ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ; ಯತ್ನಾಳ್ ಸೇರಿದಂತೆ ಹಲವರ ವಿರುದ್ದ ಎಫ್​ಐಆರ್​

ಲೋಕಸಭಾ ಚುನಾವಣೆ ಹಿನ್ನಲೆ ಉಭಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದೆ. ಈ ಮಧ್ಯೆ ನೇಹಾ ಹತ್ಯೆ ಖಂಡಿಸಿ ಕಲಬುರಗಿ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಷ ಭಾಷಣ ಆರೋಪದ ಹಿನ್ನಲೆ ಬಿಜೆಪಿಯ ಹಲವು ನಾಯಕರ ವಿರುದ್ದ ಎಫ್​ಐಆರ್​ ದಾಖಲಾಗಿದೆ.

ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ; ಯತ್ನಾಳ್ ಸೇರಿದಂತೆ ಹಲವರ ವಿರುದ್ದ ಎಫ್​ಐಆರ್​
ಯತ್ನಾಳ್ ಸೇರಿದಂತೆ ಹಲವರ ವಿರುದ್ದ ಎಫ್​ಐಆರ್​
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 25, 2024 | 8:17 PM

ಕಲಬುರಗಿ, ಏ.25: ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣ ಆರೋಪದ ಹಿನ್ನಲೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಶಾಸಕ ಯತ್ನಾಳ್ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ ಸೇರಿ ಹಲವರ ವಿರುದ್ಧ ಕಲಬುರಗಿ(Kalaburagi) ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ. ಕರ್ನಾಟಕ ಪ್ರದೇಶ ಕುರುಬರ ಸಂಘ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

ಇದೇ ಏಪ್ರಿಲ್ 22ರಂದು ಹುಬ್ಬಳ್ಳಿಯ ನೇಹಾ ಹತ್ಯೆ ಖಂಡಿಸಿ ಕಲಬುರಗಿ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಘೋಷಣೆ ಕೂಗುತ್ತಾ, ‘ಗಲ್ಲಿ ಗಲ್ಲಿ‌ ಮೇ ಚಾಕು ಹೈ.. ಸಿದ್ದರಾಮಯ್ಯ ಡಾಕು ಹೈ. ಫೆಕದೋ ಫೆಕದೋ..ಕಾಂಗ್ರೆಸ್‌‌ಕೋ ಫೆಕದೋ ಎಂದು ಅವಹೇಳನಕಾರಿಯಾಗಿ ಕೂಗಿದ್ದರು. ಈ ಹಿನ್ನಲೆ ಇಂದು(ಏ.25) ಹಲವು ಬಿಜೆಪಿ ನಾಯಕರ ವಿರುದ್ದ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ