ಕಲಬುರಗಿ: ಶವಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರ ಪರದಾಟ; ಮನೆ ಮುಂದೆ ಶವ ಇಟ್ಟುಕೊಂಡು ಕುಳಿತುಕೊಳ್ಳಬೇಕಾದ ಸ್ಥಿತಿ

| Updated By: ganapathi bhat

Updated on: Feb 01, 2022 | 5:50 PM

ಗ್ರಾಮಕ್ಕೆ ಸ್ಮಶಾನ ಇಲ್ಲದೇ ಇರೋದರಿಂದ ಕುಟುಂಬಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಮೂರು ಎಕರೆ ಸ್ಮಶಾನಕ್ಕಾಗಿ ಜಾಗ ಗುರುತಿಸಿದೆ. ಆದ್ರೆ ಅಲ್ಲಿ ಶವ ಸಂಸ್ಕಾರ ಮಾಡಲು ಜೈಲು ಸಿಬ್ಬಂದಿ ಬಿಟ್ಟಿಲ್ಲ. ಭದ್ರತೆ ಕಾರಣ ಹೇಳಿ ಶವ ಸಂಸ್ಕಾರಕ್ಕೆ ಅವಕಾಶ ನೀಡಿಲ್ಲ.

ಕಲಬುರಗಿ: ಶವಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರ ಪರದಾಟ; ಮನೆ ಮುಂದೆ ಶವ ಇಟ್ಟುಕೊಂಡು ಕುಳಿತುಕೊಳ್ಳಬೇಕಾದ ಸ್ಥಿತಿ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರ ಪರದಾಟ ಪಟ್ಟ ಘಟನೆ ಕಲಬುರಗಿ ತಾಲೂಕಿನ ನಂದಿಕೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಅನಾರೋಗ್ಯದಿಂದ ಅಮಿನಾಬಿ, ಚಾಂದ್ ಬಿ ಎಂಬವರು ಸಾವನ್ನಪ್ಪಿದ್ದರು. ಶವ ಸಂಸ್ಕಾರಕ್ಕೆ ಗ್ರಾಮದಲ್ಲಿ ಪ್ರತ್ಯೇಕ ಜಾಗವಿಲ್ಲದ ಹಿನ್ನೆಲೆ ಸರ್ಕಾರ ಗುರುತಿಸಿದ ಜಾಗದಲ್ಲಿ ಅಂತ್ಯಕ್ರಿಯೆಗೆ ಪ್ರಯತ್ನಿಸಿದ್ದರು. ಆದರೆ ಅಲ್ಲಿ ಶವ ಸಂಸ್ಕಾರ ಮಾಡಲು ಜೈಲು ಸಿಬ್ಬಂದಿ ಅವಕಾಶ ನೀಡಿಲ್ಲ. ಭದ್ರತೆ ಕಾರಣ ಹೇಳಿ ಶವ ಸಂಸ್ಕಾರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಹೀಗಾಗಿ ಮನೆ ಮುಂದೆ ಶವ ಇಟ್ಟುಕೊಂಡು ಕುಳಿತಿರುವ ಕುಟುಂಬಸ್ಥರು ಶವಸಂಸ್ಕಾರಕ್ಕೆ ಪರದಾಟ ಪಡುತ್ತಿದ್ದಾರೆ.

ಗ್ರಾಮದಲ್ಲಿ ಇಬ್ಬರ ಶವ ಸಂಸ್ಕಾರ ಮಾಡಲಿಕ್ಕಾಗದೇ ಮುಂಜಾನೆಯಿಂದ ಪರದಾಟ ಪಡಲಾಗುತ್ತಿದೆ. ದೀರ್ಘಕಾಲದ ಅನಾರೋಗ್ಯದಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಕಳೆದ ರಾತ್ರಿಯೇ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಗ್ರಾಮಕ್ಕೆ ಸ್ಮಶಾನ ಇಲ್ಲದೇ ಇರೋದರಿಂದ ಕುಟುಂಬಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಮೂರು ಎಕರೆ ಸ್ಮಶಾನಕ್ಕಾಗಿ ಜಾಗ ಗುರುತಿಸಿದೆ. ಆದ್ರೆ ಅಲ್ಲಿ ಶವ ಸಂಸ್ಕಾರ ಮಾಡಲು ಜೈಲು ಸಿಬ್ಬಂದಿ ಬಿಟ್ಟಿಲ್ಲ. ಭದ್ರತೆ ಕಾರಣ ಹೇಳಿ ಶವ ಸಂಸ್ಕಾರಕ್ಕೆ ಅವಕಾಶ ನೀಡಿಲ್ಲ.

ಚಿತ್ರದುರ್ಗ: ಹೊಸದುರ್ಗ ಪುರಸಭೆ ಬಳಿ ಕಾರ್ಮಿಕ ಆತ್ಮಹತ್ಯೆಗೆ ಯತ್ನ

ಹೊಸದುರ್ಗ ಪುರಸಭೆ ಬಳಿ ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ಇಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿರುವ ಪುರಸಭೆಯ ಬಳಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಲಾಗಿದೆ. ಗುತ್ತಿಗೆ ಆಧಾರಿತ ಕಾರ್ಮಿಕ ಮಂಜುನಾಥ (35) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಂಜುನಾಥ ಕಳೆದ ಆರು ತಿಂಗಳಿಂದ ಕೆಲಸಕ್ಕೆ ಗೈರಾಗಿದ್ದರು ಎಂದು ತಿಳಿದುಬಂದಿದೆ. ಈ ಹಿಂದೊಮ್ಮೆ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ ಇದೀಗ ಮತ್ತೆ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಬೆಂಗಳೂರು: ಸಂಪ್ ಕ್ಲೀನ್ ಮಾಡುವಾಗ ವಿದ್ಯುತ್ ಪ್ರವಹಿಸಿ ಸಾವು

ನಗರದ ಮಾಗಡಿ ರಸ್ತೆಯ ಪಿಟಿಎ ಗಾರ್ಡನ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಂಪ್ ಕ್ಲೀನ್ ಮಾಡುವಾಗ ವಿದ್ಯುತ್ ಪ್ರವಹಿಸಿ ಮೋಹನ್ ಕುಮಾರ್ (29) ಎಂಬವರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಸಂಪ್ ಟ್ಯಾಂಕ್ ಕ್ಲೀನ್ ಮಾಡುವ ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಶಿಯನ್ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಸಂಪ್ ಒಳಗೆ ವಿದ್ಯುತ್ ಶಾಕ್ ನಿಂದ ಅಸ್ವಸ್ಥರಾಗಿದ್ದರು. ಕೂಡಲೇ ಸಹೋದ್ಯೋಗಿಗಳು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೆ.ಪಿ‌. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಅನುಕಂಪದ ಆಧಾರದ ಮೇಲೆ ಎರಡೇ ದಿನದಲ್ಲಿ ಮಹಿಳೆಗೆ ನೌಕರಿ; ಮಾನವೀಯತೆ ಮೆರೆದ ಕಲಬುರಗಿ ಡಿಸಿಗೆ ಜನರ ಮೆಚ್ಚುಗೆ

ಇದನ್ನೂ ಓದಿ: ಎತ್ತಿನ ಬಂಡಿ, ಎತ್ತುಗಳಿಗೂ ಬಂತು ರೇಡಿಯಂ; ಕಲಬುರಗಿ ಸಂಚಾರಿ ಪೊಲೀಸರಿಂದ ಮಹತ್ವದ ಕಾರ್ಯ

Published On - 5:49 pm, Tue, 1 February 22