರ ಟಾಪ್ 5 ಗೆ ಬಂದಿದ್ದೇನೆ. ಇದೀಗ ಟಾಪ್ 3 ಯಲ್ಲಿ ಬಂದಿದ್ದೇನೆ. ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆ ವ್ಯಯಕ್ತಿಕ ಅಂತ ಹೇಳಿದ್ದಾರೆ. ಆದ್ರೆ ಬಿಜೆಪಿಯವರು ಚರ್ಚೆ ಮಾಡೋದನ್ನು ಬಿಟ್ಟು ಬೀದಿ ಹೋರಾಟ ಮಾಡುತ್ತಿದ್ದಾರೆ ಎಂದರು.