ಕಲಬುರಗಿ: ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಕೇಳಿಬಂದ ಭಾರೀ ಶಬ್ದ; ಭೂಕಂಪನದ ಅನುಭವ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಇಂದು ಸಂಜೆ 5 ಗಂಟೆಗೆ ಮತ್ತು 5.20 ನಿಮಿಷಕ್ಕೆ ಎರಡು ಬಾರಿ, ಭೂಮಿಯಿಂದ ಭಾರೀ ಶಬ್ದ ಕೇಳಿಸಿದೆ.
ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಇಂದು ಸಂಜೆ 5 ಗಂಟೆಗೆ ಮತ್ತು 5.20 ನಿಮಿಷಕ್ಕೆ ಎರಡು ಬಾರಿ, ಭೂಮಿಯಿಂದ (Earth) ಭಾರೀ ಶಬ್ದ (Sound) ಕೇಳಿಸಿದೆ. ಈ ವೇಳೆ ಗ್ರಾಮದ ಜನರಿಗೆ ಲಘು ಭೂಕಂಪನದ (Earthquake) ಅನುಭವವಾಗಿದೆ. ಇದರಿಂದ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದ ವರ್ಷ ಕೂಡ ಗಡಿಕೇಶ್ವರ ಗ್ರಾಮದಲ್ಲೇ ಅನೇಕ ಬಾರಿ ಭೂಮಿಯಿಂದ ಸದ್ದು ಕೇಳಿಸಿತ್ತು. ಆಗ ಭೂ ವಿಜ್ಞಾನಿಗಳು ಭೂಮಿಯೊಳಗಿನ ರಾಸಾಯನಿಕ ಪಕ್ರಿಯೆಯಿಂದ ಇಂತಹ ಸದ್ದು ಬರ್ತಿದೆ, ಜನರು ಆತಂಕ ಪಡಬಾರದು ಅಂತ ಹೇಳಿದ್ದರು. ಆದರೆ ಇದೀಗ ಮತ್ತೆ ಗ್ರಾಮದ ಜನರಿಗೆ ಸದ್ದು ಕೇಳಿಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.
ನಿರಂತರ ಸದ್ದಿನಿಂದ ಕಂಗಾಲಾದ ಜನರು
ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಸದ್ದು ಬರುವದು, ಲಘು ಭೂಕಂಪನದ ಅನುಭವವಾಗುವದು ಇದೇ ಮೊದಲಲ್ಲಾ. ಕಳೆದ ವರ್ಷ ಕೂಡಾ ಗಡಿಕೇಶ್ವರ ಗ್ರಾಮದಲ್ಲಿ ಅನೇಕ ಬಾರಿ ಭೂಮಿಯಿಂದ ಸದ್ದು ಬಂದಿತ್ತು. ಹೀಗಾಗಿ ಗ್ರಾಮಕ್ಕೆ ಅನೇಕ ಭೂವಿಜ್ಞಾನಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ಭಾಗದಲ್ಲಿ ಸುಣ್ಣದ ಕಲ್ಲು ಹೆಚ್ಚಾಗಿದೆ. ಜೊತೆಗೆ ಭೂಮಿಯೊಳಗಿನ ರಾಸಾಯನಿಕ ಪಕ್ರಿಯೆಯಿಂದ ಸದ್ದು ಬರುತ್ತಿದೆ. ಜನರು ಆತಂಕ ಪಡಬಾರದು ಅಂತ ಭೂ ವಿಜ್ಞಾನಿಗಳು ಹೇಳಿದ್ದರು. ಹೀಗಾಗಿ ಗ್ರಾಮದ ಜನರಿಗೆ, ಸರ್ಕಾರದ ವತಿಯಿಂದ ಎರಡು ಕೋಟಿ ವೆಚ್ಚದಲ್ಲಿ ಟಿನ್ ಶೆಡ್ಗಳನ್ನು ನಿರ್ಮಿಸಿ ಕೊಡಲಾಗಿತ್ತು.
ಮಳೆಗಾಲದಲ್ಲಿ ಭೂಮಿಯಿಂದ ಆಗಾಗ ಭಾರಿ ಸದ್ದು ಕೇಳುವುದು ಇಲ್ಲಿ ಸಾಮಾನ್ಯವಾಗಿದೆ. ಆದರು ಕೂಡಾ ಸದ್ದಿನ ಮೂಲದ ಬಗ್ಗೆ ಇನ್ನಷ್ಟು ಅಧ್ಯಯನಗಳು ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Mon, 19 September 22