Kalaburagi: ಮದುವೆಯಾಗಿ 2 ತಿಂಗಳಿಗೆ ಕಳೆದುಕೊಂಡಳು ಜೀವ: ಯುವತಿ ಪ್ರಾಣ ಪಡೆದ ಸಿಟಿ ವ್ಯಾಮೋಹ!

ಮದುವೆಯಾಗಿ ಎರಡೇ ತಿಂಗಳಿಗೆ ನವ ವಿವಾಹಿತೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸಿಟಿ ವ್ಯಾಮೋಹ ಮತ್ತು ನಗರದ ಬದುಕು ಸಹೋದರಿಯರಂತೆ ತನಗೆ ಸಿಗುತ್ತಿಲ್ಲ ಎಂಬ ಕೊರಗು ಆಕೆಯ ಮನಸ್ಸನ್ನು ಕಾಡಿತ್ತು. ಹಳ್ಳಿ ಜೀವನದಿಂದ ಬೇಸತ್ತು, ಮಾನಸಿಕ ಒತ್ತಡಕ್ಕೊಳಗಾಗಿ ಆಕೆ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆ ಎನ್ನಲಾಗಿದೆ. ಆಜಾದಪುರದಲ್ಲಿ ಈ ಘಟನೆ ನಡೆದಿದ್ದು, ತನಿಖೆ ನಡೆಯುತ್ತಿದೆ.

Kalaburagi: ಮದುವೆಯಾಗಿ 2 ತಿಂಗಳಿಗೆ ಕಳೆದುಕೊಂಡಳು ಜೀವ: ಯುವತಿ ಪ್ರಾಣ ಪಡೆದ ಸಿಟಿ ವ್ಯಾಮೋಹ!
ಮೃತ ಅನಸೂಯಾ
Edited By:

Updated on: Jan 23, 2026 | 3:34 PM

ಕಲಬುರಗಿ, ಜನವರಿ 23: ತನ್ನ ಸಹೋದರಿಯರು ನಗರದಲ್ಲಿ ವಾಸಿಸುತ್ತಿದ್ದು, ತಾನು ಮಾತ್ರ ಹಳ್ಳಿಯಲ್ಲಿ ನೆಲೆಸಿದ್ದೇನೆ ಎಂದು ಮನನೊಂದು ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕಲಬುರಗಿ ನಗರದ ಆಜಾದಪುರ್ ಬಡಾವಣೆಯಲ್ಲಿ ನಡೆದಿದೆ. ಅನಸೂಯಾ ಮೃತ ಯುವತಿಯಾಗಿದ್ದು, ಮನೆಯಲ್ಲಿಯೇ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಮನೆ ಮಗಳ ಹುಚ್ಚು ನಿರ್ಧಾರಕ್ಕೆ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.

ಅತ್ತೆ ಮಗ ಅವಿನಾಶ್​​ ಜೊತೆ ಸಪ್ತಪದಿ ತುಳಿದಿದ್ದ ಅನಸೂಯಾ, ಆರಂಭದಲ್ಲಿ ಚೆನ್ನಾಗಿಯೇ ಇದ್ದಳು. ಈಕೆಗ ಮೂವರು ಸಹೋದರಿಯರಿಗೂ ಕೂಡ ವಿವಾಹವಾಗಿದ್ದು, ಅವರೆಲ್ಲರೂ ಸಿಟಿಯಲ್ಲಿ ನೆಲೆಸಿದ್ದರು. ಇದೇ ವಿಚಾರಕ್ಕೆ ದಿನ ಕಳೆದಂತೆ ಅನಸೂಯಾಗೆ ಬೇಸರ ಮೂಡಿದೆ. ತಾನು ಮಾತ್ರ ಮದುವೆಯಾಗಿ ಹಳ್ಳಿಯಲ್ಲಿ ಇದ್ದೇನೆ ಎಂಬ ಗಿಲ್ಟಿ ಫೀಲ್ ಬಂದಿದೆ. ಹೀಗಾಗಿ ಮಾನಸಿಕವಾಗಿ ನೊಂದಿದ್ದ ಈಕೆ, ತವರಿಗೆ ಹೋದಾಗಲೂ ವಿಚಾರವನ್ನು ಒಂದೆರಡುಬಾರಿ ಕುಟುಂಬಸ್ಥರಿಗೆ ಹೇಳಿದ್ದಳು. ತಾನು ಉತ್ತಮ ವಿದ್ಯಾಭ್ಯಾಸ ಪಡೆದರೂ ಹಳ್ಳಿಯಲ್ಲಿ ಜೀವನ‌ ನಡೆಸುತ್ತಿರುವ ಕೊರಗಿನ ಬಗ್ಗೆ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಪೋಷಕರು ಬುದ್ಧಿಮಾತು ಕೂಡ ಹೇಳಿದ್ದರು. ಆದರೂ ಇದೇ ವಿಚಾರವಾಗಿ ಕೊರಗುತ್ತಿದ್ದ ಆಕೆ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಇನ್ನು ಮದುವೆಗೂ ಮುನ್ನ ಅನಸೂಯಾ ಕೂಡ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಳು. ಹೀಗಾಗಿ ಆಕೆಗೆ ಹಳ್ಳಿ ಜೀವನ ಅಂದ್ರೆ ಅಷ್ಟಾಗಿ ಆಗಿ ಬರುತ್ತಿರಲಿಲ್ಲ. ಇತ್ತ ಪ್ರೀತಿಸಿದ ಹುಡುಗ ಬಿಡೋಕು ಆಗ್ತಿರಲಿಲ್ಲ. ಮದುವೆ ಬಳಿಕ ಸಿಟಿ ವ್ಯಾಮೋಹ ಈಕೆಯನ್ನು ವಿಪರೀತ ಕಾಡತೊಡಗಿದೆ. ಈ ನಡುವೆಯೂ ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ಜೀವನ ಕಳೆಯುತ್ತಿದ್ದ ಈಕೆ, ನಿನ್ನೆ ಮಧ್ಯಾಹ್ನ ಗಂಡನ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:32 pm, Fri, 23 January 26