ಅಕ್ರಮ ಗಣಿಗಾರಿಕೆ ನಿಂತಿದೆ, ಹಿರಿಯರು, ಸ್ವಾಮೀಜಿಗಳು ಎರಡೂ ಕಡೆಯವರನ್ನು ಕರೆದು ವಿವಾದ ಬಗೆಹರಿಸಬೇಕು: ಮುರುಗೇಶ್ ನಿರಾಣಿ

ಸಾಕಷ್ಟು ರಾಜಕಾರಣಿಗಳು ಕಲ್ಲು ಗಣಿಗಾರಿಕೆ ಹೊಂದಿದ್ದಾರೆ. ಅದು ಬೇರೆಯವರ ಹೆಸರಿನಲ್ಲಿ ಇರುವ ಸಾಧ್ಯತೆಯಿದೆ. ಹಾಗಾಗಿ ಯಾವ ರಾಜಕಾರಣಿ ಗಣಿಗಾರಿಕೆ ಹೊಂದಿದ್ದಾರೆ, ಹೊಂದಿಲ್ಲ ಎಂದು ಹೇಳಲು ಆಗಲ್ಲ ಎನ್ನುವುದಾಗಿ ಮುರುಗೇಶ್ ನಿರಾಣಿ ಪ್ರತಿಕ್ರಿಸಿದ್ದಾರೆ.

ಅಕ್ರಮ ಗಣಿಗಾರಿಕೆ ನಿಂತಿದೆ, ಹಿರಿಯರು, ಸ್ವಾಮೀಜಿಗಳು ಎರಡೂ ಕಡೆಯವರನ್ನು ಕರೆದು ವಿವಾದ ಬಗೆಹರಿಸಬೇಕು: ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ
Follow us
TV9 Web
| Updated By: Skanda

Updated on: Jul 10, 2021 | 12:46 PM

ಕಲಬುರಗಿ: ಕೆಆರ್​ಎಸ್​ ಡ್ಯಾಂ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆ ಸಂಬಂಧಿಸಿದ ವಿವಾದವನ್ನು ಎರಡೂ ಕಡೆಯವರು ಇಲ್ಲಿಗೇ ನಿಲ್ಲಿಸಬೇಕು ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದಾರೆ. ಗಣಿಗಾರಿಕೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬೇಬಿ ಬೆಟ್ಟದಲ್ಲಿ 70 ವರ್ಷದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಸದ್ಯ ಆ ರೀತಿಯಾಗಿ ಏನೂ ನಡೆಯುತ್ತಿಲ್ಲ. ನನ್ನ ಗಮನಕ್ಕೆ ಬಂದ ಮೇಲೆ ಅಕ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಇನ್ನೂ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ. ನನಗೆ ಮಾಹಿತಿ ನೀಡಲಿ. ಈಗ ಎರಡೂ ಕಡೆಯವರು ಈ ವಿವಾದವನ್ನ ಇಲ್ಲಿಗೆ ನಿಲ್ಲಿಸಬೇಕು ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಅವರು ಹಿರಿಯರಿದ್ದಾರೆ, ಈ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬೇಕು. ಯಾರಾದರೂ ಹಿರಿಯರು, ಸ್ವಾಮೀಜಿಗಳು ಎರಡೂ ಕಡೆಯವರನ್ನು ಕರೆದು ವಿವಾದ ಬಗೆಹರಿಸಬೇಕು. ಸಾಕಷ್ಟು ರಾಜಕಾರಣಿಗಳು ಕಲ್ಲು ಗಣಿಗಾರಿಕೆ ಹೊಂದಿದ್ದಾರೆ. ಅದು ಬೇರೆಯವರ ಹೆಸರಿನಲ್ಲಿ ಇರುವ ಸಾಧ್ಯತೆಯಿದೆ. ಹಾಗಾಗಿ ಯಾವ ರಾಜಕಾರಣಿ ಗಣಿಗಾರಿಕೆ ಹೊಂದಿದ್ದಾರೆ, ಹೊಂದಿಲ್ಲ ಎಂದು ಹೇಳಲು ಆಗಲ್ಲ ಎನ್ನುವುದಾಗಿ ಮುರುಗೇಶ್ ನಿರಾಣಿ ಪ್ರತಿಕ್ರಿಸಿದ್ದಾರೆ.

ಹೇಳಿಕೆ ನೀಡದಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ ಹೆಚ್​.ಡಿ.ದೇವೇಗೌಡ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ನಡುವಿನ ಮಾತಿನ ಸಮರ ತಾರಕಕ್ಕೇರುತ್ತಿರುವುದನ್ನು ಗಮನಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಈ ಬಗ್ಗೆ ಯಾರೂ ಅನಗತ್ಯ ಹೇಳಿಕೆ ನೀಡಬಾರದು ಎಂದು ಪಕ್ಷದ ಮುಖಂಡರಿಗೆ ಸೂಚನೆ ನೀಡುವ ಮೂಲಕ ಪಕ್ಷಕ್ಕಾಗಬಹುದಾದ ಹಾನಿ ತಡೆಗಟ್ಟಲು ಮುಂದಾಗಿದ್ದಾರೆ. ಈ ರೀತಿ ಹೇಳಿಕೆಯಿಂದ ಜನರಿಗೆ ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಹಾನಿ ಆಗುತ್ತದೆ. ಇದೇ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ವಿರೋಧಿಗಳು ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಕೆಲಸ ಮಾಡುತ್ತಾರೆ. ಹೀಗಾಗಿ ಯಾರೂ ಅನಗತ್ಯ ಹೇಳಿಕೆ ನೀಡಕೂಡದು ಎಂದು ದೇವೇಗೌಡ ಸೂಚಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಸ್ಥಳೀಯ ಚುನಾವಣೆ ಮೇಲೆ ಈ ಬೆಳವಣಿಗೆಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ, ಬೀಸು ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಉಂಟಾಗುವ ಅಪಾಯವೂ ಇದೆ. ಹೀಗಾಗಿ ಸ್ವಲ್ಪ ದಿನ ಈ ವಿಚಾರವಾಗಿ ಹೇಳಿಕೆ ಬೇಡ ಎಂದು ಸೂಚನೆ ನೀಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿದಿನ ಇದೇ ರೀತಿ ಹೇಳಿಕೆ ನೀಡಿದರೆ ಜನರಿಗೆ ಬೇರೆ ರೀತಿಯ ಸಂದೇಶ ಹೊಗುತ್ತದೆ. ಮಾತಿನ ಸಮರದಿಂದ ಪಕ್ಷಕ್ಕೆ ಹೊಡೆತ ಬೀಳುತ್ತದೆ ಹೀಗಾಗಿ ಸುಮಲತಾ, ಕುಮಾರಸ್ವಾಮಿ ಜಟಾಪಟಿ ಬಗ್ಗೆ ಬೇರೆಯವರೂ ಯಾವ ಹೇಳಿಕೆ ಕೊಡಬೇಡಿ ಎಂದು ಸೂಚಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ನಿಲ್ಲದಿದ್ದಲ್ಲಿ ನಾನೂ ಸುಮಲತಾರ ಹಾದಿಯಲ್ಲೇ ಹೋರಾಡುವೆ: ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ 

ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್​ಲೈನ್​ಗೆ ಅನ್ನದಾನಿ ಎಚ್ಚರಿಕೆ