ಕಲಬುರಗಿ: ಜಿಲ್ಲೆಯ ಹಲವೆಡೆ ಪದೇಪದೆ ಭೂಕಂಪ ಹಿನ್ನೆಲೆ ಭೂಮಿ ಕಂಪಿಸಿದ ಗ್ರಾಮಗಳಿಗೆ ಭಾನುವಾರ (ಅಕ್ಟೋಬರ್ 17) ಎನ್ಜಿಆರ್ಐ (NGRI) ತಂಡ ಭೇಟಿ ನೀಡಲಿದೆ. ಹೊಸಳ್ಳಿ ಹೆಚ್ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ಯಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊಸಳ್ಳಿ ಹೆಚ್, ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಹಲವೆಡೆ ಕಂಪನ ಉಂಟಾಗಿತ್ತು. ಕಳೆದ 10 ದಿನಗಳಿಂದ 5-6 ಬಾರಿ ಭೂ ಕಂಪನವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್ಜಿಆರ್ಐ ತಂಡ ಭೌಗೋಳಿಕ ಸರ್ವೆ ಮಾಡಲಿದೆ. ಗ್ರಾಮಗಳಲ್ಲಿ ಜನರಿಗೆ ಶೆಡ್ ಮತ್ತು ಕಾಳಜಿ ಕೇಂದ್ರ ಓಪನ್ ಮಾಡಲಿರುವ ಬಗ್ಗೆಯೂ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಹಲವೆಡೆ ಪದೇಪದೆ ಭೂಕಂಪ ವಿಚಾರಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಲು ಭೂಕಂಪ ಪೀಡಿತ ಗ್ರಾಮಗಳಿಗೆ ಭೂವಿಜ್ಞಾನಿಗಳ ತಂಡ ಭೇಟಿ ಅಕ್ಟೋಬರ್ 13 ರಂದು ನೀಡಿದ್ದರು. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ತಂಡದಿಂದ ಪರಿಶೀಲನೆ ಮಾಡಲಾಗಿತ್ತು. ಕಿರಿಯ ಭೂವಿಜ್ಞಾನಿ ರಮೇಶ್ ದಿಕ್ಬಾಲ್, ವೈಜ್ಞಾನಿಕ ಸಹಾಯಕ ಸಂತೋಷ್ ಸೇರಿ ಆರು ಜನರು ಭೇಟಿ ಮಾಡಿದ್ದರು. ಗಡಿಕೇಶ್ವರ, ಹಲಚೇರಾ, ಹೊಸಳ್ಳಿ ಸೇರಿ ಕೆಲ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಭೂಕಂಪದ ಕೇಂದ್ರ ಬಿಂದುವಿಗೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಕಾಳಗಿ, ಚಿಂಚೋಳಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಭೂಕಂಪನ ಆಗಿತ್ತು. ಕಳೆದ ಕೆಲವು ದಿನಗಳಲ್ಲಿ ಕೆಲವು ಬಾರಿ ಭೂಕಂಪನ ಉಂಟಾಗಿತ್ತು. ಇದರಿಂದ ಜನರು ಬಹಳಷ್ಟು ಆತಂಕಕ್ಕೆ ಒಳಗಾಗಿದ್ದರು. ಗಡಿಕೇಶ್ವರ ಗ್ರಾಮದಲ್ಲಿ ನಿರಂತರವಾಗಿ ಭೂಕಂಪನ ಹಿನ್ನೆಲೆ ಸ್ಥಳೀಯ ಜನರು ಗ್ರಾಮ ತೊರೆದು ಹೋಗಲು ಶುರುಮಾಡಿದ್ದಾರೆ. ಇಂದು ಕೂಡಾ ಜನರು ಗ್ರಾಮ ತೊರೆದು ಹೋಗುತ್ತಿರುವ ದೃಶ್ಯ ಕಂಡುಬಂದಿತ್ತು. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪ ಭಯ ಹಿನ್ನೆಲೆಯಲ್ಲಿ ಜನರು ಮನೆ ತೊರದು ಬೇರಡೆ ಹೋಗುತ್ತಿದ್ದಾರೆ. ಸಂಬಂಧಿಕರ ಬೇರೆ ಬೇರೆ ಗ್ರಾಮಗಳಿಗೆ ಜನ ತೆರಳಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಜಿಲ್ಲೆಯ ಹಲವೆಡೆ ಭೂಕಂಪ ವಿಚಾರ; ಪರಿಶೀಲನೆ ನಡೆಸಲು ಭೂವಿಜ್ಞಾನಿಗಳ ತಂಡ ಭೇಟಿ