ಕಲಬುರಗಿ, (ಡಿಸೆಂಬರ್ 13): ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ( Aravinda Kumar Arali) ಅವರ ತಾಯಿ ಹಿಟ್ ಆ್ಯಂಡ್ ರನ್ಗೆ ಬಲಿಯಾಗಿದ್ದಾರೆ. ಕಲಬುರಗಿಯ (Kalaburagi) ಸೇಡಂ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಬಳಿ ಅರವಿಂದ ಅರಳಿ ಅವರ ತಾಯಿ ಸುಮಿತ್ರಾಗೆ ಬೈಕ್ ಬಂದು ಗುದ್ದಿದೆ. ಪರಿಣಾಮ ಸುಮೀತ್ರಾಬಾಯಿ (75) ಮೃತಪಟ್ಟಿದ್ದಾರೆ.
ಬೀದರ್‌ನಿಂದ ಕಲಬುರಗಿಯಲ್ಲಿರುವ ಅಳಿಯನ ಮನೆಗೆ ಬಂದಿದ್ದ ಸುಮಿತ್ರಾ ಅವರು, ಇಂದು(ಡಿಸೆಂಬರ್ 13) ಟೊಯೋಟಾ ಶೋರೂಂ ಬಳಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ಬೈಕ್ ಬಂದು ಡಿಕ್ಕಿ ಹೊಡಿದೆ. ಬೈಕ್ ಗುದ್ದಿದ ರಭಸಕ್ಕೆ ಸುಮಿತ್ರಾ ಸ್ಥಳದಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಕನ್ನಿಕಾ, ಇನ್ಸ್ಪೆಕ್ಟರ್ ಖಾಜಾ ಹುಸೇನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಈ ಸಂಬಂಧ ಕಲಬುರಗಿ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದ ಪುತ್ರ, ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ತಾಯಿ ವಿಷಯ ತಿಳಿಯುತ್ತಿದ್ದಂತೆಯೇ ಕಲಬುರಗಿಯೆ ದೌಡಾಯಿಸಿದ್ದಾರೆ.
ಗುದ್ದಿದ ಬೈಕ್ ಯಾವುದು ಎನ್ನುವ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 pm, Wed, 13 December 23