ಬಗೆದಷ್ಟೂ ಬಯಲಾಗುತ್ತಿದೆ ಪಿಎಸ್ಐ ನೇಮಕಾತಿ ಅಕ್ರಮ; ಮತ್ತೋರ್ವ ಕಿಂಗ್ ಪಿನ್ ಮಂಜುನಾಥ ಮೇಳಕುಂದಿ ನಾಪತ್ತೆ

ಸಿಐಡಿ ಮಂಜುನಾಥ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದು ಮಂಜುನಾಥ ಮನೆಯಲ್ಲಿ ಅನೇಕ ಪರೀಕ್ಷೆಯ ಹಾಲ್ ಟಿಕೆಟ್ಗಳು ಪತ್ತೆಯಾಗಿವೆ. ಬೇರೆ ಬೇರೆ ಅಭ್ಯರ್ಥಿಗಳ ಹಾಲ್ ಟಿಕೆಟ್ಗಳು ಸಿಕ್ಕಿವೆ.

ಬಗೆದಷ್ಟೂ ಬಯಲಾಗುತ್ತಿದೆ ಪಿಎಸ್ಐ ನೇಮಕಾತಿ ಅಕ್ರಮ; ಮತ್ತೋರ್ವ ಕಿಂಗ್ ಪಿನ್ ಮಂಜುನಾಥ ಮೇಳಕುಂದಿ ನಾಪತ್ತೆ
ಕಲಬುರಗಿಯಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮ
Follow us
TV9 Web
| Updated By: ಆಯೇಷಾ ಬಾನು

Updated on: Apr 21, 2022 | 7:17 AM

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಬಗೆದಷ್ಟು ಆಳಕ್ಕೆ ಹೋಗ್ತಿದೆ. ಅಕ್ರಮದ ಮತ್ತೋರ್ವ ಕಿಂಗ್ ಪಿನ್ ಮಂಜುನಾಥ ಮೇಳಕುಂದಿ ನಾಪತ್ತೆಯಾಗಿದ್ದಾರೆ. ಕಲಬುರಗಿ ನೀರಾವರಿ ಇಲಾಖೆಯ ಸಹಾಯಕ ಇಂಜನೀಯರ್ ಮಂಜುನಾಥ ಮೇಳಕುಂದಿ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ. ಕಲಬುರಗಿ ನಗರದ ಎನ್ಜಿಒ ಕಾಲೋನಿ ನಿವಾಸಿ ಮಂಜುನಾಥ, ಕಲಬುರಗಿ ಜಿಲ್ಲೆಯ ಸೇಡಂ ನಿವಾಸಿ ವಿರೇಶ್ ಅನ್ನೋ ಅಭ್ಯರ್ಥಿಯಿಂದ ಬರೋಬ್ಬರಿ 39 ಲಕ್ಷ ಹಣ ಪಡೆದಿದ್ದ. ವಿರೇಶ್, ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಇಡೀ ಪ್ರಕರಣ ಬೆಳಕಿಗೆ ಬಂದಿದ್ದೆ ವಿರೇಶ್ ಅನ್ನೋ ಅಭ್ಯರ್ಥಿ ಬಂಧನದ ನಂತರ. ಸದ್ಯ ವಿಚಾರಣೆ ವೇಳೆ ತಾನು ಮಂಜುನಾಥ ಅನ್ನೋನಿಗೆ 39 ಲಕ್ಷ ಹಣ ನೀಡಿರೋದಾಗಿ ವಿರೇಶ್ ತಪ್ಪೊಪ್ಪಿಕೊಂಡಿದ್ದಾನೆ. ಪಿಎಸ್ಐ ಪರೀಕ್ಷೆ ಅಕ್ರಮವಾಗಿ ಪಾಸ್ ಮಾಡಿಸಲು ಹಣ ನೀಡಿರೋದಾಗಿ ವಿರೇಶ್ ಹೇಳಿಕೆ ನೀಡಿದ್ದಾನೆ. ವಿರೇಶ್ ಮಾಹಿತಿ ಮೇರೆಗೆ ಮಂಜುನಾಥನನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆದ್ರೆ ಕಳೆದ ಕೆಲ ದಿನಗಳಿಂದ ಮಂಜುನಾಥ ನಾಪತ್ತೆಯಾಗಿದ್ದಾನೆ.

ಸಿಐಡಿ ಮಂಜುನಾಥ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದು ಮಂಜುನಾಥ ಮನೆಯಲ್ಲಿ ಅನೇಕ ಪರೀಕ್ಷೆಯ ಹಾಲ್ ಟಿಕೆಟ್ಗಳು ಪತ್ತೆಯಾಗಿವೆ. ಬೇರೆ ಬೇರೆ ಅಭ್ಯರ್ಥಿಗಳ ಹಾಲ್ ಟಿಕೆಟ್ಗಳು ಸಿಕ್ಕಿವೆ. ಅಕ್ರಮವಾಗಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳನ್ನು ಹುಡುಕುತ್ತಿದ್ದ ಈ ಮಂಜುನಾಥ, ಅಭ್ಯರ್ಥಿಗಳನ್ನು ಹುಡುಕಿ ಪರೀಕ್ಷಾ ಕೇಂದ್ರದವರ ಜೊತೆ ಡೀಲ್ ಮಾಡಿಸುತ್ತಿದ್ದ. ವಿರೇಶ್ ನಿಂದ ಹಣ ಪಡೆದಿರೋ ಅನೇಕ ಸಾಕ್ಷಿಗಳು ಸಿಐಡಿ ಪೊಲೀಸರಿಗೆ ತನಿಕೆ ವೇಳೆ ಸಿಕ್ಕಿವೆ. ನಾಪತ್ತೆಯಾಗಿರೋ ಮಂಜುನಾಥನಿಗಾಗಿ ಸಿಐಡಿ ಹುಡುಕಾಟ ನಡೆಸುತ್ತಿದೆ.

ಪ್ರಕರಣ ಸಂಬಂಧ 8 ಜನ ಅರೆಸ್ಟ್ ಇನ್ನು ಸಿಐಡಿ ಪೊಲೀಸರು ಇಲ್ಲಿವರಗೆ ಎಂಟು ಜನರನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ನಾಲ್ವರು ಅಭ್ಯರ್ಥಿಗಳು, ಮೂವರು ಕೊಠಡಿ ಮೇಲ್ವಿಚಾರಕಿಯರು, ಓರ್ವ ಜ್ಞಾನಜೋತಿ ಇಂಗ್ಲಿಷ್ ಶಾಲೆ ಅಧ್ಯಕ್ಷ ರಾಜೇಶ್ ಹಾಗರಗಿಯನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಆರು ಜನರನ್ನು ಮೂರು ದಿನಗಳ ಕಾಲ ತಮ್ಮ ಕಸ್ಟಡಿಗೆ ತಗೆದುಕೊಂಡು ಸಿಐಡಿ ವಿಚಾರಣೆ ನಡೆಸಿದೆ. ಆದ್ರೆ ವಿಚಾರಣೆ ವೇಳೆ ಯಾವುದೇ ಸತ್ಯವನ್ನು ಅಭ್ಯರ್ಥಿಗಳು ಬಾಯಿಬಿಟ್ಟಿಲ್ಲ. ತಮಗೇನು ಗೊತ್ತಿಲ್ಲಾ, ತಾವು ಅಕ್ರಮ ಮಾಡೇ ಇಲ್ಲಾ ಅಂತ ಹೇಳ್ತಿದ್ದಾರೆ. ಆದ್ರೆ ವೀರೇಶ್ ಅನ್ನೋ ಅಭ್ಯರ್ಥಿ ಹಣ ನೀಡಿರೋ ಬಗ್ಗೆ ಹೇಳಿಕೆ ನೀಡಿದ್ದಾನೆ. ಕಿಂಗ್ ಪಿನ್ ಮಂಜುನಾಥನಿಗೆ 39 ಲಕ್ಷ ಹಣ ನೀಡಿದ್ದೇನೆ ಎಂದಿದ್ದಾನೆ. ಅಕ್ರಮದ ಬಗ್ಗೆ ಬೇರೆ ಬೇರೆ ರೀತಿಯಿಂದ ಸಿಐಡಿ ತನಿಖೆ ನಡೆಸುತ್ತಿದೆ. ಬಂಧಿತ ಅಭ್ಯರ್ಥಿಗಳ ಬ್ಯಾಂಕ್ ಡಿಟೈಲ್ಸ್, ಹಣದ ವರ್ಗಾವಣೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಕಿಂಗ್ ಪಿನ್ಗಳು ಪ್ರಕರಣದ ಕಿಂಗ್ ಪಿನ್ ಜ್ಞಾನಜೋತಿ ಇಂಗ್ಲಿಷ್ ಶಾಲೆ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಸೇರಿದಂತೆ ಅನೇಕರು ನಾಪತ್ತೆಯಾಗಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕಲಬುರಗಿ ಒಂದನೇ ಜೆಎಂಎಫ್ಸಿ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೆ ಬರೋ ಸಾಧ್ಯತೆ ಇದೆ. ಮತ್ತೊಂದಡೆ ಈಗಾಗಲೇ ಬಂಧನವಾಗಿರೋ ಎಂಟು ಜನರಿಂದ ಕೂಡಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ‘ದಿ ಡೆಲ್ಲಿ ಫೈಲ್ಸ್​​’ ವಿರೋಧಿಸಿದ ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್; ಕಾರಣವೇನು?

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು