ಕಲಬುರಗಿ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ 1 ಕೋಟಿ ರೂ ಡ್ರಾ: ಪಿಎ ಸೇರಿ ಐವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2025 | 3:37 PM

ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರ ನಕಲಿ ಸಹಿಯನ್ನು ಬಳಸಿ 1.32 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರ ಪಿಎ ಸೇರಿದಂತೆ ಐವರನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಈ ಹಗರಣದಲ್ಲಿ ಮೂರು ಚೆಕ್‌ಗಳನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ 1 ಕೋಟಿ ರೂ ಡ್ರಾ: ಪಿಎ ಸೇರಿ ಐವರ ಬಂಧನ
ಕಲಬುರಗಿ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ 1 ಕೋಟಿ ಹಣ ಡ್ರಾ: ಪಿಎ ಸೇರಿ ಐವರ ಬಂಧನ
Follow us on

ಕಲಬುರಗಿ, ಜನವರಿ 15: ಕಲಬುರಗಿ ಪಾಲಿಕೆ ಆಯುಕ್ತರ ಸಹಿ ನಕಲು (Forged signature) ಮಾಡಿ ಹಣ ಡ್ರಾ ಪ್ರಕರಣದಲ್ಲಿ  ಪಾಲಿಕೆ ಆಯುಕ್ತರ ಪಿಎ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಿಎ ಮೊಹಮ್ಮದ್​​​ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್ ಮತ್ತು ಮೊಹಮ್ಮದ್​​​​​ ರೆಹಮಾನ್ ಬಂಧಿತರು. ಬಂಧಿತರಿಂದ 30 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆಕ್​ಬುಕ್​ನಲ್ಲಿ ಆಯುಕ್ತರ ನಕಲಿ ಸಹಿ ಮಾಡಿ ಬ್ಯಾಂಕ್​ಗೆ 1 ಕೋಟಿ 32 ಲಕ್ಷ ರೂ. ಹಣ ವಿತ್​ ಡ್ರಾಗೆ 3 ಚೆಕ್​​​ಗಳನ್ನು ನೌಕರರು ಕಳಿಸಿದ್ದರು. ಒಂದು ಚೆಕ್​ ನೀಡಿ 35,56,640 ರೂ. ಹಣ ಡ್ರಾ ಮಾಡಿಕೊಂಡಿದ್ದರು. ಬಳಿಕ ಮತ್ತೆರಡು ಚೆಕ್​​ಗಳನ್ನು ಖದೀಮರು ಡ್ರಾಗೆ ಕಳುಹಿಸಿದ್ದರು.

ಇದನ್ನೂ ಓದಿ: ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: 6 ಮಂದಿ ವಿರುದ್ಧ ಎಫ್​ಐಆರ್​

ಅನುಮಾನ ಬಂದು ಆಯುಕ್ತರ ಕಚೇರಿಗೆ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದರು. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡು ದೂರು ದಾಖಲಿಸಿದ್ದ ಪಾಲಿಕೆ, ಇದೀಗ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಐತಿಹಾಸಿಕ ಬನಶಂಕರಿ ಜಾತ್ರೆಯಲ್ಲಿ ಕಳ್ಳರ ಹಾವಳಿ: ಅನುಮಾನಾಸ್ಪದ 6 ಕಳ್ಳರು ಪೊಲೀಸ್​ ವಶಕ್ಕೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಐತಿಹಾಸಿಕ ಬನಶಂಕರಿ ಜಾತ್ರೆಯಲ್ಲಿ ಚಿನ್ನದ ಸರ​, ಬೈಕ್, ಮೊಬೈಲ್​ ಕಳ್ಳತನ ಮಾಡುತ್ತಿದ್ದ ಆರು ಮಂದಿ ಶಂಕಿತ ಕಳ್ಳರ ಗ್ಯಾಂಗ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಿಂಗಳುಗಳ ಕಾಲ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆ ನಡೆಯುತ್ತದೆ. ಪೊಲೀಸ್​ ಠಾಣೆ ಬೂತ್​ನಲ್ಲಿ ದೂರುದಾರರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ನೋಟ್ ಮೇಲೆ “ನಮ್ಮ ಅತ್ತೆ ಬೇಗ ಸಾಯಬೇಕು” ಎಂದು ಬರೆದು ಭಾಗ್ಯವಂತಿ ದೇವಿಗೆ ಹರಕೆ!

ಲಕ್ಷಾಂತರ ಜನ ಸೇರುವ ಜಾತ್ರೆಯಲ್ಲಿ ಬೀಡುಬಿಟ್ಟಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್, ಜನಜಂಗುಳಿಯಲ್ಲಿ ನಿಮಿಷಾರ್ಧದಲ್ಲಿ ಕದ್ದು ಮಾಯವಾಗುತ್ತಾರೆ. 20 ಕ್ಕೂ ಹೆಚ್ಚು ಮೊಬೈಲ್, ಚಿನ್ನದ ಚೈನ್, ಒಂದು ಬೈಕ್ ಹಾಗೂ ಒಂದು ಎರ್ಟಿಗಾ ಕಾರ್ ಸೇರಿದಂತೆ ಕಳ್ಳರು ಪರ್ಸ್ ಎಗರಿಸಿದ್ದರು. ಸದ್ಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಶಂಕಿತ ಕಳ್ಳರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.