ಗುಲಬರ್ಗಾ ವಿವಿಯಲ್ಲಿ ಅಂಕಪಟ್ಟಿ ಸೇಲ್! ಹಣ ನೀಡಿದರೆ ಫೇಲ್ ಆದವರಿಗೂ ಸಿಗುತ್ತಿದೆ ಪಾಸಾದ ಮಾರ್ಕ್ಸ್ ಕಾರ್ಡ್
ವಿವಿ ಮೌಲ್ಯಮಾಪನ ವಿಭಾಗದ ಸಿಬ್ಬಂದಿಯಿಂದಲೇ ಈ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ನಾಗರಾಜ್ ಕಲಬುರಗಿ ಎಕೆಎಸ್ಜಿವಿ ಕಾಲೇಜಿನ ವಿದ್ಯಾರ್ಥಿ.
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ (Gulbarga University) ಅಕ್ರಮ ಬಯಲಾಗಿದ್ದು, ಫೇಲ್ ಆದ ವಿದ್ಯಾರ್ಥಿಗಳಿಗೆ ಪಾಸ್ ಆಗಿರುವ ಅಂಕಪಟ್ಟಿ (Marks Card) ನೀಡಿರುವುದು ಬೆಳಕಿಗೆ ಬಂದಿದೆ. ಹಣ ನೀಡಿದರೆ ಸಾಕು ಫೇಲ್ ಆದವರಿಗೂ ವಿವಿ ಸಿಬ್ಬಂದಿ ಮಾರ್ಕ್ಸ್ ಕಾರ್ಡ್ ನೀಡುತ್ತಿದೆ. ನಾಗರಾಜ್ ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಈತ ಫೇಲ್ ಆಗಿದ್ದರೂ ವಿವಿ ಸಿಬ್ಬಂದಿ 30 ಸಾವಿರ ರೂಪಾಯಿ ಹಣ ಪಡೆದು ನಕಲಿ ಅಂಕಪಟ್ಟಿ ನೀಡಿದೆ. ಈ ಬಗ್ಗೆ ವಿದ್ಯಾರ್ಥಿ ತನಗೆ ವಿವಿಯಿಂದ ಅನ್ಯಾಯವಾಗಿದೆ ಎಂದು ಕುಲಪತಿಗೆ ದೂರು ನೀಡಿದ್ದಾನೆ.
ವಿವಿ ಮೌಲ್ಯಮಾಪನ ವಿಭಾಗದ ಸಿಬ್ಬಂದಿಯಿಂದಲೇ ಈ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ನಾಗರಾಜ್ ಕಲಬುರಗಿ ಎಕೆಎಸ್ಜಿವಿ ಕಾಲೇಜಿನ ವಿದ್ಯಾರ್ಥಿ. 2019ರಲ್ಲಿ ಫೇಲ್ ಆಗಿದ್ದ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನ ಹಾಕಿದ್ದ. ಈ ವೇಳೆ ವಿವಿ ಮೌಲ್ಯಮಾಪನ ವಿಭಾಗದ ಸಿಬ್ಬಂದಿ ಸಂಜೀವ್ ಎಂಬಾತ ಹಣ ಪಡೆದು ಪಾಸ್ ಆಗಿರುವ ನಕಲಿ ಅಂಕಪಟ್ಟಿ ನೀಡಿದ್ದಾನೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನ ಪ್ರಮುಖರು ಪುನಃ ದೆಹಲಿಗೆ ಹೋಗಿದ್ದಾರೆ, ಸಿದ್ದರಾಮಯ್ಯ ಮತ್ತು ಜಮೀರ್ ಒಟ್ಟಿಗೆ ಕಂಡರು!
ಮರು ಮೌಲ್ಯಮಾಪನದಲ್ಲಿ ತಾನು ಪಾಸಾಗಿದ್ದೇನೆ ಅಂತ ವಿದ್ಯಾರ್ಥಿ ಸಂತಸ ಪಟ್ಟಿದ್ದ. ಮುಂದೆ ವಿದ್ಯಾರ್ಥಿ ಎಮ್ಎಸ್ಡಬ್ಲೂ ಪದವಿ ಕೂಡ ಪಡೆದಿದ್ದಾನೆ. ಆದರೆ ವಿವಿಯ ಮೌಲ್ಯಮಾಪನ ವಿಭಾಗದಲ್ಲಿ 5, 6ನೇ ಸೆಮಿಸ್ಟರ್ನ ಅಂಕಪಟ್ಟಿ ನೀಡಲು ಕೇಳಿದಾಗ ಅಕ್ರಮ ಬಯಲಿಗೆ ಬಂದಿದೆ. ವಿದ್ಯಾರ್ಥಿಗೆ ಪಾಸ್ ಅಗಿರುವ ಅಂಕಪಟ್ಟಿ ನೀಡಿದ್ದರು, ದಾಖಲಾತಿಯಲ್ಲಿ ಪೇಲ್ ಅಂತ ದಾಖಲಾಗಿದೆ.
ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ: ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಖಾಯಂ ಮಾಡುವಂತೆ ಆಗ್ರಹಿಸಿ ಕಲಬುರಗಿ ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶ್ರಮಜೀವಿಗಳ ವೇದಿಕೆ ವತಿಯಿಂದ ಪ್ರತಿಭಟನೆ ನಡೆದಿದ್ದು, ರಾಜ್ಯದಲ್ಲಿ 4,500 ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದೇವೆ. ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Wimbledon 2022: ಒಂದೇ ದಿನದಲ್ಲಿ 2 ಪ್ರಕರಣ; ಕೊರೊನಾ ಸೋಂಕಿನಿಂದ ಕಳೆದ ವರ್ಷದ ಫೈನಲಿಸ್ಟ್ ಟೂರ್ನಿಯಿಂದ ಔಟ್!
Published On - 4:48 pm, Tue, 28 June 22