ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ ತಂಡದ ಭಾಗವಾಗಿದ್ದ ಹಾಕಿ ಆಟಗಾರ ವರೀಂದರ್ ಸಿಂಗ್ ಮಂಗಳವಾರ ಬೆಳಿಗ್ಗೆ ಜಲಂಧರ್‌ನಲ್ಲಿ ಕೊನೆಯುಸಿರೆಳಿದಿದ್ದಾರೆ. 1970 ರ ದಶಕದಲ್ಲಿ ಭಾರತದ ಅನೇಕ ಸ್ಮರಣೀಯ ವಿಜಯಗಳ ಭಾಗವಾಗಿದ್ದ ವರೀಂದರ್ ಅವರಿಗೆ 75 ವರ್ಷ ವಯಸ್ಸಾಗಿತ್ತು.
1 / 5
ವರೀಂದರ್ ಅವರು 1975 ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇದು ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಇದುವರೆಗಿನ ಭಾರತದ ಏಕೈಕ ಚಿನ್ನದ ಪದಕವಾಗಿದೆ. ಫೈನಲ್‌ನಲ್ಲಿ ಭಾರತ 2-1 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
2 / 5
ವರೀಂದರ್ 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ತಂಡದ ಭಾಗವಾಗಿದ್ದರು. 1973 ರ ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.
3 / 5
ವರೀಂದರ್ ಅವರ ಉಪಸ್ಥಿತಿಯೊಂದಿಗೆ ತಂಡವು 1974 ರಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿತು, ಮತ್ತೆ 1978 ರ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿತು. ಇದಲ್ಲದೇ 1975ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ವರೀಂದರ್ ಭಾರತ ತಂಡದಲ್ಲಿ ಭಾಗಿಯಾಗಿದ್ದರು.
4 / 5
ವರೀಂದರ್ ಅವರಿಗೆ 2007 ರಲ್ಲಿ ಪ್ರತಿಷ್ಠಿತ ಧ್ಯಾನಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ನೀಡಲಾಯಿತು. ಹಾಕಿ ಇಂಡಿಯಾ ವರೀಂದರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹಾಕಿ ಇಂಡಿಯಾ, 'ವರಿಂದರ್ ಸಿಂಗ್ ಅವರ ಸಾಧನೆಯನ್ನು ವಿಶ್ವದಾದ್ಯಂತ ಹಾಕಿ ಸಮುದಾಯ ಸ್ಮರಿಸುತ್ತದೆ' ಎಂದು ತಿಳಿಸಿದೆ.