ಜಿಎಸ್​ಟಿ ಹೇರಿಕೆ ವಿರೋಧ: ರಸ್ತೆಯಲ್ಲೇ ರೊಟ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಕಲಬುರಗಿಯಲ್ಲೊಂದು ವಿನೂತನ ಪ್ರತಿಭಟನೆ

ಜಿಎಸ್​ಟಿ ಹೇರಿಕೆ ವಿರೋಧಿಸಿ ಅಖಿಲ ಭಾರತೀಯ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ರಸ್ತೆಯಲ್ಲೇ ರೊಟ್ಟಿ ಮಾಡಿ ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಎಸ್​ಟಿ ಹೇರಿಕೆ ವಿರೋಧ: ರಸ್ತೆಯಲ್ಲೇ ರೊಟ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಕಲಬುರಗಿಯಲ್ಲೊಂದು ವಿನೂತನ ಪ್ರತಿಭಟನೆ
ಜಿಎಸ್​ಟಿ ಹೇರಿಕೆ ವಿರೋಧಿಸಿ ರಸ್ತೆಯಲ್ಲೇ ರೊಟ್ಟಿ ಮಾಡುತ್ತಿರುವ ಮಹಿಳೆಯರು.
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 20, 2022 | 1:35 PM

ಕಲಬುರಗಿ: ರಾಜ್ಯದಲ್ಲಿ ಬೆಲೆ (GST) ಏರಿಕೆಯ ಕಾವು ಹೆಚ್ಚಿದ್ದು, ವಾದ ಪ್ರತಿವಾದಗಳು ನಡೆಯುತ್ತಿವೆ. ಹೀಗಾಗಿ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ವಿನೂತನ ಪ್ರತಿಭಟನೆ ಮಾಡಲಾಗಿದೆ. ರಸ್ತೆಯಲ್ಲೇ ರೊಟ್ಟಿ ಮಾಡಿ ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ನಗರದ ಎಸ್​ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಲೆ ಮೇಲೆ ಸಿಲಿಂಡರ್ ಹೊತ್ತು ಮಹಿಳೆಯರು ಆಕ್ರೋಶ ಹೊರಹಾಕಿದರು. ರಾಜ್ಯ ,ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು, ತಕ್ಷಣವೇ ಆಹಾರ ಧಾನ್ಯಗಳ ಮೇಲೆ ಹೇರಲಾದ ಜಿಎಸ್​ಟಿ ವಾಪಸ್ ಪಡೆಯುವಂತೆ ಪ್ರತಿಭಟನಾಕಾರರಿಂದ ಒತ್ತಾಯ ಮಾಡಲಾಯಿತು. ಅದೇ ರೀತಿಯಾಗಿ ಜಿಎಸ್​ಟಿ ಹೇರಿಕೆ ವಿರೋಧಿಸಿ ಬೆಂಗಳೂರಿನ ಜಿಎಸ್​ಟಿ ಕೇಂದ್ರ ಕಚೇರಿ ಮುಂದೆ ಕಾಂಗ್ರೆಸ್​​ ಬೃಹತ್ ಪ್ರತಿಭಟನೆ ಮಾಡಿದೆ. ಮಾಜಿ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದು, ಸುಮಾರು 150-200 ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೊಸರು, ಮಜ್ಜಿಗೆ ಮೇಲೆ ಹಾಕಿರುವ ಜಿಎಸ್​ಟಿ ವಿರೋಧಿಸಿ ಧರಣಿ ಮಾಡಲಾಗಿದೆ. ಜಿಎಸ್​ ​ಟಿ ಕಚೇರಿ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ದುಬಾರಿ ಆಗಿರುವ ವಸ್ತುಗಳು: 

1) ಪ್ಯಾಕೇಜ್ಡ್ ಫುಡ್: ಪ್ರೀ- ಪ್ಯಾಕ್ಡ್, ಪ್ರೀ- ಲೇಬಲ್ಡ್ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಮತ್ತಿತರ ಉತ್ಪನ್ನಗಳು. ಜೇನುತುಪ್ಪ, ಉಪ್ಪಿನಕಾಯಿ, ಮಾಂಸ, ಮೀನು, ಪ್ಯಾಕ್ ಮಾಡಿರುವ ಬ್ರಾಂಡ್ ಅಲ್ಲದ ಆಹಾರ ಪದಾರ್ಥ (ಅಕ್ಕಿ, ಗೋಧಿ, ಗೋಧಿ ಹಿಟ್ಟು, ಒಣಕಾಳು ಇತ್ಯಾದಿ)

2) ಬ್ಯಾಂಕ್​ ಚೆಕ್​ ಬುಕ್: ಬ್ಯಾಂಕ್ ಚೆಕ್​ಗಳ (ಬಿಡಿ ಅಥವಾ ಪುಸ್ತಕ ಸ್ವರೂಪದಲ್ಲಿ) ವಿತರಣೆ ಮೇಲೆ ಶೇ 18ರಷ್ಟು ಜಿಎಸ್​ಟಿ ಶುಲ್ಕ ಬೀಳಲಿದೆ.

3) ನಕ್ಷೆಗಳು ಮತ್ತು ಚಾರ್ಟ್​ಗಳು: ಶೇ 12ರಷ್ಟು ಜಿಎಸ್​ಟಿ ಹಾಕಲಾಗುತ್ತದೆ.

4) ಹೋಟೆಲ್ ಕೋಣೆಗಳು: ಒಂದು ದಿನಕ್ಕೆ ₹ 1,000 ರೂಪಾಯಿ ಒಳಗಿನ ಹೋಟೆಲ್ ರೂಮ್​ಗೆ ಶೇ 12ರಷ್ಟು ಜಿಎಸ್​ಟಿ ವಿಧಿಸಲಾಗಿದೆ. ಈವರೆಗೆ ಈ ಮೊತ್ತದ ಶುಲ್ಕವಿರುವ ಕೋಣೆಗೆ ಜಿಎಸ್​ಟಿ ವಿನಾಯ್ತಿಯಿತ್ತು.

5) ಆಸ್ಪತ್ರೆ ಬೆಡ್​​ಗಳು: ರೂಮ್ ಬಾಡಿಗೆ (ಐಸಿಯು ಹೊರತುಪಡಿಸಿ) ದಿನಕ್ಕೆ 5 ಸಾವಿರ ರೂಪಾಯಿ ಮೇಲ್ಪಟ್ಟು ಶುಲ್ಕ ವಿಧಿಸುವ ಆಸ್ಪತ್ರೆಗಳಲ್ಲಿ ಶೇ 5ರ ಜಿಎಸ್​ಟಿ ಇದೆ. ಇದಕ್ಕೆ ಐಟಿಸಿ (Input Tax Credit – ITC) ಸಿಗುವುದಿಲ್ಲ.

6) ಎಲ್​ಇಡಿ ಬಲ್ಪ್​: ಎಲ್​ಇಡಿ ದೀಪಗಳು, ಸಲಕರಣೆಗಳು, ಎಲ್​ಇಡಿ ಲ್ಯಾಂಪ್​ಗಳ ಮೇಲೆ ಶೇ 6ರಷ್ಟು ಜಿಎಸ್​ಟಿ ಹೆಚ್ಚಾಗಲಿದೆ. ಈವರೆಗೆ ಶೇ 12ರಷ್ಟು ತೆರಿಗೆಯಿತ್ತು. ಈ ಪ್ರಮಾಣವು ಇನ್ನು ಮುಂದೆ ಶೇ 18ಕ್ಕೆ ಏರಿಕೆಯಾಗಲಿದೆ.

7) ಬ್ಲೇಡ್​, ಚಾಕು: ಚಾಕುಗಳು ಜತೆಗೆ ಕತ್ತರಿಸಿದ ಬ್ಲೇಡ್​ಗಳು, ಪೇಪರ್ ಕತ್ತರಿಗಳು, ಪೆನ್ಸಿಲ್ ಶಾರ್ಪ್​ನರ್​ಗಳು ಮತ್ತು ಬ್ಲೇಡ್​ಗಳು, ಸ್ಕಿಮ್ಮರ್ಸ್, ಕೇಕ್ ಸರ್ವರ್ಸ್​ ಮುಂತಾದವುಗಳಿಗೆ ಶೇ 12ರಿಂದ 18ರಷ್ಟು ತೆರಿಗೆ ಹಾಕಲಾಗುತ್ತದೆ.

8) ಪಂಪ್ಸ್ ಮತ್ತು ಮಶೀನ್​ಗಳು: ಸಬ್​ ಮರ್ಸಿಬಲ್ ಪಂಪ್​ಗಳು, ಬೈಸಿಕಲ್ ಪಂಪ್​ಗಳು ಸೇರಿದಂತೆ ಇತರ ಮಶೀನ್​ಗಳ ಮೇಲಿನ ಜಿಎಸ್​ಟಿಯನ್ನು ಶೇ 12ರಿಂದ ಶೇ 18ಕ್ಕೆ ಏರಿಸಲಾಗಿದೆ.

ಇವೆಲ್ಲ ಅಗ್ಗ ಆಗುತ್ತವೆ

1) ರೋಪ್​ವೇ ರೈಡ್​ಗಳು: ರೋಪ್​ವೇಗಳ ಮೂಲಕ ಸರಕುಗಳು ಮತ್ತು ಪ್ರಯಾಣಿಕರನ್ನು ಒಯ್ಯುವ ದರವನ್ನು ಶೇ 18ರಿಂದ ಶೇ 5ಕ್ಕೆ ಇಳಿಸಿದ್ದು, ಜತೆಗೆ ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್ ಸೇವೆ ದೊರೆಯುತ್ತದೆ.

2) ಸರಕು ಸಾಗಣೆ ಬಾಡಿಗೆ: ಸರಕು ಸಾಗಣೆಯ ಜತೆಗೆ ತೈಲ ಮತ್ತು ಆಪರೇಟರ್ಸ್ ವೆಚ್ಚದ ಜಿಎಸ್​ಟಿ ಶೇ 18ರಿಂದ ಶೇ 12ಕ್ಕೆ ಇಳಿದಿದೆ.

3) ಅರ್ಥೋಪೆಡಿಕ್ ಅಪ್ಲೈಯನ್ಸಸ್: ಸ್ಪ್ಲಿಂಟ್ಸ್ ಮತ್ತು ದೇಹದ ಇತರ ಕೃತಕ ಭಾಗಗಳಿಗಾಗಿ ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ.

4) ರಕ್ಷಣಾ ವಸ್ತುಗಳು: ಖಾಸಗಿ ಮಾರಾಟಗಾರರು/ಸಂಸ್ಥೆಗಳು ಆಮದು ಮಾಡಿಕೊಳ್ಳುವ ನಿರ್ದಿಷ್ಟ ವಸ್ತುಗಳ ಮೇಲೆ ಐಜಿಎಸ್​ಟಿಯನ್ನು ವಿನಾಯಿತಿ ನೀಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada