ಕಲಬುರಗಿ: ಇದು ಡಿಜಿಟಲ್ (Digital) ಜಗತ್ತು. ಅನೇಕ ಸರ್ಕಾರಿ ಸೇನೆಗಳು ಇದೀಗ ಸುಲಭವಾಗಿ ಬೆರಳ ತುದಿಯಲ್ಲಿ ಸಿಗುತ್ತವೆ. ಆದರೆ ಕಲಬುರಗಿ ಜಿಲ್ಲಾ ಪಂಚಾಯತ್ ಸೇರಿದಂತೆ ಗ್ರಾಮ ಪಂಚಾಯತಿಗಳು ಸರಿಯಾಗಿ ಡಿಜಿಟಲ್ ಆಗಿರಲಿಲ್ಲಾ. ಕಲಬುರಗಿ ಜಿಲ್ಲಾ ಪಂಚಾಯತಿಗೆ ಕಳೆದ ಎಂಟು ತಿಂಗಳ ಹಿಂದೆ ಸಿ.ಇ.ಓ. ಆಗಿ ಬಂದ ಡಾ.ಗಿರೀಶ್ ಡಿ. ಬದೋಲೆ ಅವರು ಇ-ಕಚೇರಿ ಅನುಷ್ಠಾನ, ಗ್ರಾಮ ಪಂಚಾಯತಿಯಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪಿಸುವ ಮೂಲಕ ಪಂಚಾಯತಿಗಳಿಗೆ ಡಿಜಿಟಲ್ ಸ್ಪರ್ಶ ನೀಡಿದ್ದಾರೆ.
ಜಿಲ್ಲೆಯ ಹೊಸ ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ ಈ ಮೊದಲೇ ಇದ್ದ 219 ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಾಲಯಗಳಿದ್ದು, ಇವುಗಳಲ್ಲಿ 93 ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಮತ್ತು ಇದರಲ್ಲಿ ಪ್ರಾಯೋಗಿಕವಾಗಿ 12 ಬಿಕಾನ ಗ್ರಂಥಾಲಯಗಳು ವಿಶೇಷವಾಗಿ ಅಂಧತ್ವ ಮತ್ತು ವಿಶೇಷ ಚೇತನರಿಗಾಗಿ ಸ್ಥಾಪಿಸಲಾಗಿದೆ. ಬರುವಂತಹ ದಿನದಲ್ಲಿ ಜಿಲ್ಲೆಯ ಇನ್ನುಳಿದ ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಲ್ಲಿ ಬಿಕಾನ ಗ್ರಂಥಾಲಯಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ರಾಜ್ಯಪಾಲ ಆಗ್ತಿದ್ದೇನೆಂದು ಹೇಳಿ ಹಲವರಿಂದ ಹಣ ಪೀಕಿದ ಆಸಾಮಿ: ಬರೋಬ್ಬರಿ 28 ಲಕ್ಷ ರೂ. ಹಣ ಕಳೆದುಕೊಂಡ ನಿವೃತ್ತ ಯೋಧ
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ಮತ್ತು ಗ್ರಂಥಾಲಯಗಳ ವಿವರಗಳನ್ನು ಗೂಗಲ್ ಮ್ಯಾಪ್‍ನಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಪಂಚಾಯತ್ನ ಅನೇಕ ಸೇವೆಗಳನ್ನು ಸಂಪೂರ್ಣ ಡಿಜಿಟಲ್ ಮಾಡುತ್ತೇವೆ ಅಂತ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಹೇಳಿದ್ದಾರೆ. ಜಿಲ್ಲೆಯ ಅವಿಭಜಿತ 7 ತಾಲೂಕುಗಳಲ್ಲಿ ಹೊಸ ಕೆಸ್ವಾನ್ ಸಂಪರ್ಕ ಕಲ್ಪಿಸಿದ್ದು, ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಬಹುದಾಗಿದ್ದು, ಇದರಿಂದ ಸಾಕಷ್ಟು ಸಮಯ ಉಳಿಯಲಿದೆ. ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಆಡಳಿತವನ್ನು ತ್ವರಿತಗೊಳಿಸಲು ಸಕಾರಾತ್ಮಕ ಹೆಜ್ಜೆ ಇದಾಗಿದೆ.
ಇದಲ್ಲದೆ ಜಿಲ್ಲಾ ಪಂಚಾಯತ ವೈಬ್‍ಸೈಟ್‍ನ್ನು ಹೊಸದಾಗಿ https://zpkalaburagi.karnataka.gov.in ಅಭಿವೃದ್ಧಿಪಡಿಸಲಾಗಿದ್ದು, ಜಿಲ್ಲಾ ಪಂಚಾಯತಿಯಿಂದ ಹೊರಡಿಸಿದ ಆದೇಶ, ಸುತ್ತೋಲೆ, ಕ್ರಿಯಾ ಯೋಜನೆ ಹಾಗೂ ಇನ್ನಿತರೆ ಮಾಹಿತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಇದರಲ್ಲಿ ಅಪಲೋಡ್ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಅಳಂದ ಭೂತಾಯಿ ಸಿರಿಧಾನ್ಯಗಳ ರೈತ ಉತ್ಪಾದಕ ಕಂಪನಿ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ
ಇ-ಕಚೇರಿ ಅನುಷ್ಠಾನ:
ಜಿಲ್ಲಾ ಪಂಚಾಯತಿಯ ಎಲ್ಲಾ ಶಾಖೆಗಳಲ್ಲಿ ಈಗಾಗಲೆ ಇ-ಕಚೇರಿ ಮೂಲಕ ಕಡತಗಳು ವಿಲೇವಾರಿ ಮಾಡಲಾಗುತ್ತಿದೆ. ಉಳಿದಂತೆ ಎರಡು ತಾಲೂಕುಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿದ್ದು, ಬರುವ 15 ದಿವಸದಲ್ಲಿ ಉಳಿದ ತಾಲೂಕಾ ಕಚೇರಿಯಲ್ಲಿ ಇ-ಆಫೀಸ್ ಮೂಲಕವೇ ಕಾರ್ಯನಿರ್ವಹಣೆ ನಡೆಯಲಿದೆ.
ವರದಿ: ಸಂಜಯ್ ಚಿಕ್ಕಮಠ, ಟಿವಿ9, ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:52 pm, Sun, 5 February 23