ಕಲಬುರುಗಿ: ಗೂಡ್ಸ್​​ನಲ್ಲಿ ತಲೆದಿಂಬುಗಳ ಜೊತೆ ಗಾಂಜಾ ಸಾಗಾಟ; 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ

ಕಲಬುರಗಿಯಲ್ಲಿ ಸಿಇಎನ್ ಪೊಲೀಸರು ಗಾಂಜಾ ಸಾಗಾಟದ ಬೃಹತ್ ಜಾಲವನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 340 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕಲಬುರುಗಿ: ಗೂಡ್ಸ್​​ನಲ್ಲಿ ತಲೆದಿಂಬುಗಳ ಜೊತೆ ಗಾಂಜಾ ಸಾಗಾಟ; 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ
ಆರೋಪಿಗಳು ಹಾಗೂ ಅವರಿಂದ ವಶಪಡಿಸಿಕೊಂಡ ಗಾಂಜಾ ಮತ್ತು ಪ್ರಕರಣ ಭೇದಿಸಿದ ಪೊಲೀಸರು
Updated By: shivaprasad.hs

Updated on: Oct 09, 2021 | 8:15 AM

ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಉಪಳಾಂವ್ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಗೂಡ್ಸ್​​ನಲ್ಲಿ ತಲೆದಿಂಬುಗಳ ಜತೆ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 340 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ತೆಲಂಗಾಣದ ಧರ್ಮಾಚಲಂನಿಂದ ಕಲಬುರಗಿಗೆ ಗೂಡ್ಸ್​ನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಕಲಬುರಗಿ ಸಿಇಎನ್ ಪಿಎಸ್​ಐ ವಹೀದ್ ಕೊತ್ವಾಲ್ ನೇತೃತ್ವದ ತಂಡದಿಂದ ದಾಳಿ ನಡೆಸಿ ಅಕ್ರಮ್, ಸಮೇರ್, ಮೋಹನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮೋಹನ್, ಭಾಲ್ಕಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅಕ್ರಮ್, ಸುಮೇರ್ ಮಹಾರಾಷ್ಟ್ರ ದ ಲಾಥೂರ್ ನಿವಾಸಿಗಳಾಗಿದ್ದಾರೆ.

ಗೂಡ್ಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು

ಗೂಡ್ಸ್​ನಲ್ಲಿ ಹಿಂದೆ ತಲೆದಿಂಬುಗಳನ್ನಿಟ್ಟು, ಮುಂದೆ ಗಾಂಜಾ ಸಾಗಣೆಯನ್ನು ಆರೋಪಿಗಳು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಲಬುರಗಿ ತಾಲೂಕಿನ ಉಪಳಾಂವ್ ಕ್ರಾಸ್ ಬಳಿ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ಮೂಲಕ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಇಎನ್ ಪೊಲೀಸರು ಭೇದಿಸಿದಂತಾಗಿದೆ.

ಇದನ್ನೂ ಓದಿ:

ಅಪೌಷ್ಠಿಕತೆ ಇರುವ ಮಕ್ಕಳ ದತ್ತು ಸ್ವೀಕಾರ; ಕೋಲಾರದಲ್ಲಿ ಮಹತ್ವದ ಅಭಿಯಾನ

ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ; ಸಿಮ್ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ

ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು