ಲೋಕಸಭೆ ಚುನಾವಣೆ: ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈಹಿಡಿಲಿವೆಯೇ ದಲಿತ ಮತಗಳು? ನಾಯಕರು, ತಜ್ಞರು ಹೇಳಿದ್ದಿಷ್ಟು

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ದಲಿತರ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಮುಂದಾಗಿವೆ. ದಲಿತರು, ಹಿಂದುಳಿದ ವರ್ಗಗಳ ಜನರನ್ನು ಓಲೈಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದಾಗ ರಾಜ್ಯ ಬಿಜೆಪಿ ನಾಯಕರಿಗೆ ಹೇಳಿದ್ದರು. ಇದೀಗ ಕಾಂಗ್ರೆಸ್ ಕೂಡ ಮೀಸಲು ಕ್ಷೇತ್ರಗಳ ದಲಿತರ ಮತಗಳ ಲಾಭ ಪಡೆಯಲು ಯತ್ನಿಸುತ್ತಿದೆ. ಈ ಬಗ್ಗೆ ರಾಜಕೀಯ ನಾಯಕರು, ತಜ್ಞರು ಹೇಳುವುದೇನು? ಮುಂದೆ ಓದಿ.

ಲೋಕಸಭೆ ಚುನಾವಣೆ: ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈಹಿಡಿಲಿವೆಯೇ ದಲಿತ ಮತಗಳು? ನಾಯಕರು, ತಜ್ಞರು ಹೇಳಿದ್ದಿಷ್ಟು
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Apr 05, 2024 | 11:39 AM

ಬೆಂಗಳೂರು, ಏಪ್ರಿಲ್ 5: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ (Karnataka) ದಲಿತರ ಬಲವರ್ಧನೆ, ದಲಿತ ಮತಗಳ (Dalit Votes) ಕ್ರೂಡೀಕರಣಕ್ಕೆ ಹಲವು ತಂತ್ರ ಹೆಣೆಯಲಾಗುತ್ತಿದೆ. ಕಲಬುರಗಿ, ವಿಜಯಪುರ, ಚಿತ್ರದುರ್ಗ, ಕೋಲಾರ ಮತ್ತು ಚಾಮರಾಜನಗರ ಮೀಸಲು ಕ್ಷೇತ್ರಗಳು ಮತ್ತು ರಾಯಚೂರು, ಬಳ್ಳಾರಿಯ ಎರಡು ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ ಇದು ಕಾಂಗ್ರೆಸ್​ಗೆ ಪೂರಕವಾಗಿ ಪರಿಣಮಿಸಬಹುದು ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಮತ್ತು ದಲಿತ ಮುಖಂಡ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ದಲಿತರ ಮತ ಕೂಡ ದಲಿತ ಎಡ ಮತ್ತು ಬಲ ಜಾತಿಗಳಾಗಿ ವಿಂಗಡಣೆಗೊಂಡಿದೆ. ಅದರಲ್ಲಿಯೂ ನೂರಕ್ಕೂ ಹೆಚ್ಚು ಉಪ ಜಾತಿಗಳಾಗಿ ವಿಂಗಡಿಸಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಇಂಥ ಸುಮಾರು 3.5 ರಿಂದ 4 ಲಕ್ಷ ಮತಗಳಿವೆ ಎನ್ನಲಾಗಿದೆ.

ದಲಿತರ ಮತದ ಮಹತ್ವವನ್ನು ವಿವರಿಸಿದ ಹನುಮಂತಯ್ಯ, ದಲಿತ ವರ್ಗದ ಮಾದಿಗರು 100 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ 30,000 ರಿಂದ 40,000 ಮತದಾರರಿದ್ದಾರೆ. ಇತ್ತೀಚೆಗೆ ಕೋಲಾರದಲ್ಲಿ ದಲಿತ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಮಾಜಿ ಶಾಸಕ ರಮೇಶ್ ಕುಮಾರ್ ವಿರುದ್ಧ ಸೆಣಸಾಡಿದ ನಂತರ ದಲಿತರ ಒಗ್ಗಟ್ಟಿನ ನಡೆಗೆ ಅಡೆತಡೆಗಳು ಎದುರಾಗಿವೆ. ಪಕ್ಷಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅವರು ಒಗ್ಗಟ್ಟಿನ ಸಭೆ ನಡೆಸಬೇಕಾಗಿದೆ. ಈ ರೀತಿಯ ಸಣ್ಣ ಸಮಸ್ಯೆಯನ್ನು ಅವರು ಪರಿಹರಿಸಲು ಸಾಧ್ಯವಿಲ್ಲವೇ? ಪಕ್ಷದ ನಿಷ್ಠಾವಂತ ಮುನಿಯಪ್ಪ ಅವರನ್ನು ನಿರಾಸೆಗೊಳಿಸಲಾಗಿದ್ದು, ಇದು ದಲಿತ ಸಮುದಾಯದ ಮೇಲೆ ಪರಿಣಾಮ ಬೀರಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಮುನಿಯಪ್ಪ ಅವರ ಬೆಂಬಲಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ಮುನಿಯಪ್ಪ ಪ್ರತಿಕ್ರಿಯೆ ನೀಡಿಲ್ಲ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ದಲಿತರ ಮತ ಕ್ರೋಡೀಕರಣವಾಗಿದೆ ಅಥವಾ ಆಗುತ್ತಿದೆ ಎಂಬ ಅಭಿಪ್ರಾಯವನ್ನು ಒಪ್ಪಲಾಗದು ಎಂದು ಮಾಜಿ ಸಂಸದ ಎಚ್. ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ. ದಲಿತ ಬಲವರ್ಧನೆ ಅಥವಾ ದಲಿತರ ಕ್ರೂಡೀಕರಣ ನಡೆಯುತ್ತಿರುವುದು ನನಗೆ ಕಾಣುತ್ತಿಲ್ಲ. ಒಂದಾನೊಂದು ಕಾಲದಲ್ಲಿ ದಲಿತ ಮತಗಳು ಒಗ್ಗಟ್ಟಿನಿಂದ ಕೂಡಿದ್ದವು. ಆದರೆ ಈಗ ಅದು ಕೋಮು ಮತ್ತು ಜಾತಿಗಳ ಆಧಾರದ ಮೇಲೆ ವಿಭಜನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಬೂತ್ ಅಧ್ಯಕ್ಷರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

ಸಾಂಪ್ರದಾಯಿಕವಾಗಿ, ದಲಿತ ಬಲ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಮತ್ತು ದಲಿತ ಎಡ ಸಮುದಾಯಗಳು ಬಿಜೆಪಿಗೆ ಮತ ಹಾಕುತ್ತಾರೆ. ಹೆಚ್ಚಿನ ದಲಿತರು ಅಂಬೇಡ್ಕರ್​ ವಾದಿಗಳು ಮತ್ತು ಅಂಬೇಡ್ಕರ್ ಚಿಂತನೆಯ ಪ್ರಕ್ರಿಯೆಗೆ ಬದ್ಧರಾಗಿದ್ದಾರೆ. ಈ ಬಾರಿ ದಲಿತ ಮತಗಳ ಪ್ರಮುಖ ಪಾಲು ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆಯಿದೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅಭಿಪ್ರಾಯಪಟ್ಟಿರುವುದನ್ನೂ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ