PSI Recruitment Scam: ಮೊದಲ ಪತ್ರಿಕೆಯಲ್ಲೂ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಕೆ; ಸಿಐಡಿ ವಿಚಾರಣೆಯಲ್ಲಿ ಮಾಹಿತಿ ಲಭ್ಯ

| Updated By: sandhya thejappa

Updated on: May 08, 2022 | 11:47 AM

18 ಆರೋಪಿಗಳನ್ನು ಪೊಲೀಸರು ಕರೆದೊಯ್ದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರಿನ 4 ಪರೀಕ್ಷಾ ಕೇಂದ್ರಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಕೇಂಬ್ರಿಡ್ಜ್ ಪರೀಕ್ಷಾ ಕೇಂದ್ರ ಸೇರಿದಂತೆ ಪೊಲೀಸರು 4 ಕಡೆ ಸ್ಥಳ ಪರಿಶೀಲನೆ ಮಾಡಿದ್ದಾರೆ.

PSI Recruitment Scam: ಮೊದಲ ಪತ್ರಿಕೆಯಲ್ಲೂ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಕೆ; ಸಿಐಡಿ ವಿಚಾರಣೆಯಲ್ಲಿ ಮಾಹಿತಿ ಲಭ್ಯ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಎರಡನೇ ಪತ್ರಿಕೆ ಮಾತ್ರವಲ್ಲಾ ಮೊದಲ ಪತ್ರಿಕೆಯಲ್ಲೂ ಕೂಡಾ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಮೊದಲ ಪತ್ರಿಕೆಯಲ್ಲಿ 50 ಅಂಕದ ಪ್ರಶ್ನೆಗಳಿರುತ್ತವೆ. ಪ್ರಬಂಧ, ಭಾಷಾಂತರದ ಪ್ರಶ್ನೆಗಳಿದ್ದವು. ಪ್ರಶ್ನೆಗಳಿಗೆ ದೀರ್ಘ ಉತ್ತರಗಳನ್ನು ಬರೆಯಬೇಕು. ಆದರೆ ಮೊದಲು ಕೂಡಾ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ (Electronic Bluetooth Device) ಬಳಸಿ ಉತ್ತರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಿಐಡಿ ಅಧಿಕಾರಿಗಳು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪರೀಕ್ಷೆಗೆ ಬಳಸಿದ್ದ ಬ್ಲೂಟೂತ್ ಎಲ್ಲಿಂದ ಬಂತು? ಅಭ್ಯರ್ಥಿಗಳಿಗೆ ಬ್ಲೂಟೂತ್ ತಂದು ಕೊಟ್ಟವರು ಯಾರು? ಎನ್ನುವ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.  ಇನ್ನು 18 ಆರೋಪಿಗಳನ್ನು ಪೊಲೀಸರು ಕರೆದೊಯ್ದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರಿನ 4 ಪರೀಕ್ಷಾ ಕೇಂದ್ರಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಕೇಂಬ್ರಿಡ್ಜ್ ಪರೀಕ್ಷಾ ಕೇಂದ್ರ ಸೇರಿದಂತೆ ಪೊಲೀಸರು 4 ಕಡೆ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಇಲಾಖೆ ಮೇಲಾಧಿಕಾರಿಗಳಿಗೆ ಯಾಮಾರಿಸಿದ್ದ ಮಂಜುನಾಥ ಮೇಳಕುಂದಿ:
ಕಲಬುರಗಿ ನೀರಾವರಿ ಇಲಾಖೆಯ ಎಇ ಮಂಜುನಾಥ ಮೇಳಕುಂದಿ ಈ ಹಿಂದೆ ಜೈಲಿನಲ್ಲಿದ್ದಾಗ ಅನಾರೋಗ್ಯ ನೆಪ ಹೇಳಿ ವೈದ್ಯಕೀಯ ರಜೆ ನೀಡುವಂತೆ ಮನವಿ ಮಾಡಿದ್ದನಂತೆ. ಈತನನ್ನು ಕಳೆದ ಡಿಸೆಂಬರ್ 20 ರಂದು ಬಂಧಿಸಲಾಗಿತ್ತು. 2022 ರ ಜನವರಿ 7 ರವರಗೆ ಜೈಲಲ್ಲಿದ್ದ. ಈ ಸಮಯದಲ್ಲಿ ಅನಾರೋಗ್ಯ ನೆಪ ಹೇಳಿದ್ದನಂತೆ. ವೈದ್ಯಕೀಯ ಪ್ರಮಾಣ ಪತ್ರ ನೀಡಿ, ವೈದ್ಯಕೀಯ ರಜೆ ಅಂತ ಪರಿಗಣಿಸಿ ಎಂದು ಮನವಿ ಮಾಡಿದ್ದನಂತೆ.

ಕೋಕಾ ಕಾಯ್ದೆಯಡಿ ಬಂಧಿತರಾಗಿದ್ದ ಆರೋಪಿಗಳ ಕೈವಾಡ ಶಂಕೆ:
ಕೋಡ್​ವರ್ಡ್​ ಮೂಲಕ ಪ್ರಶ್ನೆಪತ್ರಿಕೆ ಡೀಲ್ ಮಾಡುತ್ತಿದ್ದ ಟೊಮ್ಯಾಟೊ ಗ್ಯಾಂಗ್​ನ ಸಿಐಡಿ ಪೊಲೀಸರು 2019ರಲ್ಲಿ ಬಂಧಿಸಿದ್ದರು. ಈ ಗ್ಯಾಂಗ್ ಪಿಎಸ್​ಐನಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದಾರಾ ಎಂಬ ಅನುಮಾನ ಮೂಡಿದೆ. 2019ರಲ್ಲಿ ಪಿಯು ಪ್ರಶ್ನೆಪತ್ರಿಕೆ ಲೀಕ್​ ಮಾಡಿ ಗ್ಯಾಂಗ್ ಸಿಕ್ಕಿಬಿದ್ದಿತ್ತು. ​ತನಿಖೆ ವೇಳೆ 12 ಆರೋಪಿಗಳನ್ನು ಬಂಧಿಸಿದ್ದರು.

ರುದ್ರಗೌಡ ಪಾಟೀಲ್ ಹಣಕಾಸಿನ ವ್ಯವಹಾರದ ಮೇಲೆ ಸಿಐಡಿ ಕಣ್ಣು:
ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಹಣಕಾಸಿನ ವ್ಯವಹಾರದ ಮೇಲೆ ಸಿಐಡಿ ಕಣ್ಣಿಟ್ಟಿದೆ. ಕಲಬುರಗಿ, ಬೀದರ್, ಯಾದಗಿರಿಯಲ್ಲಿ ನೂರಾರು ಎಕರೆ ಭೂಮಿ ಖರೀದಿ ಮಾಡಿದ್ದಾನೆ. ತನ್ನ ಪರಿಚಿತರ ಹೆಸರಲ್ಲಿ ಭೂಮಿ ಖರೀದಿ ಮಾಡಿರುವ ಬಗ್ಗೆ ಮಾಹಿತಿ ಇದೆ. ಅಕ್ರಮದ ದುಡ್ಡಲ್ಲಿ ಭೂಮಿ ಖರೀದಿ ಮಾಡಿದ್ದಾನಂತೆ. ಈ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಎಲ್ಲಾದರೂ ಭೂಮಿ ಮಾರಟಕ್ಕೆ ಇದೆ ಅಂತ ಗೊತ್ತಾದ ತಕ್ಷಣ ಅಲ್ಲಿಗೆ ಹೋಗಿ ಖರೀದಿಸುತ್ತಿದ್ದನಂತೆ.

ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಸಿಕ್ಕಿದೆ.  ಇನ್ನೂ ಮೂರು ಜಿಲ್ಲಾ ಕೇಂದ್ರದಲ್ಲಿ ಕೂಡ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಹೆಚ್ಚಾಗಿದೆ. ಎಫ್ಎಸ್ಎಲ್ ನೀಡಿದ ವರದಿಯ ಮೇಲೆ ತನಿಖೆ ಪ್ರಾರಂಭವಾಗಿದೆ. ತುಮಕೂರು, ಮಂಗಳೂಳಿನಲ್ಲೂ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದೀಗ ಮತ್ತೆ ಮೈಸೂರು, ದಾವಣಗೆರೆ ಮತ್ತು ಧಾರವಾಡದ ಕೇಂದ್ರಗಳಲ್ಲಿ ಕೂಡ ಅಕ್ರಮ ನಡೆದಿರುವ ಬಗ್ಗೆ ಶಂಕೆ ಮೂಡಿದೆ.

ರುದ್ರಗೌಡ ಪಾಟೀಲ್ ಜೈಲಿಗೆ:
ಕಿಂಗ್​ಪಿನ್ ರುದ್ರಗೌಡ ಪಾಟೀಲ್​ ಜೈಲುವಾಸಕ್ಕೆ ಕಳುಹಿಸಲಾಗಿದೆ. ಇಂದು ಸಿಐಡಿ‌ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಜೈಲಿಗೆ ಕಳುಹಿಸಲಾಗಿದೆ. ರುದ್ರಗೌಡ ಪಾಟೀಲ್ ಖುಷಿ ಖುಷಿಯಿಂದಲೇ ಜೈಲಿಗೆ ತೆರಳಿದ್ದಾನೆ.

ಇದನ್ನೂ ಓದಿ

Mothers Day: ಇಬ್ಬರು ಮಕ್ಕಳೊಂದಿಗೆ ಉದ್ಯೋಗ ಸಂಭಾಳಿಸುವ ಶಿಕ್ಷಕಿಯೊಬ್ಬರ ಬದುಕಿನ ಪುಟಗಳಿವು

N Chandrasekharan: ಮುಂಬೈನಲ್ಲಿ 98 ಕೋಟಿ ರೂಪಾಯಿಗೆ ಡೂಪ್ಲೆಕ್ಸ್ ಖರೀದಿಸಿದ ಟಾಟಾ ಸಮೂಹದ ಅಧ್ಯಕ್ಷ ಚಂದ್ರಶೇಖರನ್

Published On - 8:02 am, Sun, 8 May 22