ಒಳ್ಳೆಯ ಕೆಲಸ ಮಾಡಿದ್ದೇನೆಂದು ಹೇಳ್ತಿರಾ, ಆದ್ರೆ, ಮತಗಟ್ಟೆಗೆ ಹೋದಾಗ ಮರೆತು ಬಿಡ್ತೀರಾ: ಖರ್ಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 5:24 PM

ಸಿಲ ನಾಡು ಕಲಬುರಗಿಯಲ್ಲಿ (Kalaburagi) ಇಂದು(ಏ.12) ಕಾಂಗ್ರೆಸ್​ ಅಬ್ಬರದ ಪ್ರಚಾರ ನಡೆಸಿದ್ದು, ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ‘ಕಾಂಗ್ರೆಸ್​ನ 25 ಗ್ಯಾರಂಟಿಗಳಿದ್ದು, ಎಲ್ಲ ಭರವಸೆ ಈಡೇರಿಸುತ್ತೇವೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ವೋಟ್​ ಕೊಟ್ಟು ನೋಡಿ. 5 ವರ್ಷಗಳಲ್ಲಿ ಕಲಬುರಗಿಯಲ್ಲಿ ಬದಲಾವಣೆ ಆಗುತ್ತದೆ ಎಂದರು.

ಒಳ್ಳೆಯ ಕೆಲಸ ಮಾಡಿದ್ದೇನೆಂದು ಹೇಳ್ತಿರಾ, ಆದ್ರೆ, ಮತಗಟ್ಟೆಗೆ ಹೋದಾಗ ಮರೆತು ಬಿಡ್ತೀರಾ: ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ಕಲಬುರಗಿ, ಏ.12: ಲೋಕಸಭಾ ಚುನಾವಣೆ (Lok sabha election) ಹಿನ್ನಲೆ ಬಿಸಿಲ ನಾಡು ಕಲಬುರಗಿಯಲ್ಲಿ (Kalaburagi) ಇಂದು(ಏ.12) ಕಾಂಗ್ರೆಸ್​ ಅಬ್ಬರದ ಪ್ರಚಾರ ನಡೆಸಿದ್ದು, ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ‘ಕಾಂಗ್ರೆಸ್​ನ 25 ಗ್ಯಾರಂಟಿಗಳಿದ್ದು, ಎಲ್ಲ ಭರವಸೆ ಈಡೇರಿಸುತ್ತೇವೆ. ಎಲ್ಲೇ ಕೇಳಿದರೂ ನಾನು ಒಳ್ಳೆಯ ಕೆಲಸ ಮಾಡಿದ್ದೇನೆಂದು ಹೇಳುತ್ತಿರಾ, ಆದರೆ, ಮತಗಟ್ಟೆಗೆ ಹೋದಾಗ ನಿಮಗೆ ಏನು ಅನಿಸುತ್ತೋ ಗೊತ್ತಿಲ್ಲ, ನಮ್ಮನ್ನೇ ಮರೆತು ಬಿಡ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ವೋಟ್​ ಕೊಟ್ಟು ನೋಡಿ. 5 ವರ್ಷಗಳಲ್ಲಿ ಕಲಬುರಗಿಯಲ್ಲಿ ಬದಲಾವಣೆ ಆಗುತ್ತದೆ. ನಾನು ಇನ್ನೂ ಸತ್ತಿಲ್ಲ, ಜನರ ಸೇವೆ ಮಾಡಲು ಬದ್ಧನಾಗಿದ್ದೇನೆ. ಭಾಷಣದ ವೇಳ ಮಲ್ಲಿಕಾರ್ಜುನ ಖರ್ಗೆ ಭಾವುಕರಾದರು. ‘ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಮಾಡುವುದಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಸ್ಥಾನಮಾನ ತಂದು ಕೊಟ್ಟಿದ್ದೇನೆ. ಈ ಮೂಲಕ ಸಂವಿಧಾನದ ಪುಸ್ತಕದಲ್ಲಿ ಕಲಬುರಗಿ ಹೆಸರು ಸೇರಿಸಿದ್ದೇನೆ ಎಂದರು.

ಇದನ್ನೂ ಓದಿ:ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ: ಮುರುಗೇಶ್ ನಿರಾಣಿ

ಇದರ ಜೊತೆಗೆ ಕೇಂದ್ರಿಯ ವಿಶ್ವ ವಿದ್ಯಾಲಯ, ಇಎಸ್​ಐ, ಜವಳಿ ಪಾರ್ಕ್​, ನ್ಯಾಷನಲ್‌ ಹೈವೇ ಎಲ್ಲವೂ ಮಾಡಿದ್ದೆ. ಬಿಜೆಪಿಯವರಿಗೆ ಈ ಭಾಗದ ಅಭಿವೃದ್ಧಿ ಬೇಕಾಗಿಲ್ಲ. ಈ ಭಾಗಕ್ಕೆ ಬಿಜೆಪಿ ಕೊಡುಗೆ ಶೂನ್ಯವಾಗಿದೆ. ನನ್ನ ಗುರಿ ಒಂದೇ ಈ ಭಾಗವನ್ನು ಅಭಿವೃದ್ದಿ ಮಾಡುವ ಮೂಲಕ ಬಸವಣ್ಣನ, ಅಂಬೇಡ್ಕರ್ ತತ್ವ ಉಳಿಯಬೇಕು ಎನ್ನುವುದು. ಇದು ಕೇವಲ ರಾಧಕೃಷ್ಣ ಎಲೆಕ್ಷನ್ ಅಲ್ಲ, ಬದಲಾಗಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಚುನಾವಣೆ. ಈಗಾಗಲೆ ಮೋದಿ ಎಲ್ಲ ಮಷಿನರಿ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳು ಮಾಡುತ್ತಿದ್ದಾರೆ. ಅದನ್ನ ನಾವು ಉಳಿಸಬೇಕಾಗಿದೆ. ಅದಕ್ಕಾಗಿ ನೀವೆಲ್ಲಾ ಕಾಂಗ್ರೆಸ್​ಗೆ ಮತ ನೀಡಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ