ಲಾಡ್ಲೇ ಮಶಾಕ್ ದರ್ಗಾಕ್ಕೂ ಮೊದಲೇ ರಾಘವ ಚೈತನ್ಯ ಲಿಂಗವಿತ್ತು: ಸಿದ್ದಲಿಂಗ ಸ್ವಾಮೀಜಿ ಹೇಳಿಕೆ

ಆಳಂದ ತಾಲೂಕಿನ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಇಂದು ಪೂಜೆ ಸಲ್ಲಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ರಾಘವ ಚೈತನ್ಯ ಲಿಂಗ ಇರುವ ಆವರಣದಲ್ಲಿ ದರ್ಗಾವಿದೆ ವಿನಃ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ಲಿಂಗ ಇರುವುದಲ್ಲ ಎಂದರು.

ಲಾಡ್ಲೇ ಮಶಾಕ್ ದರ್ಗಾಕ್ಕೂ ಮೊದಲೇ ರಾಘವ ಚೈತನ್ಯ ಲಿಂಗವಿತ್ತು: ಸಿದ್ದಲಿಂಗ ಸ್ವಾಮೀಜಿ ಹೇಳಿಕೆ
ಸಿದ್ದಲಿಂಗ ಸ್ವಾಮೀಜಿ ಜೊತೆ ಹಿಂದೂ ಕಾರ್ಯಕರ್ತರು ಹಾಗೂ ಭಕ್ತರು
Follow us
TV9 Web
| Updated By: Rakesh Nayak Manchi

Updated on: Feb 18, 2023 | 4:10 PM

ಕಲಬುರಗಿ: ಅವರಿಗೆ ಲಾಡ್ಲೇ ಮಶಾಕ್ ದರ್ಗಾ (Ladle Mashak Dargah) ಹೇಗೆ ಪವಿತ್ರವೋ ನಮಗೆ ರಾಘವ ಚೈತನ್ಯ ಲಿಂಗ (Raghava Chaitanya Linga) ಅಷ್ಟೇ ಪವಿತ್ರ ಹಾಗೂ ಮುಖ್ಯ. ಆದರೆ ಅವರು ರಾಘವ ಚೈತನ್ಯರ ಸಮಾದಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದರು ಎಂದು ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಆರೋಪಿಸಿದರು. ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದ ಮಹಾ ಶಿವರಾತ್ರಿ ಮಹಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಭಾಷಣ ಮಾಡಿದರೆ ಪ್ರಚೋದನೆ ಅಂತ ಪೊಲೀಸರು ಹೇಳುತ್ತಾರೆ, ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಗಂಟಲ ಹರಕೊಂಡು ಭಾಷಣ ಮಾಡುತ್ತಾರೆ. ಅದು ಪ್ರಚೋದನೆ ಅಲ್ವಾ? ಎಂದು ಪ್ರಶ್ನಿಸಿದರು.

ಕಳೆದ ವರ್ಷ ಪೊಲೀಸರು ಯಾಕೆ ಘರ್ಷಣೆಯನ್ನು ತಪ್ಪಿಸಲಿಲ್ಲಾ? ನಮ್ಮ ಮೇಲೆ ಕೇಸ್ ಹಾಕಿದಾಗ ನಮ್ಮ ಗಾಡಿ ಮತ್ತಷ್ಟು ಸ್ಪೀಡ್ ಆಗುತ್ತದೆ. ಹಿಂದೂಗಳು ಎದ್ದರೆ ವೀರಭದ್ರ, ಮಲಗಿದ್ರೆ ಕುಂಬಕರ್ಣ. ನಮಗೆ ಪೂಜೆಗೆ ಅವಕಾಶ ನೀಡಿದ್ದಕ್ಕೆ ಉರುಸ್ ಮಾಡುವವರಿಗೆ ತುರಿಕೆ ಆರಂಭವಾಗಿತ್ತು ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಲಾಡ್ಲೇ ಮಶಾಕ್ ದರ್ಗಾ; ಬಿಗಿ ಬಂದೋಬಸ್ತ್, ಘರ್ಷಣೆ ಭೀತಿಯಿಂದ ಮನೆ ಖಾಲಿ ಮಾಡಿದ ಮುಸ್ಲಿಂ ಕುಟುಂಬಗಳು

ದರ್ಗಾಕ್ಕೂ ಮೊದಲೇ ರಾಘವ ಚೈತನ್ಯ ಲಿಂಗವಿತ್ತು

ದರ್ಗಾಕ್ಕೂ ಮೊದಲೇ ರಾಘವ ಚೈತನ್ಯ ಲಿಂಗವಿತ್ತು ಎಂದು ಹೇಳಿದ ಸಿದ್ದಲಿಂಗ ಸ್ವಾಮೀಜಿ, ರಾಘವ ಚೈತನ್ಯ ಲಿಂಗ ಇರೋ ಆವರಣದಲ್ಲಿ ದರ್ಗಾವಿದೆ ವಿನಃ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ಲಿಂಗವಿಲ್ಲ. ಬಾಬಾಬುಡನಗಿರಿಯಲ್ಲಿ ಕೂಡಾ ದತ್ತನ ಗುಡಿಯಲ್ಲಿ ಬಾಬಾ ಬುಡನ್ ಇದ್ದ ಎಂದರು.

ಕಳೆದ ವರ್ಷ ಮತ್ತು ಈ ವರ್ಷದ್ದು ಕೇವಲ ಟ್ರೇಲರ್ ಅಷ್ಟೆ, ಪಿಚ್ಚರ್ ಅಭಿ ಬಾಕಿ ಹೈ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಪ್ರತಿವರ್ಷ ಇಲ್ಲಿ ಪೂಜೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಮಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಮತ ಹಾಕಬಾರದು. ಅವರಿಗೆ ಮತ ಹಾಕಿದರೆ ಹಿಂದೂಗಳ ಸರ್ವನಾಶವಾಗುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು