ಕಲಬುರಗಿಯಲ್ಲಿ ಮತ್ತೊಂದು ಅಕ್ರಮ: ನಕಲಿ ಅಂಕಪಟ್ಟಿ ಮಾಫಿಯಾ ಬೆಳಕಿಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 10, 2025 | 5:17 PM

ಕಲಬುರಗಿಯಲ್ಲಿ ಮತ್ತೊಂದು ಅಕ್ರಮ ಬಯಲಾಗಿದ್ದು, ನಕಲಿ ಎಸ್ಎಸ್ಎಲ್​​ಸಿ ಅಂಕಪಟ್ಟೆಯನ್ನು ಬಳಸಿ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಓರ್ವ ಯುವಕ ತನ್ನ ಅಂಕಪಟ್ಟಿಯನ್ನು ಪೋರ್ಜರಿ ಮಾಡಿ ಅರಣ್ಯ ವೀಕ್ಷಕ ಹುದ್ದೆ ಪಡೆದಿದ್ದಾನೆ. ಈ ಘಟನೆಯಿಂದ ನಕಲಿ ಅಂಕಪಟ್ಟಿ ಮಾಫಿಯಾ ಇರುವ ಆತಂಕ ಹೆಚ್ಚಿದೆ.

ಕಲಬುರಗಿಯಲ್ಲಿ ಮತ್ತೊಂದು ಅಕ್ರಮ: ನಕಲಿ ಅಂಕಪಟ್ಟಿ ಮಾಫಿಯಾ ಬೆಳಕಿಗೆ
ಕಲಬುರಗಿಯಲ್ಲಿ ಮತ್ತೊಂದು ಅಕ್ರಮ: ನಕಲಿ ಅಂಕಪಟ್ಟಿ ಮಾಫಿಯಾ ಬೆಳಕಿಗೆ
Follow us on

ಕಲಬುರಗಿ, ಫೆಬ್ರವರಿ 10: ಸದಾ ಪರೀಕ್ಷಾ ಅಕ್ರಮಗಳಿಂದ ಸುದ್ದಿಯಲ್ಲಿರುವ ಕಲಬುರಗಿಯಲ್ಲಿ ಇದೀಗ ಮತ್ತೊಂದು ಅಕ್ರಮ‌ದ ಆರೋಪ ಕೇಳಿ ಬಂದಿದೆ. ಎಸ್ಎಸ್ಎಲ್‌ಸಿ‌ ಅಂಕಪಟ್ಟಿಯನ್ನು ಪೋರ್ಜರಿ (fake marks cards) ಮಾಡಿ ಸರ್ಕಾರಿ ಹುದ್ದೆ ಪಡೆದಿದ್ದು ಬಟಾಬಯಲಾಗಿದೆ. ಆ ಮೂಲಕ ನಕಲಿ ಅಂಕಪಟ್ಟಿ ಮಾಫಿಯಾ ಹುಟ್ಟಿಕೊಂಡಿದೆಯಾ ಎನ್ನೋ ಆತಂಕ ಶುರುವಾಗಿದೆ.

ಕಲಬುರಗಿ ಅಂದರೆ ಸಾಕು ಪರೀಕ್ಷಾ ಅಕ್ರಮಗಳ ತವರು ಎನ್ನೋ ಕುಖ್ಯಾತಿ ಪಡೆದಿತ್ತು. ಇದೀಗ ಅದೇ ಸಾಲಿಗೆ ಮಗದೊಂದು ಅಕ್ರಮ ಸೆರ್ಪಡೆಯಾಗಿರುವ ಆರೋಪ ಕೇಳಿ ಬಂದಿದೆ. ಅದೆನೆಪ್ಪಾ ಅಂದರೆ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ಗ್ಯಾಂಗ್ ತಲೆ ಎತ್ತಿದಿಯಾ ಎನ್ನೋ ಅನುಮಾನ ಮೂಡಿದೆ. ಯಾಕೆಂದರೆ ಇಂದು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್ ಇದಕ್ಕೆ ಸಾಕಷ್ಟು ಪುಷ್ಟಿ ನೀಡುತ್ತಿದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಲಕ್ಷಾಂತರ ರೂ ಲೂಟಿ ಆರೋಪ: ದಾಖಲೆ ನೀಡಿದ ಕಾನೂನು ವಿದ್ಯಾರ್ಥಿ

ಇತ್ತೀಚೆಗೆ ಅಂದರೆ 2023ರ ಡಿಸೆಂಬರ್ 21 ರಂದು ಕಲಬುರಗಿ ವಿಭಾಗದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇನ್ನೂ ಈ ಹುದ್ದೆ ಗಿಟ್ಟಿಸಿಕೊಳ್ಳಲು ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಬೀರಪ್ಪ ಎಂಬ ಯುವಕ ನಕಲಿ ಎಸ್​ಎಸ್​ಎಲ್​ಸಿ ಅಂಕಪಟ್ಟಿ ನೀಡಿದ್ದ ಎನ್ನೋದು ಬಟಾ ಬಯಲಾಗಿದೆ. ತನ್ನ ಮೂಲ ಅಂಕಪಟ್ಟಿಯನ್ನೆ ಪೋರ್ಜರಿ ಮಾಡಿ ಅರಣ್ಯ ವೀಕ್ಷಕ ಹುದ್ದೆ ಪಡೆದಿದ್ದ. ಅದಾದ ಬಳಿಕ ಬೀರಪ್ಪನ ನಕಲಿ ಅಂಕಟ್ಟಿಯ ಬಗ್ಗೆ ಅರ್ಜಿ ಹಾಕಿದ ಇತರೆ ಅಭ್ಯರ್ಥಿಗಳಿಗೆ ಹಲವು ಅನುಮಾನಗಳು ಬಂದಾಗ ಬೀರಪ್ಪ‌ನ ಎಸ್​ಎಸ್​ಎಲ್​ಸಿ ಅಂಕಪಟ್ಟಿಯ ಬಗ್ಗೆ ದೂರು ನೀಡಿದ್ದಾಗ, ಬೀರಪ್ಪನ ನಕಲಿ ಅಂಕಪಟ್ಟಿಯ ಅಸಲಿ ಬಣ್ಣ ಬಯಲಾಗಿದೆ.

ಡುಪ್ಲಿಕೇಟ್​ ಅಂಕಪಟ್ಟಿ

ಅಸಲಿಗೆ ಬೀರಪ್ಪ ಎಸ್​ಎಸ್​ಎಲ್​​ಸಿಯಲ್ಲಿ ಗಳಿಸಿದ್ದ 318 ಅಂಕ ಮಾತ್ರ‌ ಆದರೆ ಅರಣ್ಯ ವೀಕ್ಷಕ ಹುದ್ದೆಗೆ ಇಷ್ಟು ಮಾಕ್ಸ್೯ ಇದ್ದರೆ ನೌಕರಿ ಆಗುವದಿಲ್ಲ ಅಂತಾ ಕನ್ಫರ್ಮ್ ಮಾಡಿಕೊಂಡು, ತನ್ನ ಅಸಲಿ ಅಂಕಪಟ್ಟಿಯ ಬದಲು 2014ರ ಏಪ್ರಿಲ್​ನಲ್ಲಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 605 ಅಂಕ ಪಡೆದಿರುವದ್ದಾಗಿ ಡುಪ್ಲಿಕೇಟ್​ದ ಅಂಕಪಟ್ಟಿ ಸಲ್ಲಿಸಿ ಅರಣ್ಯ ವೀಕ್ಷಕ ಹುದ್ದೆ ಪಡೆದಿದ್ದಾನೆ. ಇನ್ನು ಬೀರಪ್ಪ ನಕಲಿ ಎಸ್​ಎಸ್​ ಎಲ್‌ಸಿ ಅಂಕಪಟ್ಟಿ ನೀಡಿರುವ ಬಗ್ಗೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಸುಮ್ಮನಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಐಎಫ್​ಎಸ್ ಸುಮೀತ್ ಕುಮಾರ್ ಅವರನ್ನು ಕೇಳಿದರೆ ಬೀರಪ್ಪ‌ ನಕಲಿ ಅಂಕಪಟ್ಟಿ ಪರಿಶೀಲನೆ ‌ನಡೆಸಿದ್ದಾಗ ಸಾಬೀತಾಗಿದೆ. ಹೀಗಾಗಿ ಕೆಸಿಎಸ್​ಆರ್ ನಿಯಮದ‌ ಪ್ರಕಾರ ಆತನ ಹುದ್ದೆ ರದ್ದು ಮಾಡಿರುವದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಇನ್ಫೋಸಿಸ್​ನಿಂದ ನೂರಾರು ಉದ್ಯೋಗಿಗಳ ಲೇ ಆಫ್; ಎರಡು ವರ್ಷ ಸತಾಯಿಸಿ ನೇಮಕಗೊಂಡಿದ್ದ ಫ್ರೆಷರ್ಸ್​ಗೆ ಶಾಕ್

ಈ ಹಿಂದೆ ಪಿಎಸ್​ಐ, ಕೆಪಿಟಿಸಿಎಲ್, ಕೆಇಎ ಸೇರಿ ಸಾಲು ಸಾಲು ಅಕ್ರಮ‌ ನಡೆದ ಕಲಬುರಗಿಯಲ್ಲಿ ನಕಲಿ ಅಂಕಪಟ್ಟಿ ಜಾಲ ಸಹ ಹಬ್ಬಿದ್ದು, ಹೀಗಾಗಿ ನಕಲಿ ಅಂಕಪಟ್ಟಿ ಹಿಂದಿರುವ ಕಿಂಗ್ ಪಿನ್ ಗಳ ಹೆಡೆಮುರಿಯನ್ನು ಕಟ್ಟಲು ಸರ್ಕಾರ ಸಜ್ಜಾಗಬೇಕಿದೆ. ಆಗ ಮಾತ್ರ ಅಸಲಿ ಫಲಾನುಭವಿಗಳಿಗೆ ನೌಕರಿ ಭಾಗ್ಯ ಸಿಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.