ಜಾತಿ ಮತಗಳ ಕ್ರೋಢೀಕರಣಕ್ಕೆ ಮುಂದಾದ ಕಾಂಗ್ರೆಸ್! ಅಭ್ಯರ್ಥಿ ಗೆಲ್ಲಿಸಲು ಆಯಾ ಸಮಾಜದ ಶಾಸಕರು, ಮುಖಂಡರಿಗೆ ಟಾಸ್ಕ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 24, 2024 | 2:47 PM

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಎರಡು ಪಕ್ಷಗಳು ಅಬ್ಬರದ ಪ್ರಚಾರ ಕೈಗೊಳ್ಳುತ್ತಿವೆ. ಶತಾಯಗತಾಯ ಈ ಬಾರಿಯೂ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ವರ್ಕೌಟ್ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ಜಾತಿ ಮತಗಳನ್ನ ಕ್ರೋಡೀಕರಣ ಮಾಡಲು ಆಯಾ ಸಮಾಜದ ಮುಖಂಡರುಗಳಿಗೆ ಟಾಸ್ಕ್ ನೀಡಿದೆ.

ಜಾತಿ ಮತಗಳ ಕ್ರೋಢೀಕರಣಕ್ಕೆ ಮುಂದಾದ ಕಾಂಗ್ರೆಸ್! ಅಭ್ಯರ್ಥಿ ಗೆಲ್ಲಿಸಲು ಆಯಾ ಸಮಾಜದ ಶಾಸಕರು, ಮುಖಂಡರಿಗೆ ಟಾಸ್ಕ್
ಸಿದ್ದರಾಮಯ್ಯ, ಮಲ್ಲಿಕಾರ್ಜುನ್​ ಖರ್ಗೆ
Follow us on

ಕಲಬುರಗಿ, ಏ.24: ಲೋಕಸಭಾ ಚುನಾವಣೆ(Lok sabha election) ಹಿನ್ನಲೆ ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದ್ದು, ಕಲಬುರಗಿ (Kalaburagi)ಯಲ್ಲಿ ಕಳೆದ ಬಾರಿ ಸೋಲಿಲ್ಲದ ಸರದಾರನೆಂದೆ ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆರನ್ನ(Mallikarjun Kharge) ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್‌ಗೆ(Umesh G Jadhav) ಈ ಬಾರಿ ಸೋಲಿ‌ನ ರೂಚಿ ತೋರಿಸಲು ಕಾಂಗ್ರೆಸ್ ಜಾತಿವಾರು ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ. ಹೌದು, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲ್ಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಆಯಾ‌ ಸಮಾಜದ ಶಾಸಕರು ಮತ್ತು ಮುಖಂಡರುಗಳಿಗೆ ಜಾತಿ ಮತಗಳನ್ನ ಹಾಕಿಸಲು ಟಾಸ್ಕ್ ನೀಡಿದೆ.

ಆಯಾ ಸಮಾಜದ ಶಾಸಕರು, ಮುಖಂಡರಿಗೆ ಟಾಸ್ಕ್

ಅಲ್ಪಸಂಖ್ಯಾತರು, ದಲಿತ, ಎಸ್ಸಿ, ಎಸ್ಟಿ, ಕೋಲಿ, ಬಂಜಾರ, ಲಿಂಗಾಯತ ಗಾಣಿಗ ಸಮಾಜದ‌ ಮತಗಳ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದ್ದು, ಕಳೆದ ಹಲವು ದಿನಗಳಿಂದ ಆಯಾ ಸಮಾಜದ ಶಾಸಕರು ಹಾಗೂ ಮುಖಂಡರು ತಮ್ಮ ಸಮುದಾಯದ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಇನ್ನು ಕಲಬುರಗಿ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ, ಅಲ್ಪಸಂಖ್ಯಾತರು, ದಲಿತ ಮತ್ತು ಕೂಲಿ ಸಮಾಜದ ಮತಗಳೇ ನಿರ್ಣಾಯಕವಾಗುತ್ತವೆ‌. ಆದ್ದರಿಂದ ಲಿಂಗಾಯತ ಮತಗಳನ್ನ ಸೆಳೆಯಲು ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಲಿಂಗಾಯತರ ಸಾಲು ಸಾಲು ಸಭೆ ನಡೆಸ್ತಿದ್ರೆ, ಕುರುಬ ಸಮಾಜದ ಮತಗಳನ್ನ ಸೆಳೆಯಲು ಹಿರಿಯ ಮುಖಂಡ ಜೆಎಮ್ ಕೊರಬುಗೆ ಟಾಸ್ಕ್ ನೀಡಲಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈಹಿಡಿಲಿವೆಯೇ ದಲಿತ ಮತಗಳು? ನಾಯಕರು, ತಜ್ಞರು ಹೇಳಿದ್ದಿಷ್ಟು

ಅತ್ತ ಅಲ್ಪಸಂಖ್ಯಾತರ ಮತಗಳನ್ನ ಸೆಳೆಯಲು ಶಾಸಕಿ ಖನೀಜ್ ಫಾತಿಮಾರಿಗೆ ನೀಡಲಾದ್ರೆ, ಕೋಲಿ ಕಬ್ಬಲಿಗ ಸಮಾಜದ ಮತಗಳನ್ನ ಸೆಳೆಯಲು ಮಾಜಿ ಸಚಿವ ಬಾಬುರಾವ್​​ ಚಿಂಚನಸೂರ್ ಮತ್ತು ಎಮ್‌ಎಲ್‌ಸಿ ತಿಪ್ಪಣಪ್ಪ ಕಮಕನೂರಗೆ ಕಾಂಗ್ರೆಸ್ ಹೈಕಮಾಂಡ್ ಟಾಸ್ಕ್ ನೀಡಿದ್ದು, ಈ ಬಾರಿ ಎಲ್ಲಾ ಸಮುದಾಯದ ಮತಗಳನ್ನ ಶತಾಯಗತಾಯ ಕ್ರೋಡೀಕರಿಸಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಅದೆನೇ ಇರಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಕ್ಷೇತ್ರವನ್ನ ತಮ್ಮ ಅಳಿಯ ರಾಧಾಕೃಷ್ಣರಿಗೆ ಬಿಟ್ಟುಕೊಟ್ಟರು ಸಹ, ಕಳೆದುಕೊಂಡ ಸ್ಥಾನವನ್ನ ಮರಳಿ ಪಡೆಯಲು ಸಮುದಾಯವಾರು ಟಾಸ್ಕ್ ನೀಡಲಾಗಿದ್ದು, ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎಂದು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ