ಕಲಬುರಗಿ/ಬೆಂಗಳೂರು, (ಮಾರ್ಚ್ 04): ಇದೇ ಮಾ 9 ರಂದು ಕಲಬುರಗಿ- ಬೆಂಗಳೂರು ಬಯ್ಯಪ್ಪನಹಳ್ಳಿ 9Kalaburagi To Bangalore New Train) ನಡುವೆ ನೂತನ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 9ರಿಂದ ವಾರಕ್ಕೊಮ್ಮೆ (ಶುಕ್ರವಾರ, ಶನಿವಾರ) ಸಂಚರಿಸುವ ಈ ರೈಲು ಏಪ್ರಿಲ್ 5 ರಿಂದ ವಾರದಲ್ಲಿ 3 ದಿನ ಸಂಚರಿಸಲಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾದವ್ (Umesh Jadhav) ಮಾಹಿತಿ ನೀಡಿದ್ದಾರೆ. ಮಾರ್ಚ್ 9ರಂದು ಸಾಯಂಕಾಲ 5 ಗಂಟೆಗೆ ಕಲಬುರ್ಗಿಯಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು,ಕಲಬುರಗಿ (Kalaburagi) ವಿಭಾಗದ ಜನರು ಈ ಶುಭಾರಂಭ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಜಾಧವ್ ಕರೆ ನೀಡಿದ್ದಾರೆ.
ನೂತನ ಕಲಬುರಗಿ – ಬೆಂಗಳೂರು ರೈಲು ವಾರದಲ್ಲಿ ಮೂರು ದಿನ ಕಲಬುರ್ಗಿಯಿಂದ ಸಾಯಂಕಾಲ 5 ಗಂಟೆಗೆ ಹೊರಟು ಮರುದಿನ ಮುಂಜಾನೆ 4:15 ಗಂಟೆಗೆ ಬೆಂಗಳೂರು ಸಮೀಪದ ಬೈಯ್ಯಪ್ಪನಹಳ್ಳಿ ಅತ್ಯಾಧುನಿಕ ಮತ್ತು ಸುಸಜ್ಜಿತವಾಗಿ ನಿರ್ಮಾಣಗೊಂದಿರುವ ಸರ್.ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ.
ಈ ನೂತನ ರೈಲು ಏಪ್ರಿಲ್ 5ರಿಂದ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಇಂದು (ಮಾರ್ಚ್ 4) ನವದೆಹಲಿಯಲ್ಲಿ ಮನವಿ ಸಲ್ಲಿಸಿದ್ದು, ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಏಪ್ರಿಲ್ 5ರಿಂದ ವಾರದಲ್ಲಿ ಮೂರು ದಿನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಉಮೇಶ್ ಜಾಧವ್ ಅವರು ಸಂಸದರಾದಾಗಿನಿಂದ ಇಲ್ಲಿಯವರೆಗೂ ಮಾಧ್ಯಮಗೋಷ್ಠಿ ಕರೆದಾಗೆಲ್ಲಾ ಹೊಸ ರೈಲು ಸಂಚಾರ, ರೈಲ್ವೆ ಡಿವಿಜನ್ ಹೆಡ್ ಕ್ವಾರ್ಟರ್ ಪ್ರಶ್ನೆಗಳು ಮೋಸ್ಟ್ ಲೈಕ್ಲಿ ಪ್ರಶ್ನೆಗಳಾಗಿಯೇ ಎದುರಾಗುತ್ತಿದ್ದವು. ಹಾಗೆಯೇ ಮೋಸ್ಟ್ ಲೈಕ್ಲಿ ಆನ್ಸರ್‌ನಲ್ಲೇ ಕೊನೆಗೊಳ್ಳುತ್ತಿದ್ದವು. ಈಗ ಹೊಸ ರೈಲು ಯಾವಾಗ ಎಂಬ ಪ್ರಶ್ನೆಗೆ ಅರೆಬರೆಯಾದರೂ ಉತ್ತರ ಸಿಕ್ಕಿದೆ.
ಮಾರ್ಚ್ 9ರಂದು ಕಲಬುರ್ಗಿಯಿಂದ ನೂತನ ರೈಲು ಸಂಚಾರ ಪ್ರಾರಂಭ.
ನವದೆಹಲಿಯಲ್ಲಿ ಇಂದು @RailMinIndia ಶ್ರೀ @AshwiniVaishnaw ಅವರನ್ನು ರೈಲ್ವೆ ಭವನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಮಾರ್ಚ್ 9ರಂದು ಶನಿವಾರ ಸಾಯಂಕಾಲ 5 ಗಂಟೆಗೆ ಕಲಬುರ್ಗಿ- ಬೆಂಗಳೂರು ನೂತನ ರೈಲು ಸಂಚಾರ ಶುಭಾರಂಭಗೊಳ್ಳಲಿದೆ. pic.twitter.com/10zBiRKDGj
— Dr. Umesh G Jadhav MP (Modi Ka Parivar) (@UmeshJadhav_BJP) March 4, 2024
ಈ ಭಾಗದ ಜನ ಹಣ ಕೊಟ್ಟ ಟಾಯ್ಲೇಟ್, ಬಾತ್‌ರೂಮ್, ರೇಲ್ವೆ ಬೋಗಿಗಳ ನೆಲಹಾಸಿನ ಮೇಲೆ ಕುಳಿತೋ, ನಿಂತೋ, ಮುಡಿಯಾಗಿ ಮಲಗಿಯೋ ಬೆಂಗಳೂರಿಗೆ ಬಂದು ಹೋಗುವುದು ತಪ್ಪಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Mon, 4 March 24