ಪಕ್ಕದ ಜಮೀನಿನವರನ್ನ ಜೈಲಿಗೆ ಕಳಿಸಬೇಕೆಂದು ಸ್ವಂತ ಮಗಳನ್ನೇ ಕೊಂದ ತಂದೆ
ಕಲಬುರಗಿಯ ಕಲ್ಲಹಂಗರಗಾ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 17 ವರ್ಷದ ವಿಕಲಚೇತನ ಮಗಳನ್ನು ತಂದೆ ಕೊಲೆ ಮಾಡಿ, ಬಳಿಕ ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ಹೋಗಿ ಕೊನೆಗೆ ಪೊಲೀಸರ ಅತಿಥಿ ಆಗಿರುವಂತಹ ಘಟನೆ ನಡೆದಿದೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ, ನವೆಂಬರ್ 21: ವಿಕಲಚೇತನ ಮಗಳನ್ನ (Daughter) ಕೊಲೆ (kill) ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿರುವಂತಹ ಘಟನೆ ಕಲಬುರಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದೆ. ಮಂಜುಳಾ (17) ಕೊಲೆಯಾದ ಮಗಳು. ಗುಂಡೆರಾವ್ ನೀಲೂರ ಕೊಲೆ ಮಾಡಿದ ತಂದೆ. ಸಬ್ ಅರ್ಬನ್ ಪೊಲೀಸರ ತನಿಖೆ ವೇಳೆ ಆತ್ಮಹತ್ಯೆಯಲ್ಲ ಕೊಲೆ ಎನ್ನುವುದು ಬೆಳಕಿಗೆ ಬಂದಿದೆ.
ನಡೆದದ್ದೇನು?
ಜಮೀನು ವ್ಯಾಜ್ಯದ ವಿಚಾರದಲ್ಲಿ ಪಕ್ಕದ ಜಮೀನಿನವರ ಕಾಟ ಹಿನ್ನೆಲೆ ಅವರನ್ನು ಜೈಲಿಗೆ ಕಳಿಸಬೇಕು ಅಂತ ತಂದೆ ಗುಂಡೆರಾವ್ ನೀಲೂರ ಸ್ವಂತ ತಮ್ಮ ಮಗಳನ್ನೇ ನೇಣು ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಪಕ್ಕದ ಜಮೀನಿನವರ ಹೆಸರು ಡೆತ್ನೋಟ್ನಲ್ಲಿ ಬರೆದು ಮಗಳ ಕೈಯಲ್ಲಿಟ್ಟು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ ಅನುಮಾನಗೊಂಡು ವಿಚಾರಣೆ ಮಾಡಿದ ಪೊಲೀಸರು ಈ ವೇಳೆ ಆತ್ಮಹತ್ಯೆಯಲ್ಲ ಕೊಲೆ ಅನ್ನೋದು ಬೆಳಕಿಗೆ ಬಂದಿದೆ.
ಕಾರು ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಹೊರವಲಯದ ಸಿದ್ಧಾರ್ಥ್ ನಗರ ಕ್ರಾಸ್ ಬಳಿ ನಡೆದಿದೆ. ಕೋಟಗ್ಯಾಳ್ ಗ್ರಾಮದ ನಿವಾಸಿ ಲಹುಕುಮಾರ ಬಿರಾದಾರ (35) ಮೃತ ಬೈಕ್ ಸವಾರ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರಿಗೆ ವಂಚನೆ ಆರೋಪಿ ಸೂಸೈಡ್: ಹೆದರಿ ಪ್ರಾಣ ಕಳೆದುಕೊಂಡ್ನಾ ಗಿರೀಶ್?
ಎರಡು ಬೈಕ್‌ಗಳಲ್ಲಿ ಮೂವರು ಸ್ನೇಹಿತರು ಮಾತನಾಡುತ್ತ ತೆರಳುತ್ತಿದ್ದರು. ಈ ವೇಳೆ ಎದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಿನ್ನೆ ರಾತ್ರಿ 7:30ರ ಸುಮಾರಿಗೆ ಸಂಭವಿಸಿದ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಇದನ್ನೂ ಓದಿ: ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ: ಕಾರಣವೇನು?
ಇನ್ನು ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅರ್ಜುನ್ ಹಾಗೂ ಇನ್ನೊಂದು ಬೈಕ್ ಸವಾರ ಬಾಲಾಜಿ ಗಂಭೀರ ಗಾಯಗೊಂಡಿದ್ದಾರೆ. ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Fri, 21 November 25



