ಅನುಮತಿ ಪಡೆಯದೆ ಬ್ಯಾನರ್​​ ಅಳವಡಿಕೆ: ಬೆಂಬಲಿಗರು ಮಾಡಿದ ತಪ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆಗೆ ದಂಡ

ಅನುಮತಿ ಪಡೆಯದೆ ಬೆಂಬಲಿಗರು ಹಾಕಿದ್ದ ಬ್ಯಾನರ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ಹಿನ್ನೆಲೆ ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್​​ ಅನ್ನು ಬೆಂಬಲಿಗರು ಹಾಕಿದ್ದರು. ಬ್ಯಾನರ್ ಹಾಕಿದವರ ಹೆಸರಿಲ್ಲದಿದ್ದರಿಂದ ಸಚಿವರಿಗೆ ಪಾಲಿಕೆ ದಂಡವಿಧಿಸಿದೆ.

ಅನುಮತಿ ಪಡೆಯದೆ ಬ್ಯಾನರ್​​ ಅಳವಡಿಕೆ: ಬೆಂಬಲಿಗರು ಮಾಡಿದ ತಪ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆಗೆ ದಂಡ
ಬೆಂಬಲಿಗರು ಹಾಕಿದ್ದ ಬ್ಯಾನರ್
Edited By:

Updated on: Aug 30, 2023 | 9:36 PM

ಕಲಬುರಗಿ, ಆಗಸ್ಟ್​ 30: ಅನುಮತಿ ಪಡೆಯದೆ ಬೆಂಬಲಿಗರು ಹಾಕಿದ್ದ ಬ್ಯಾನರ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲು ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಆಗಮಿಸಿದ್ದಾಗ ಘಟನೆ ನಡೆದಿದೆ. ನಗರದ ಆಳಂದ ಚೆಕ್​ಪೋಸ್ಟ್​ ಬಳಿ ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್​​ ಅನ್ನು ಬೆಂಬಲಿಗರು ಹಾಕಿದ್ದರು. ಬ್ಯಾನರ್ ಹಾಕಿದವರ ಹೆಸರಿಲ್ಲದಿದ್ದರಿಂದ ಸಚಿವರಿಗೆ ಪಾಲಿಕೆ ದಂಡವಿಧಿಸಿದೆ.

ಸದ್ಯ 5 ಸಾವಿರ ರೂ. ದಂಡ ಪಾವತಿಸಲು ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದು, ತಮ್ಮ ಸಿಬ್ಬಂದಿಗೆ ದಂಡದ ಹಣ ಪಾವತಿಸಲು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅನುಮತಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮಗೊಳ್ಳುವಂತೆ ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಸೂಚನೆ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.

ನಾನು ಮಲ್ಲಿಕಾರ್ಜುನ ಅಲ್ಲಾ, ಅವರಂತೆ ಆಗ ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ ತಂದೆ ನೋಡಿ ಕಲಿಯಲಿ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾನು ಮಲ್ಲಿಕಾರ್ಜುನ ಅಲ್ಲಾ, ಅವರಂತೆ ಆಗ ಆಗಲು ಸಾಧ್ಯವಿಲ್ಲಾ. ನಾನು ಸಂವಿಧಾನದಂತೆ ಮಾತನಾಡಿದರೆ ದರ್ಪದ ಮಾತು ಅಂತ ಹೇಳುತ್ತಾರೆ. ಕಾನೂನು ವಿರುದ್ಧ ನಡೆದುಕೊಳ್ಳುವವರಿಗೆ ಮೆರವಣಿಗೆ ಮಾಡಲು ಆಗಲ್ಲಾ. ಹೀಗಾಗಿ ಅವರನ್ನು ಒದ್ದು ಒಳಗೆ ಹಾಕಿ ಅಂತ ಹೇಳಿದ್ದೇನೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದ ಸಂಸದ ಡಾ.ಉಮೇಶ್ ಜಾಧವ್

ಸಚಿವ ಪ್ರಿಯಾಂಕ್ ಖರ್ಗೆ ಅಧಿಕೃತವಾಗಿ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ವಾಗ್ದಾಳಿ ಮಾಡಿದ್ದಾರೆ. ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕು ಅಂತ ಪೊಲೀಸರಿಗೆ ಹೇಳುತ್ತಾರೆ. ಒದ್ದು ಒಳಗೆ ಹಾಕಲು ನಮ್ಮ ದೇಶದ ಕಾನೂನಿನಲ್ಲಿ ಅವಕಾಶ ಇದ್ಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Gruha Lakshmi Launch Live: ಗೃಹಲಕ್ಷ್ಮಿ ಯೋಜನೆ ಜನರಿಗೆ ಉಪಯುಕ್ತವಾಗಲಿದೆ ಎಂದ ಎಂಪಿ ರೇಣುಕಾಚಾರ್ಯ

ಪ್ರಿಯಾಂಕ್ ತಮ್ಮ ತಂದೆ ಮಲ್ಲಿಕಾರ್ಜುನರನ್ನು ನೋಡಿ ಕಲಿಯಬೇಕು. ಪ್ರಿಯಾಂಕ್ ಖರ್ಗೆ ದ್ವೇಷದ ರಾಜಕೀಯ ಮಾಡೋದನ್ನು ಬಿಡಬೇಕು. ಸಿಎಂ ಸಿದ್ದರಾಮಯ್ಯ ಮೊದಲಿನ ರೀತಿಯಲ್ಲಿ ಅವರು ಈಗ ಇಲ್ಲ. ಈ ಮೊದಲು ಸಿದ್ದರಾಮಯ್ಯ ಕಿಂಗ್ ಥರ ಇದ್ದರು. ಕಾಂಗ್ರೆಸ್​ ಪಕ್ಷದಲ್ಲಿ ಕೂಡಾ ಇದೀಗ ಅಧಿಕಾರ ವಿಭಜನೆ ಆಗಿದೆ. ಲೋಕಸಭಾ ಚುನಾವಣೆ ಸಲುವಾಗಿ ಸರಿಪಡಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.