ಕಲಬುರಗಿ: ಏಕೈಕ ಪುತ್ರ ನೇಣಿಗೆ ಶರಣು, ಎಂಜಿನಿಯರಿಂಗ್ ಓದುತ್ತಿದ್ದ ಮಗನಿಗೆ ಪಬ್ಜಿ-ಆನ್​​ಲೈನ್ ಗೇಮ್ ಹುಚ್ಚು ಹತ್ತಿತ್ತು

| Updated By: ಸಾಧು ಶ್ರೀನಾಥ್​

Updated on: Aug 07, 2023 | 5:09 PM

ಕಲಬುರಗಿಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಕೋರ್ಸ್ ನಲ್ಲಿ ಓದುತ್ತಿದ್ದ ಪ್ರವೀಣ್, ಮನೆಯಲ್ಲಿ ಗೋಡೆಗೆ ಇದ್ದ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರವೀಣ್ -ಏಕೈಕ ಪುತ್ರ, ಮಗನಿಗೆ ಪಬ್ಜಿ-ಆನಲೈನ್ ಗೇಮ್ ಹುಚ್ಚು ಹತ್ತಿತ್ತು ಎನ್ನುತ್ತಾರೆ ಹೆತ್ತವರು

ಕಲಬುರಗಿ: ಏಕೈಕ ಪುತ್ರ ನೇಣಿಗೆ ಶರಣು, ಎಂಜಿನಿಯರಿಂಗ್ ಓದುತ್ತಿದ್ದ ಮಗನಿಗೆ ಪಬ್ಜಿ-ಆನ್​​ಲೈನ್ ಗೇಮ್ ಹುಚ್ಚು ಹತ್ತಿತ್ತು
ಆತ್ಮಹತ್ಯೆ ಮಾಡಿಕೊಂಡ ಪ್ರವೀಣ್, ಚೇತನ್ ಆರ್ -ಕಲಬುರಗಿ ನಗರ ಪೊಲೀಸ್ ಆಯುಕ್ತ
Follow us on

ಹೆತ್ತವರಿಗೆ ಆತ ಒಬ್ಬನೇ ಮಗ (son). ಇದ್ದೊಬ್ಬ ಮಗ ಚೆನ್ನಾಗಿರಲಿ ಅಂತ ಹೆತ್ತವರು ಮಗನಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದರು. ಆತ ಕೂಡಾ ಇಂಜನೀಯರಿಂಗ್ ಓದುತ್ತಿದ್ದ. ಆದ್ರೆ ಹೆತ್ತವರು ಮನೆಯಲ್ಲಿ ಇಲ್ಲದೇ ಇದ್ದಾಗ, ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಜನೀಯರಿಂಗ್ ವಿದ್ಯಾರ್ಥಿ ಸಾವಿಗೆ ಪಬ್ಜಿ ಸೇರಿದಂತೆ ಆನಲೈನ್ ಗೇಮ್ (Pubg, online game) ಹುಚ್ಚು ಮತ್ತು ಅದರಲ್ಲಿ ಹಣ ಕಳೆದುಕೊಂಡಿದ್ದೇ ಕಾರಣ ಅಂತ ಹೇಳಲಾಗುತ್ತಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕ್ತಿರೋ ಹೆತ್ತವರು. ಅದರಲ್ಲೂ ತಂದೆ ಮಗನ ಸಾವು ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಮತ್ತೊಂದಡೆ ಆತ್ಮೀಯ ಸ್ನೇಹಿತನ ಸಾವಿನಿಂದ ಕಂಗಾಲಾಗಿರುವ ಸ್ನೇಹಿತರು ಕಣ್ಣೀರು ಹಾಕುತ್ತಿದ್ದರು. ಇಂತಹ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ (Kalaburagi) ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ. ಈ ನೋವು, ಆಕ್ರಂಧನಕ್ಕೆ ಕಾರಣ ಇಂಜನೀಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ (son).

ಮೂಲತ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಶರಣಬಸಪ್ಪ, ಕಲಬುರಗಿ ನಗರದ ದೇವಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶರಣಬಸಪ್ಪರ ಏಕೈಕ ಪುತ್ರ ಪ್ರವೀಣ್ ಪಾಟೀಲ್, ನಿನ್ನೆ ಸಂಜೆ ಕಲಬುರಗಿ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಪ್ಪತ್ತು ವರ್ಷದ ಪ್ರವೀಣ್, ಕಲಬುರಗಿ ನಗರದ ಖಾಸಗಿ ಇಂಜನೀಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಆರ್ಟಿಫಿಷಿಯಲ್ ಇಂಟಲಿಜನ್ಸ್ ಆಂಡ್ ಮಷಿನ್ ಲರ್ನಿಂಗ್ ಕೋರ್ಸ್ ನಲ್ಲಿ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ಪ್ರವೀಣ್, ಮನೆಯಲ್ಲಿ ಗೋಡೆಗೆ ಇದ್ದ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಮನೆಯಲ್ಲಿ ಯಾರು ಇರಲಿಲ್ಲವಂತೆ. ತಾಯಿ ಹೈದ್ರಾಬಾದ್ ಗೆ ಹೋಗಿದ್ದರೆ, ತಂದೆ ಬೇರೊಂದು ಕೆಲಸದ ಮೇಲೆ ತನ್ನೂರಿಗೆ ಹೋಗಿದ್ದನಂತೆ. ಕಳೆದ ರಾತ್ರಿ ಹನ್ನೆರಡು ಗಂಟೆಗೆ ಪ್ರವೀಣ್ ತಾಯಿ ಮನೆಗೆ ಬಂದಿದ್ದಾರೆ. ಆದ್ರೆ ಬಾಗಿಲು ತಗೆಯದೇ ಇದ್ದಾಗ, ಬಾಗಿಲು ಮುರಿದು ಒಳಹೋದಾಗ ಗೊತ್ತಾಗಿದೆ, ಪ್ರವೀಣ್ ಬದುಕಿಲ್ಲಾ, ಬಾರದ ಲೋಕಕ್ಕೆ ಹೋಗಿದ್ದಾನೆ ಅನ್ನೋದು.

ಇನ್ನು ಪ್ರವೀಣ್, ಕಾಲೇಜಿನಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದನಂತೆ. ಇಂಜನೀಯರಿಂಗ್ ಸೇರಿದ್ರು ಕೂಡಾ ಮತ್ತೆ ನೀಟ್ ಪರೀಕ್ಷೆ ಬರಿಬೇಕು, ವೈದ್ಯಕೀಯ ಮಾಡಬೇಕು ಅಂತ ಅಂದುಕೊಂಡು, ನೀಟ್ ಪರೀಕ್ಷೆಗೆ ಕೂಡಾ ಮತ್ತೆ ಓದುತ್ತಿದ್ದನಂತೆ. ಯಾರ ಜೊತೆ ಕೂಡಾ ದ್ವೇಷ ಬೆಳಸಿಕೊಂಡಿರಲಿಲ್ಲವಂತೆ. ಕಳೆದ ಶುಕ್ರವಾರ ಕಾಲೇಜಿಗೆ ಕೂಡಾ ಹೋಗಿ ಬಂದಿದ್ದನಂತೆ.

ಇನ್ನು ಹೆತ್ತವರಿಗೆ ಒಬ್ಬನೇ ಮಗ ಇದ್ದಿದ್ದರಿಂದ, ಮತ್ತು ಹೆತ್ತವರು ತುಸು ಸ್ಥಿತಿವಂತರು ಇರೋದರಿಂದ, ಹಣಕಾಸಿನ ಸಮಸ್ಯೆ ಕೂಡಾ ಇರಲಿಲ್ಲವಂತೆ. ಆದ್ರೆ ಪ್ರವೀಣ್ ಕೆಲ ದಿನಗಳಿಂದ ಪಬ್ಜಿ ಸೇರಿದಂತೆ ಕೆಲ ಆನಲೈನ್ ಗೇಮ್ ಹುಚ್ಚು ಹಿಡಿಸಿಕೊಂಡಿದ್ದನಂತೆ. ಆನಲೈನ್ ಗೇಮ್ ಗಳಲ್ಲಿ ಒಂದಿಷ್ಟು ಹಣ ಕೂಡಾ ಕಳೆದುಕೊಂಡಿದ್ದನಂತೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋ ಅನುಮಾನ ಇದೀಗ ಹೆತ್ತವರನ್ನು ಕಾಡುತ್ತಿದೆ.

ಇನ್ನು ತನ್ನ ಸಮಸ್ಯೆಯನ್ನು ಪ್ರವೀಣ್ ಕೂಡಾ ಹೆತ್ತವರ ಮುಂದೆಯಾಗಲಿ, ಸ್ನೇಹಿತರ ಮುಂದೆಯಾಗಲಿ ಹೇಡಿಕೊಂಡಿಲ್ಲಾ. ಆತನಿಗೆ ಹೇಳಿಕೊಳ್ಳುವಂತಹ ಯಾವುದೇ ಸಮಸ್ಯೆಗಳು ಕೂಡಾ ಇರಲಿಲ್ಲವಂತೆ. ಆದ್ರೆ ಆತನ ಮೊಬೈಲ್ ಪರಿಶೀಲಿಸಿದಾಗ ಕೆಲ ಗೇಮ್ ಗಳು ಆಡಿದ್ದು ಕಂಡುಬಂದಿದ್ದು, ಅದೇ ಆಧಾರದ ಮೇಲೆ ಆನಲೈನ್ ಗೇಮ್ ಮತ್ತು ಪಬ್ಜಿ ಗೇಮ್ ಗಳಲ್ಲಿ ಹಣ ಕಳೆದುಕೊಂಡಿದ್ದಕ್ಕೆ ಮನನೊಂದು, ಈ ವಿಷಯ ಹೆತ್ತವರಿಗೆ ಗೊತ್ತಾದ್ರೆ ಸಮಸ್ಯೆ ಆಗುತ್ತದೆ ಅಂತ ತಿಳಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಶಂಕಿಸಲಾಗುತ್ತಿದೆ ಎನ್ನುತ್ತಾರೆ ಚೇತನ್ ಆರ್, ಕಲಬುರಗಿ ನಗರ ಪೊಲೀಸ್ ಆಯುಕ್ತ

ಸದ್ಯ ಪ್ರವೀಣ ಸಾವಿನ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಪಬ್ಜಿ ಗೇಮ್ ಹುಚ್ಚು ಮತ್ತು ಅದರಲ್ಲಿ ಹಣ ಕಳೆದುಕೊಂಡಿದ್ದರಿಂದ ನೊಂದು ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳಲಾಗುತ್ತಿದೆ. ಆದರೂ ಕೂಡಾ ಆತ್ಮಹತ್ಯೆಗೆ ಮತ್ತೇನಾದ್ರು ಕಾರಣಗಳಿವೆಯಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಬಾಳಿ ಬದುಕಿ, ಹೆತ್ತವರಿಗೆ ಆಸರೆಯಾಗಬೇಕಿದ್ದ ಮಗ, ಬಾರದ ಲೋಕಕ್ಕೆ ಹೋಗಿದ್ದು ದುರಂತವೇ ಸರಿ.

 ಕಲಬುರಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ