ಕಲಬುರಗಿ, ಜನವರಿ 18: ನಗರದ ಎಂ.ಜಿ.ರಸ್ತೆಯ ಯುನೈಟೆಡ್ ಡಿಗ್ರಿ ಖಾಸಗಿ ಕಾಲೇಜಿನಲ್ಲಿ ಬಿಸಿಎ ಫಸ್ಟ್ ಸೆಮಿಸ್ಟರ್ ಗಣಿತ ಪರೀಕ್ಷೆ (exam) ಯಲ್ಲಿ ಅವಧಿ ಮುಗಿದ 15 ನಿಮಿಷ ನಂತರವೂ ಪರೀಕ್ಷೆ ಬರೆಸಲಾಗಿದೆ. ಆ ಮೂಲಕ ಕಲಬುರಗಿಯಲ್ಲಿ ಮತ್ತೊಂದು ಪರೀಕ್ಷೆ ಅಕ್ರಮ ಬಯಲಾಗಿದೆ. ಅಕ್ರಮ ಹಿನ್ನೆಲೆ ಪರೀಕ್ಷಾ ಕೊಠಡಿಗೆ ಎಬಿವಿಪಿ ಕಾರ್ಯಕರ್ತರಿಂದ ಲಗ್ಗೆ ಇಡಲಾಗಿದ್ದು, ಪರೀಕ್ಷಾ ಅಕ್ರಮದ ಬಗ್ಗೆ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ ಯುನೈಟೆಡ್ ಡಿಗ್ರಿ ಕಾಲೇಜು ಸಿಬ್ಬಂದಿ ಆರೋಪ ನಿರಾಕರಿಸಿದ್ದಾರೆ. 80 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಕಡಿಮೆ ಬಂದಿದ್ದವು. ಜೆರಾಕ್ಸ್ ಮಾಡಿಸಿ ಹಂಚಿಕೆ ಮಾಡಲು 15 ನಿಮಿಷ ವಿಳಂಬವಾಗಿದೆ. ಹೀಗಾಗಿ 80 ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿಯಾಗಿ ಕೊಟ್ಟಿದ್ದೇವೆ. ಯಾವುದೇ ಅಕ್ರಮ ನಡೆಸಿಲ್ಲವೆಂದು ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.
ಮಂಗಳೂರು: ನಗರದ ಮೂರು ಕೇಂದ್ರಗಳಲ್ಲಿ ಕರ್ನಾಟಕ ಸರ್ಕಾರದ ಲೆಕ್ಕ ಪರಿಶೋಧನಾ ಇಲಾಖೆಯ ನೌಕರಿಗಾಗಿ ಕೆಪಿಎಸ್ಸಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಸರ್ಕಾರಿ ಹುದ್ಧೆಗಾಗಿ ನಡೆದ ಆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಅನ್ನೋದು ನಿಯೋಜಿಸಿದ ಭದ್ರತೆಯಲ್ಲೇ ಗೊತ್ತಾಗಿತ್ತು.
ಇದನ್ನೂ ಓದಿ: ಕಲಬುರಗಿ: ವಿದ್ಯಾರ್ಥಿಗಳಿಂದ ಮನೆಗೆಲಸ, ಶೌಚಾಲಯ ಸ್ವಚ್ಛತೆ: ವಿಡಿಯೋ ವೈರಲ್
ಭದ್ರತೆ ಅಂದ್ರೆ ಏನೂ ಅನ್ನೋದೇ ಗೊತ್ತಿಲ್ಲ ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಿಂದ ಪರೀಕ್ಷಾರ್ಥಿಗಳ ತಪಾಸಣೆ ಮಾಡಲಾಗಿತ್ತು. ಈ ಮೂಲಕ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಹೊಡೆದಿದ್ದು ಏಜೆನ್ಸಿಯ ನಿರ್ಲಕ್ಷವೇ ಇದಕ್ಕೆ ಕೈಗನ್ನಡಿಯಾಗಿತ್ತು.
ಮಂಗಳೂರಿನ ಬಲ್ಮಠದಲ್ಲಿರುವ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಸೆಕ್ಯುರಿಟಿ ಅನ್ನೋ ಜಾಕೆಟ್ ಹಾಕಿಕೊಂಡು ಬಂದ್ದಿದ ಹತ್ತನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ನಗರದ ಬೇರೆ ಬೇರೆ ಶಾಲೆಯಿಂದ ಬಂದಿದ್ದರು. ಹಾಗಂತ ಇವರಿಗೆ ಇಲ್ಲಿ ಯಾವ ಪರೀಕ್ಷೆ ನಡಿತಾ ಇದೆ ಅನ್ನೋದೇ ಗೊತ್ತಿಲದಿದ್ರೂ, ಪರೀಕ್ಷೆ ಹಾಜರಾಗುತ್ತಿದ್ದ ಅಭ್ಯರ್ಥಿಗಳ ತಪಾಸಣೆ ನಡೆಸಿದ್ದರು.
ಇದನ್ನೂ ಓದಿ: ಇನ್ನು 15 ದಿನಕ್ಕೆ 545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆ, ವೇಳಾಪಟ್ಟಿ ಹೀಗಿದೆ
ಇಂತಹ ಒಂದು ಭದ್ರತಾ ವ್ಯವಸ್ಥೆ ಸರ್ಕಾರ ನಡೆಸುತ್ತಿರುವುದು ಕೆಪಿಎಸ್ಸಿ ಪರೀಕ್ಷೆಯ ಕರ್ಮಾಕಾಂಡಕ್ಕೆ ಹಿಡಿದ ಕೈಗನ್ನಡಿ ಆಗಿತ್ತು. ಮಂಗಳೂರಿನ ಮೂರು ಕೇಂದ್ರಗಳಲ್ಲಿ ನಡೆದಿದ್ದ ಕೆಪಿಎಸ್ಸಿ ಪರೀಕ್ಷಾ
ಕೇಂದ್ರದಲ್ಲಿ ಇಂತಹ ಒಂದು ತಪಾಸಣಾ ವ್ಯವಸ್ಥೆ ಮಾಡಲಾಗಿತ್ತು. ಕೆಪಿಎಸ್ಸಿ ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಸೆಕ್ಷನ್ 144 ಅಳವಡಿಸಲಾಗಿದೆಯಾದ್ರೂ ಪೊಲೀಸರು ಭದ್ರತೆಗೆ ಇರಬೇಕಾದ ಜಾಗದಲ್ಲಿ
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಮಕ್ಕಳು ಕಂಡು ಬಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 pm, Thu, 18 January 24