ಜೋಳ ಆಯ್ತು, ಇದೀಗ ಗೋಧಿಯ ಸರದಿ: ರೊಟ್ಟಿ-ಚಪಾತಿಗೂ ಬೆಲೆ ಏರಿಕೆ ಬಿಸಿ; ಕಂಗಾಲಾದ ಜನ

ಕರ್ನಾಟಕದಲ್ಲಿ ಹಾಲು, ಮೊಸರು, ಬಸ್ ದರ ಏರಿಕೆಯಾದರೆ, ಬರಗಾಲದಿಂದ ತೊಗರಿ, ಅಕ್ಕಿ, ಸಕ್ಕರೆ ಬೆಲೆ ಹೆಚ್ಚಿದೆ. ಇದೀಗ ಗೋಧಿ ದರವೂ ಶೇ.20ರಷ್ಟು ಏರಿದ್ದು, ಒಂದು ವಾರದಲ್ಲಿ ಪ್ರತಿ ಕ್ವಿಂಟಾಲ್​ಗೆ 5200 ರೂ. ತಲುಪಿದೆ. ಬರ ಮತ್ತು ಕಡಿಮೆ ಉತ್ಪಾದನೆಯಿಂದ ಹಬ್ಬದ ಸಮಯದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಜೋಳ ಆಯ್ತು, ಇದೀಗ ಗೋಧಿಯ ಸರದಿ: ರೊಟ್ಟಿ-ಚಪಾತಿಗೂ ಬೆಲೆ ಏರಿಕೆ ಬಿಸಿ; ಕಂಗಾಲಾದ ಜನ
ಗೋಧಿ ಬೆಲೆ ಏರಿಕೆ
Edited By:

Updated on: Nov 10, 2026 | 6:55 PM

ಮುಖ್ಯಾಂಶಗಳು

  • ದಿನನಿತ್ಯ ಗಗನೇಕ್ಕೇರುತ್ತಿರುವ ದಿನಬಳಕೆ ವಸ್ತುಗಳ ಬೆಲೆ
  • ದೀಪಾವಳಿ ಹಬ್ಬದ ನಡುವೆ ಕಂಗಲಾದ ಜನ
  • ಕಲಬುರಗಿಯಲ್ಲಿ ಎಪಿಎಂಸಿಯಲ್ಲಿ ಗೋಧಿ ಬೆಲೆ ಏರಿಕೆ

ಕಲಬುರಗಿ, ನವೆಂಬರ್​​ 10: ಒಂದೆಡೆ ರಾಜ್ಯ ಸರ್ಕಾರದಿಂದ ಹಾಲು, ಮೊಸರು ಮತ್ತು ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇನ್ನೊಂದೆಡೆ ಭೀಕರ ಬರಗಾಲದ ಪರಿಣಾಮ ತೊಗರಿ ಬೇಳೆ, ಅಕ್ಕಿ ಹಾಗೂ ಸಕ್ಕರೆ ದರ ಈಗಾಗಲೇ ಗಗನಕ್ಕೆರಿದೆ. ಈ‌ ನಡುವೆ ಸೈಲೆಂಟ್​ ಆಗಿ ಗೋಧಿ ದರ ಸಹ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಆ ಮುಲಕ ಹಬ್ಬದ ದಿನಗಳಲ್ಲಿ ಜನರಿಗೆ ಬೆಲೆ ಏರಿಕೆ ಶಾಕ್ ಎದುರಾಗಿದೆ. ಬಿಸಿ ಬಿಸಿ ಚಪಾತಿ, ಹೋಳಿಗೆ ತಿನ್ನಬೇಕು ಎನ್ನುವವರಿಗೆ ಬಾಯಿ ಸುಡುವಂತಾಗಿದೆ.

ಗೋಧಿ ದರ ಹಂತ ಹಂತವಾಗಿ ಏರಿಕೆ

ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಜನರಿಗೆ ಒಂದರ ನಂತರ ಒಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ತೊಗರಿ ಬೇಳೆ, ಸಕ್ಕರೆ, ಬಿಳಿ ಜೋಳದ ಬೆಲೆ ಕೂಡ ಮೊದಲ ಬಾರಿಗೆ ಎರಡುಪಟ್ಟು ದರ ಏರಿಕೆ ಆಗಿದೆ. ಇದೀಗ ಈ ಸಾಲಿಗೆ ಗೋಧಿಯೂ ಸೇರ್ಪಡೆಗೊಳ್ಳುತ್ತಿದೆ. ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಗೋಧಿ ದರ ಹಂತ ಹಂತವಾಗಿ ಏರಿಕೆಯಾಗುತ್ತಿದೆ.

Loading...

ಗೋಧಿ ಬೆಲೆ‌ ಏರಿಕೆ ಕಂಡು ವರ್ತಕರು ಶಾಕ್

ಅಂದಹಾಗೆ ಕಳೆದ ವಾರ ಪ್ರತಿ‌ ಕ್ವಿಂಟಾಲ್ ತೊಗರಿಗೆ 3500 ರಿಂದ 4000 ರೂ.ವರೆಗೆ ಹೋಲ್ ಸೇಲ್ ದರದಲ್ಲಿ ಮಾರಾಟವಾಗುತ್ತಿದ್ದು, ಗೋಧಿ ಇದೀಗ ಸದ್ಯ ಮಾರುಕಟ್ಟೆಯಲ್ಲಿ 4800 ರಿಂದ 5200 ರೂ. ವರೆಗೆ ಮಾರಾಟವಾಗುತ್ತಿದೆ. ಆ ಮೂಲಕ ಕಳೆದ ಒಂದು ವಾರದಲ್ಲಿಯೇ ಗೋಧಿ ಸಹ ಶೇಕಡಾ 20%ರಷ್ಟು ದರ ಏರಿಕೆಯಾಗಿದೆ. ಬೇರೆ ಬೇರೆ ಆಹಾರ ಧಾನ್ಯಗಳಂತೆ ಗೋಧಿ ದರ ಏರಿಕೆಯಿಂದ ಜನಸಾಮಾನ್ಯರ ಜೇಬು ಮಾತ್ರವಲ್ಲ ಬಾಯಿ ಕೂಡ ಸುಡುವಂತಾಗಿದೆ. ಅಲ್ಲದೆ ಹಬ್ಬದ ದಿನಗಳಲ್ಲಿ ಪ್ರತಿಯೊಂದು ಅಡುಗೆಗೆ ಗೋಧಿ ಬೇಕೆಬೇಕು, ಆದರೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಗೋಧಿ ಬೆಲೆ‌ ಕಂಡು ವರ್ತಕರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಅಕ್ಕಿ ಬೆನ್ನಲ್ಲೇ ಉತ್ತರ ಕರ್ನಾಟಕದ ಬಿಳಿಜೋಳಕ್ಕೂ ಬಂಗಾರದ ಬೆಲೆ: ದರ ಕೇಳಿಯೇ ಜನರು ಶಾಕ್

ಸದ್ಯ ಕಲಬುರಗಿ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಯ ಗೋಧಿ ಪ್ರತಿ ಕ್ವಿಂಟಾಲ್​ಗೆ 1 ಸಾವಿರದಿಂದ 1500 ರೂ. ವರೆಗೆ ಮಾರಾಟವಾಗುತ್ತಿದೆ. ಅದೇ ಇತರೆ ಗೋಧಿ ದರದಲ್ಲಿಯೂ ಏರಿಕೆಯಾಗಿದ್ದು, ಪ್ರತಿ ಕ್ವಿಂಟಾಲ್​​​ಗೆ ಈ ಹಿಂದಿನ ದರಕ್ಕಿಂತ 400 ರಿಂದ 600 ರೂ ಏರಿಕೆಯಾಗಿದೆ. ಇನ್ನು ಗೋಧಿ ದರದಲ್ಲಿ ಈ ರೀತಿ ಏರಿಕೆ ಆಗುವದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ರಾಜ್ಯಕ್ಕೆ ಬೇಕಾಗುವ ಗೋಧಿಯಲ್ಲಿ ಶೇಕಡಾ 20 ರಷ್ಟು ಮಾತ್ರ ನಮ್ಮ ರಾಜ್ಯದಲ್ಲಿ ಬೆಳೆಯಲಾಗುತ್ತದೆ.

ಗೋಧಿ ದರ ಏರಿಕೆಗೆ ಪ್ರಮುಖ ಕಾರಣವೇನು?

ಇನ್ನು ಗೋಧಿ ಹೆರಳವಾಗಿ ಬೆಳೆಯುವ ಮಧ್ಯಪ್ರದೇಶದಲ್ಲಿ ಕೂಡ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹೀಗಾಗಿ ಗೋಧಿ ಉತ್ಪಾದನೆಯಲ್ಲಿ ಗಣನೀಯವಾಗಿ ಕುಸಿದಿದ್ದು, ಇದೇ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇನ್ನು ಮುಂದಿನ ಮುಂಗಾರಿನಲ್ಲಿ ಸಹ ಇದೇ ರೀತಿ ಗೋಧಿಯ ಬೇಡಿಕೆ ಹೆಚ್ಚಾಗುವ ಹಿನ್ನೆಲೆ ಸದ್ಯ 5 ಸಾವಿರ ರೂ ಆಸುಪಾಸಿರುವ ಬ್ರ್ಯಾಂಡೆಡ್ ತೊಗರಿ ದರ 6 ಸಾವಿರಕ್ಕೂ ಅಧಿಕ ಏರಿಕೆಯಾಗುವ ಲಕ್ಷಣಗಳಿವೆ ಅಂತಾ ಎಪಿಎಂಸಿ ವರ್ತಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಬರದ ಬಿಸಿ: ಜೋಳದ ಬೆಲೆ ದಿಢೀರ್ ಏರಿಕೆ, ಜೋಳದ ರೊಟ್ಟಿ ದರವೂ ಹೆಚ್ಚಳ ಸಾಧ್ಯತೆ

ಸದ್ಯ ರಾಜ್ಯದಲ್ಲಿ ಭೀಕರ ಬರದಿಂದ ರೈತರು ಸಂಕಷ್ಟದಲ್ಲಿದ್ದರೆ ಗಾಯದ ಮೇಲೆ ಬರೆ ಎಂಬಂತೆ ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ತುತ್ತು ಅನ್ನಕ್ಕೂ ಜನಸಾಮಾನ್ಯರು ಪರದಾಡುವಂತಾಗಿದೆ‌. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಆಹಾರ ಧಾನ್ಯಗಳ ಬ್ಲ್ಯಾಕ್ ಮಾರ್ಕೆಟ್ ಆರಂಭವಾಗುವ ಮುನ್ನ ಎಚ್ಚೆತ್ತುಕೊಳಬೇಕಾಗಿದೆ.

Wheat Price Rise: ಕಲಬುರಗಿ ಜಿಲ್ಲೆಯಲ್ಲಿ ಗೋಧಿ ಬೆಲೆ ಏರಿಕೆ! ದೀಪಾವಳಿ ಹಬ್ಬದಂದೇ ಜನರಿಗೆ ಶಾಕ್ #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Loading...
Unable to load recommendations.
Follow Us