AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಅಕ್ರಮ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳಿಬ್ಬರ ಅಮಾನತು, ಇಂದು ವಿಚಾರಣೆ ಸಾಧ್ಯತೆ

ಪಿಎಸ್ಐ ಪರೀಕ್ಷೆ ವೇಳೆ ಕಲಬುರಗಿಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ನಿಯಮ ಉಲ್ಲಂಘನೆ ಯಿಂದಲೇ ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಸಾಧ್ಯವಾಗಿದ್ದು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಕಲಬುರಗಿಯಲ್ಲಿ ಸಿಪಿಐ ದಿಲೀಪ್ ಸಾಗರ್, R.R.ಹೊಸಮನಿ ಡಿವೈಎಸ್‌ಪಿ ಅಮಾನತು ಮಾಡಲಾಗಿದೆ.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಅಕ್ರಮ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳಿಬ್ಬರ ಅಮಾನತು, ಇಂದು ವಿಚಾರಣೆ ಸಾಧ್ಯತೆ
ಕಲಬುರಗಿ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಸಾಗರ್ ಮತ್ತು ಬೆರಳಚ್ಚು ವಿಭಾಗದ ಡಿವೈಎಸ್ಪಿ R.R.ಹೊಸಮನಿ
TV9 Web
| Edited By: |

Updated on:May 05, 2022 | 9:26 AM

Share

ಬೆಂಗಳೂರು: ರಾಜ್ಯದಲ್ಲಿ ನಡೆದ ಪಿಎಸ್‌ಐ ಅಕ್ರಮದ ತನಿಖೆ ಮುಂದುವರಿದಿದೆ. ಪೊಲೀಸ್ ಇಲಾಖೆಯಲ್ಲಿನ ಕುಳಗಳೇ ಬಲೆಗೆ ಬೀಳ್ತಿವೆ. ಇನ್‌ ಸರ್ವೀಸ್‌ ಕೋಟಾದಲ್ಲಿ ಪರೀಕ್ಷೆ ಬರೆದು ಅಕ್ರಮ ಎಸಗಿದ್ದ ಶಾಸಕರೊಬ್ಬರ ಗನ್‌ಮ್ಯಾನ್‌ ಈಗಾಗಲೇ ಅರೆಸ್ಟ್‌ ಆಗಿದ್ದು, ಇವತ್ತು ವಿವಿಐಪಿ ಭದ್ರತಾ ವಿಭಾಗದ ಕಾನ್ಸ್‌ಟೇಬಲ್ ಯಶವಂತ್ ದೀಪ್ ಅರೆಸ್ಟ್‌ ಆಗಿದ್ದಾರೆ. ಬೆಂಗಳೂರಿನ ಹೈಗ್ರೌಂಡ್‌ ಠಾಣೆಯ ಮಮತೇಶ್ ಗೌಡ, ಯಶವಂತ್ ದೀಪ್, ಗಜೇಂದ್ರ ಸೇರಿದಂತೆ ಮೂವರು ಪೇದೆಗಳ ವಿರುದ್ಧ FIR ದಾಖಲಾಗಿದೆ. ಇನ್ನು 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳಿಬ್ಬರ ಅಮಾನತು ಮಾಡಲಾಗಿದೆ. ಕಲಬುರಗಿ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಸಾಗರ್ ಮತ್ತು ಬೆರಳಚ್ಚು ವಿಭಾಗದ ಡಿವೈಎಸ್ಪಿ R.R.ಹೊಸಮನಿ ಅಮಾನತು ಮಾಡಲಾಗಿದ್ದು ಇಂದು ವಿಚಾರಣೆ ನಡೆಯಲಿದೆ. ಇವರು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಉಸ್ತುವಾರಿಯಾಗಿದ್ದರು. ಉತ್ತರ ಪತ್ರಿಕೆ ಅರ್ಧಗಂಟೆ ತಡವಾಗಿ ತಲುಪಿಸಿದ್ದರು ಜೊತೆಗೆ ಅಕ್ರಮ ತಡೆಯುವಲ್ಲಿ ವಿಫಲ ಹಿನ್ನೆಲೆ ವಿಚಾರಣೆ ಸಾಧ್ಯತೆ.

ಪಿಎಸ್ಐ ಪರೀಕ್ಷೆ ವೇಳೆ ಕಲಬುರಗಿಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ನಿಯಮ ಉಲ್ಲಂಘನೆ ಯಿಂದಲೇ ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಸಾಧ್ಯವಾಗಿದ್ದು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಕಲಬುರಗಿಯಲ್ಲಿ ಸಿಪಿಐ ದಿಲೀಪ್ ಸಾಗರ್, R.R.ಹೊಸಮನಿ ಡಿವೈಎಸ್‌ಪಿ ಅಮಾನತು ಮಾಡಲಾಗಿದೆ.

ಇನ್ನಷ್ಟು ಪಿಎಸ್ಐ ನೇಮಕಾತಿ ಅಕ್ರಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎರಡು ಕಡೆ ಹ್ಯಾಂಡಿ ಕ್ಯಾಮ್ ನಿಂದ ವಿಡಿಯೋ ಚಿತ್ರೀಕರಣ ಮಾಡಬೇಕು 1) ಪ್ರಶ್ನೆ ಪತ್ರಿಕೆ ಪರೀಕ್ಷೆ ಕೇಂದ್ರಕ್ಕೆ ತರಲು ಇನ್ಸ್ಪೆಕ್ಟರ್ ಹಾಗೂ ಎಸಿಪಿ ಕೈ ಸೇರಿದ ಕ್ಷಣದಿಂದ, ಪರೀಕ್ಷೆ ಹಾಲ್ ನಲ್ಲಿ ಸೀಲ್ ಇರುವ ಕವರ್ ತೆರೆದು ಅಭ್ಯರ್ಥಿಗಳಿಗೆ ನೀಡುವ ವರೆಗೂ ಹ್ಯಾಂಡಿ ಕ್ಯಾಮ್ ನಿಂದ ವಿಡಿಯೋ ಚಿತ್ರೀಕರಣ ಮಾಡಬೇಕು 2) ಅಭ್ಯರ್ಥಿಗಳಿಂದ ಪರೀಕ್ಷೆ ಬಳಿಕ ಒಎಂಆರ್ ಶೀಟ್ ಪಡೆಯುವಾಗ ಶುರುಮಾಡಿ ಒಎಂಆರ್ ಶೀಟ್ ಗಳನ್ನು ಸೀಲ್ ಮಾಡಿ ಅದನ್ನು ಸ್ಟ್ರಾಂಗ್ ರೂಮ್ ಗೆ ತಲುಪಿಸೊ ವರೆಗೆ ಹ್ಯಾಂಡಿ ಕ್ಯಾಮ್ ನಿಂದ ವಿಡಿಯೋ ಚಿತ್ರೀಕರಣ ಮಾಡಬೇಕು ಆದ್ರೆ ಈ ಎರಡೂ ಕಡೆ ಹ್ಯಾಂಡಿ ಕ್ಯಾಮ್ ನಿಂದ ವಿಡಿಯೋ ಚಿತ್ರೀಕರಣ ಮಾಡದೆ ನಿಯಮ ಉಲ್ಲಂಘಿಸಲಾಗಿದೆ.

ಟ್ರಾವಲ್ ಸಮಯದಲ್ಲಿ ಸಹ ಹ್ಯಾಂಡಿ ಕ್ಯಾಮ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಬೇಕು ಈ ಸಮಯದಲ್ಲಿ ಇನ್ಚಾರ್ಚ್ ಇನ್ಸ್ಪೆಕ್ಟರ್ ಹ್ಯಾಂಡಿ ಕ್ಯಾಮ್ ಅಪರೇಟ್ ಮಾಡಬೇಕಿರೊದು ನಿಯಮ. ಈ ವೇಳೆ ಕಲಬುರಗಿ ಯಲ್ಲಿ ನಲವತ್ತೈದು ನಿಮಿಷಗಳ ಕಾಲ ಹ್ಯಾಂಡಿ ಕ್ಯಾಮರಾ ಆಫ್ ಆಗಿದೆ. ಈ ಸಮಯದಲ್ಲಿ ಅಲ್ಲಿ ಅಕ್ರಮ ನಡೆದಿದೆ ಎಂಬುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ. ನಲವತ್ತೈದು ನಿಮಿಷಗಳ ಸಮಯದಲ್ಲಿ ಒಎಂಆರ್ ಶೀಟ್ ತಿದ್ದಲಾಗಿದೆ. ಇನ್ನು ಸಿಸಿಟಿವಿಯಲ್ಲಿ ಪರೀಕ್ಷೆ ಬರೆಯುವುದು ಸಹ ರೆಕಾರ್ಡ್ ಮಾಡಲಾಗುತ್ತೆ. ಸಿಸಿಟಿವಿ ವಿಡಿಯೋ ನೋಡಿದಾಗ ಅಲ್ಲಿ ಯಾವುದೇ ರೀತಿ ಅಕ್ರಮ ಕಂಡಿಲ್ಲಾ. ಅದ್ರೆ ಹ್ಯಾಂಡಿ ಕ್ಯಾಮ್ ಪರೀಕ್ಷೆ ಹಾಲ್ ನಿಂದ ಹೊರ ಬಂದ ಬಳಿಕ ನಲವತ್ತೈದು ನಿಮಿಷಗಳ ಗ್ಯಾಪ್ ಕಂಡು ಬಂದಿದೆ. ಸದ್ಯ ಅನುಮಾನ ಇರೊ ಎಲ್ಲಾ ಪರೀಕ್ಷೆ ಕೇಂದ್ರದ ಹ್ಯಾಂಡಿ ಕ್ಯಾಮ್ ಹಾಗು ಸಿಸಿಟಿವಿ ದೃಶ್ಯಗಳನ್ನು ಸಿಐಡಿ ತಂಡ ಪರಿಶೀಲನೆ ನಡೆಸುತ್ತಿದೆ.

Published On - 9:26 am, Thu, 5 May 22