ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಎಂಬಿಬಿಎಸ್​ ವಿದ್ಯಾರ್ಥಿಯಿಂದ ಮತಾಂತರಕ್ಕೆ ಯತ್ನ

ಕಲಬುರಗಿ ನಗರದಲ್ಲಿನ ಇಎಸ್ಐ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕ್ರೈಸ್ತ್​ ಧರ್ಮದ ಕರಪತ್ರ ನೀಡಿ ಎಂಬಿಬಿಎಸ್​ ವಿದ್ಯಾರ್ಥಿ ಮತಾಂತರಕ್ಕೆ ಪ್ರೆರೇಪಿಸಿದ್ದಾನೆ. ಈ ವಿಚಾರ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿ ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಎಂಬಿಬಿಎಸ್​ ವಿದ್ಯಾರ್ಥಿಯಿಂದ ಮತಾಂತರಕ್ಕೆ ಯತ್ನ
ವಿದ್ಯಾರ್ಥಿ ಹಿನೋ ಡಾಲಿಚಾನ್​​
Edited By:

Updated on: Oct 15, 2024 | 10:44 AM

ಕಲಬುರಗಿ, ಅಕ್ಟೋಬರ್​ 15: ಕೇರಳ ಮೂಲದ ಎಂಬಿಬಿಎಸ್​ ವಿದ್ಯಾರ್ಥಿ (MBBS Student) ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ (Kalaburagi ESI Hospital) ರೋಗಿಗಳಿಗೆ ಕ್ರೈಸ್ತ ಧರ್ಮಕ್ಕೆ (Christian) ಮತಾಂತರವಾಗುವಂತೆ ಪ್ರೇರೇಪಿಸುತ್ತಿದ್ದ ವಿಡಿಯೋ ವೈರಲ್​ ಆಗಿದೆ. ವಿದ್ಯಾರ್ಥಿ ಹಿನೋ ಡಾಲಿಚಾನ್​​ ರೋಗಿಗಳಿಗೆ ಕ್ರೈಸ್ತ ಧರ್ಮದ ಕರಪತ್ರಗಳನ್ನು ನೀಡಿ “ಔಷಧಿ ಹಾಗೂ ಇಂಜೆಕ್ಷನ್‌ನಿಂದ ನಿಮ್ಮ ರೋಗ ವಾಸಿಯಾಗುವುದಿಲ್ಲ. ಬದಲಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಬನ್ನಿ. ಯೆಸುವಿನ ದಾರಿಯಲ್ಲಿ ನಡೆದು ನಿಮ್ಮ ರೋಗಗಳನ್ನ ದೂರ ಮಾಡಿಕೊಳ್ಳಿ” ಎಂದು ಹೇಳುತ್ತಿದ್ದನು.

ಮತಾಂತರಕ್ಕೆ ಪ್ರೆರೇಪಿಸುತ್ತಿದ್ದ ವಿಚಾರ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಳಿಕ, ವಿದ್ಯಾರ್ಥಿ ಹಿನೋ ಡಾಲಿಚಾನ್​ನನ್ನು ಹಿಡಿದು ಪ್ರಶ್ನಿಸಿದಾಗ, ತಾನು ಎಂಬಿಬಿಎಸ್​ ವಿದ್ಯಾರ್ಥಿ ಎಂದು ಹೇಳಿದ್ದಾನೆ. ಅಲ್ಲದೇ ತಾನು ಕೇವಲ ಓದಲು ಪೇಪರ್​​ ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲ್ ಕರ್ಮಕಾಂಡ: ಮೊಬೈಲ್, ಗಾಂಜಾ ಬಳಕೆಯೊಂದಿಗೆ ಬಿಂದಾಸ್ ಲೈಫ್

ಆಗ ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾರ್ಥಿಯನ್ನು ಹಿಡಿದು ತಪಾಸಣೆ ನಡೆಸಿದಾಗ, ಆತನ ಬ್ಯಾಗ್​ನಲ್ಲಿ ಕ್ರೈಸ್ತ್​ ಧರ್ಮದ ಕೆಲ ಅಂಶಗಳು ಮಳಯಾಳಂ ಮತ್ತು ಕನ್ನಡದಲ್ಲಿ ಬರೆದಿರುವ ಪುಸ್ತಕ ಪತ್ತೆಯಾಗಿದೆ. ವಿದ್ಯಾರ್ಥಿ ಹಿನೋ ಡಾಲಿಚಾನ್​ನನ್ನು ಹಿಂದೂ ಸಂಘಟನೆ ಕಾರ್ಯಕರ್ತರು‌ ತೀವ್ರ ತರಾಟೆಗೆ ತೆಗೆದುಕೊಂಡರು.
ಮತಾಂತರಕ್ಕೆ ಯತ್ನಿಸಿದ ವಿದ್ಯಾರ್ಥಿ ಹಿನೋ ಡಾಲಿಚಾನ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುಲ್ಬರ್ಗಾ ವಿವಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ