ಕಲಬುರಗಿ: ಉಮೇಶ್​ ಜಾಧವ್ ಬೆಂಬಲಿಗ ಗಿರೀಶ್ ಚಕ್ರ ಹತ್ಯೆ ಆರೋಪಿಗಳು ಕೊನೆಗೂ ಬಂಧನ

| Updated By: Ganapathi Sharma

Updated on: Mar 05, 2024 | 9:30 AM

Girish Chakra Murder Case: ಕಲಬುರಗಿ ಸಂಸದ ಉಮೇಶ್ ಜಾದವ್ ಆಪ್ತ ಗಿರೀಶ್ ಚಕ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗಾಣಗಾಪುರ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಫೆಬ್ರವರಿ 29ರಂದು ಗಿರೀಶ್ ಚಕ್ರ ಕೊಲೆಯಾಗಿತ್ತು. ಇದಾಗಿ ಒಂದು ವಾರದೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ಉಮೇಶ್​ ಜಾಧವ್ ಬೆಂಬಲಿಗ ಗಿರೀಶ್ ಚಕ್ರ ಹತ್ಯೆ ಆರೋಪಿಗಳು ಕೊನೆಗೂ ಬಂಧನ
ಗಿರೀಶ್ ಚಕ್ರ ಜತೆ ಕೊಲೆ ಆರೋಪಿಗಳು (ಸಂಗ್ರಹ ಚಿತ್ರ)
Follow us on

ಕಲಬುರಗಿ, ಮಾರ್ಚ್​ 5: ಸಂಸದ ಡಾ. ಉಮೇಶ್​ ಜಾಧವ್ (Dr. Umesh Jadhav)​ ಬೆಂಬಲಿಗ, ಬಿಜೆಪಿ ಮುಖಂಡ ಗಿರೀಶ್ ಚಕ್ರ (Girish Chakra) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಲಬುರಗಿ ಜಿಲ್ಲೆಯ ಗಾಣಗಾಪುರ ಪೊಲೀಸರು ಬಂಧಿಸಿದ್ದಾರೆ. ಓರ್ವ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಸಚಿನ್ ಕಿರಸಾವಳಗಿ, ವಿಶ್ವನಾಥ ಅಲಿಯಾಸ್ ಕುಮ್ಯಾ, ಪ್ರಜ್ವಲ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಬಂಧಿತ ಬಾಲಕನಾಗಿದ್ದಾನೆ.

ಫೆಬ್ರವರಿ 29ರಂದು ಪಾರ್ಟಿ ಕೊಡುವ ನೆಪದಲ್ಲಿ ಗಿರೀಶ್ ಚಕ್ರ ಅವರನ್ನು ಕರೆದು ಹತ್ಯೆ ಮಾಡಲಾಗಿತ್ತು. ಕಣ್ಣಿಗೆ ಖಾರದ ಪುಡಿ ಎರಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಈ ಕೃತ್ಯ ಎಸಗಲಾಗಿತ್ತು.

ಗಿರೀಶ್ ಚಕ್ರ ಅವರನ್ನು ಬಿಎಸ್ಎನ್ಎಲ್ ಸಲಹಾ ಸಮಿತಿ ನಿರ್ದೇಶಕರನ್ನಾಗಿ ಕೆಲವು ದಿನಗಳ ಹಿಂದೆ ಸಂಸದ ಉಮೇಶ್ ಜಾದವ್ ನೇಮಕ ಮಾಡಿದ್ದರು. ಈ ಪ್ರಯುಕ್ತ ಪಾರ್ಟಿ ಕೊಡುತ್ತೇವೆ ಎಂದು ನಂಬಿಸಿ, ಗಿರೀಶ್ ಚಕ್ರ ಅವರ ಸ್ನೇಹಿತರೇ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಪಾರ್ಟಿಗೆಂದು ಜಮೀನಿಗೆ ಬಂದ ಗಿರೀಶ್ ಅವರ ಕಣ್ಣಿಗೆ ಖಾರದಪುಡಿಯ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಬಳಿಕ ಪ್ರತಿಕ್ರಿ ಸಿದ್ದ ಸಂಸದ ಉಮೇಶ್ ಜಾಧವ್, ಕೊಲೆಯಾದ ಗಿರೀಶ್ ಚಕ್ರ ತಮ್ಮ ಕಟ್ಟಾ ಬೆಂಬಲಿಗನಾಗಿರುವುದನ್ನು ಒಪ್ಪಿಕೊಂಡಿದ್ದರು. ಅಲ್ಲದೆ, ಗಿರೀಶ್ ಉತ್ತಮ ಕೆಲಸಗಾರನಾಗಿದ್ದು, ಆತನ ಬಗ್ಗೆ ಒಳ್ಳೆಯ ಅಭಿಪ್ರಾಯ ಎಲ್ಲರಲ್ಲಿಯೂ ಇತ್ತು ಎಂದಿದ್ದರು.

ಪ್ರಕರಣವನ್ನು ರಾಜಕೀಯವಾಗಿ ಗಂಭೀರವಾಗಿ ತೆಗೆದುಕೊಂಡಿದ್ದ ಬಿಜೆಪಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದರಲ್ಲಿಯೂ, ಪ್ರಿಯಾಂಕ ಖರ್ಗೆ ಅವರ ಉಸ್ತುವಾರಿಗೊಳಪಟ್ಟಿರುವ ಕಲಬುರಗಿಯಲ್ಲಿ ಕೊಲೆ, ಸುಲಿಗೆ ಮತ್ತಿತರ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಕಲಬುರಗಿ: ಸಂಸದ ಉಮೇಶ್​ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

ಆಳಂದ ಬಿಜೆಪಿ ಕಾರ್ಯಕರ್ತನ ಕೊಲೆ ಕೇಸ್ ಭೇದಿಸಿದ ಪೊಲೀಸರು

ಆಳಂದ ಬಿಜೆಪಿ ಕಾರ್ಯಕರ್ತ ಮಹಾಂತಪ್ಪ ಆಲೂರೆ ಹತ್ಯಗೈದಿದ್ದ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಮಾದನಹಿಪ್ಪರಗಾ ಪೊಲೀಸರಿಂದ ಮೂವರ ಬಂಧನವಾಗಲಿದೆ. ಅಜಿತ್ ಕುಮಾರ್ ಕ್ಷೇತ್ರಿ (29), ಆಕಾಶ್ ಕಾಮಠಿ (29), ಮೂಯೂರ್ ಕ್ಷೇತ್ರಿ (25) ಬಂಧಿತರು. ಫೆಬ್ರವರಿ 29 ರಂದೇ ಆಳಂದ ತಾಲೂಕಿನ ಸರಸಂಬಾ ಹೊರವಲಯದಲ್ಲಿ ಹತ್ಯೆ ಮಾಡಲಾಗಿತ್ತು. ಹಳೇ ವೈಷ್ಯಮ್ಯ ಹಿನ್ನಲೆ ಸರಸಂಬಾ ಗ್ರಾಮ ಅಜಿತ್​​ನಿಂದಲೇ ಕೊಲೆಯಾಗಿದ್ದರು ಮಹಾಂತಪ್ಪ ಆಲೂರೆ. ಕೊಲೆ ಮಾಡೋದಕ್ಕಾಗಿ ಪುಣೆಯಿಂದ ಸ್ನೇಹಿತನನ್ನ ಕರೆಯಿಸಿದ್ದ ಅಜಿತ್, ಕಾರು ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ಸಹ ಸಾಕಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:25 am, Tue, 5 March 24