Kalburgi: ಫಲಾನುಭವಿಗಳ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ; ವಿಶೇಷ ವರದಿ ಇಲ್ಲಿದೆ

Kalburgi News: ಫಲಾನುಭವಿಗಳಿಗೆ ಸೇರಬೇಕಿದ್ದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಕಲಬುರಗಿಯಲ್ಲಿ ಕಾಳ ಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರೀಯವಾಗಿದೆ.

Kalburgi: ಫಲಾನುಭವಿಗಳ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ; ವಿಶೇಷ ವರದಿ ಇಲ್ಲಿದೆ
Follow us
TV9 Web
| Updated By: ganapathi bhat

Updated on: Oct 09, 2021 | 7:29 PM

ಕಲಬುರಗಿ: ಸರ್ಕಾರ ಬಡ ಜನರಿಗೆ, ಶಾಲಾ ಮಕ್ಕಳಿಗೆ, ಬಾಣಂತಿ ಮತ್ತು ಗರ್ಭಿಣಿಯರಿಗೆ ಅನಕೂಲವಾಗಲಿ ಎಂದು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಉಚಿತ ಅಕ್ಕಿ ನೀಡುತ್ತದೆ. ಬಡವರು ಉಪಸಾವ ಇರಬಾರದು. ಮಕ್ಕಳು ಮತ್ತು ಬಾಣಂತಿಯರು ಅಪೌಷ್ಟಿಕತೆಯಿಂದ ಬಳಲಬಾರದು ಅನ್ನೋದು ಸರ್ಕಾರದ ಉದ್ದೇಶ. ಆದ್ರೆ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ಆದ್ರೆ ಅದರಲ್ಲಿ ಆಗುತ್ತಿರುವ ಸೋರಿಕೆಯನ್ನು ನಿಯಂತ್ರಿಸಲು ಮಾತ್ರ ವಿಫಲವಾಗಿದೆ. ಹೀಗಾಗಿ ಫಲಾನುಭವಿಗಳಿಗೆ ಸೇರಬೇಕಿದ್ದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಕಲಬುರಗಿಯಲ್ಲಿ ಕಾಳ ಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರೀಯವಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಹೊಂದಿರುವ ಮಕ್ಕಳು, ಬಡತನ ರೇಖೆಗಿಂತ ಕೆಳಗಿರುವ ಹೆಚ್ಚಿನ ಜನರು ಇರುವ ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆ ಕೂಡಾ ಒಂದು. ಆದರೆ ಇದೇ ಜಿಲ್ಲೆಯಲ್ಲಿ ನಿಜವಾದ ಫಲಾನುಭವಿಗಳ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಕಲಬುರಗಿ ನಗರದಲ್ಲಿ ಎರಡು ಕಡೆ ಅಕ್ರಮವಾಗಿ ಸಿಕ್ಕಿರುವ ಅಕ್ಕಿ, ಅಕ್ರಮದ ಆಳವನ್ನು ತೋರಿಸುತ್ತಿದೆ. ಹೌದು ಕಲಬುರಗಿ ನಗರದ ದಾಲ್ ಮಿಲ್ ಒಂದರಲ್ಲಿ ಐನೂರು ಕ್ವಿಂಟಲ್​ಗೂ ಹೆಚ್ಚು ಅಕ್ಕಿ ಮೂಟೆಗಳು ಪತ್ತೆಯಾಗಿದ್ದರೆ, ಕಲಬುರಗಿ ನಗರದ ಬಂಬೂ ಬಜಾರ್​ನಲ್ಲಿ ಮುನ್ನೂರು ಕ್ವಿಂಟಲ್​ಗೂ ಹೆಚ್ಚು ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಕಲಬುರಗಿ ನಗರದಲ್ಲಿ ಕಳೆದ ಒಂದು ವಾರದಲ್ಲಿ ಹೆಚ್ಚುಕಡಿಮೆ ಎಂಟು ನೂರು ಕ್ವಿಂಟಲ್​ನಷ್ಟು ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹೇಗೆ ನಡೆಯುತ್ತದೆ ಈ ಅಕ್ರಮ ಅಕ್ಕಿ ದಂದೆ ಕಲಬುರಗಿ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೂಡ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರೀಯವಾಗಿದೆ. ಇಂತಹದೊಂದು ದಂಧೆಯನ್ನು ಮಾಡುವಲ್ಲಿ ಅನೇಕ ತಂಡಗಳೇ ಇವೆ. ಹೌದು ಸರ್ಕಾರ ಪಡಿತರದಾರಿಗೆ ನೀಡಲು ಅಕ್ಕಿಯನ್ನು ಗೋಡೌನ್​ಗಳಿಂದ ಪಡಿತರ ಅಂಗಡಿಯವರಿಗೆ ಕಳುಹಿಸುತ್ತಾರೆ. ಆದ್ರೆ ಅನೇಕ ವಿತರಕರು, ಪಡಿತರ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡದೆ, ಕಾಳ ಸಂತೆಕೋರರಿಗೆ ಕಿಲೋಗೆ ಹತ್ತು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಇನ್ನು ಕೆಲವು ಸಲ ಗೋಡೌನ್​ಗಳಿಂದಲೇ ನೇರವಾಗಿ ಕಾಳ ಸಂತೆಕೋರರ ಅಡ್ಡೆಗಳಿಗೆ ಅಕ್ಕಿ ಸಾಗಾಟ ಮಾಡಿರುವದು ಕೂಡಾ ಕಲಬುರಗಿಯಲ್ಲಿ ನಡೆದಿದೆ. ಇನ್ನು ಕೆಲ ಫಲಾನುಭವಿಗಳು ಕೂಡಾ ತಮ್ಮ ಬಳಕೆಗಿಂತ ಹೆಚ್ಚು ಬರುವ ಅಕ್ಕಿಯನ್ನು ಕಲಬುರಗಿ ನಗರದ ಮಾರ್ಕೆಟ್​ನಲ್ಲಿ ಮಾರಾಟ ಮಾಡುತ್ತಾರೆ. ಅಂಗನವಾಡಿಗಳಿಗೆ, ಮಧ್ಯಾಹ್ನದ ಬಿಸಿ ಊಟ ಯೋಜನೆಗೆ ವಿತರಣೆಯಾಗಬೇಕಿದ್ದ ಅಕ್ಕಿಯನ್ನು ಕೆಲವರು ಕಾಳ ಸಂತೆಕೋರರಿಗೆ ಮಾರಾಟ ಮಾಡಿಕೊಳ್ಳುತ್ತಾರೆ. ಹೀಗೆ ಅನೇಕ ವ್ಯಕ್ತಿಗಳಿಂದ ದಂದೆಯನ್ನು ನಡೆಸುವವರು ಅಕ್ಕಿಯನ್ನು ಕಾಳ ಸಂತೆಯಲ್ಲಿ ಸಂಗ್ರಹ ಮಾಡುತ್ತಾರೆ.

ಮಹರಾಷ್ಟ್ರಕ್ಕೆ ಹೋಗುತ್ತದೆ ಕಲಬುರಗಿ ಅಕ್ಕಿ ಕಾಳಸಂತೆಯಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸುವ ದಂಧೆಕೋರರು, ಬೇರೆ ಬೇರೆ ಪಾಕೆಟ್​ಗಳಲ್ಲಿ ಪಡಿತರ ಅಕ್ಕಿಯನ್ನು ಹಾಕಿ ಲಾರಿಗಳಲ್ಲಿ ನೆರೆಯ ಮಹರಾಷ್ಟ್ರಕ್ಕೆ ಕಳುಹಿಸುತ್ತಾರೆ. ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡುವ ದಂಧೆಕೋರರು ವ್ಯವಸ್ಥಿತವಾಗಿ ತಾವು ಸಂಗ್ರಹಿಸಿದ ಅಕ್ಕಿಯನ್ನು ನೆರೆಯ ರಾಜ್ಯಗಳಿಗೆ ಕಳುಹಿಸುತ್ತಾರೆ. ಪ್ರತಿ ತಿಂಗಳು ಕಲಬುರಗಿ ಜಿಲ್ಲೆಯೊಂದರಿಂದಲೇ ನಾಲ್ಕರಿಂದ ಐದು ಲಾರಿಯಷ್ಟು ಅಕ್ಕಿ ಅಕ್ರಮವಾಗಿ ಮಹರಾಷ್ಟ್ರಕ್ಕೆ ಹೋಗುತ್ತದೆ.

ವಿದೇಶಗಳಿಗೆ ಹೋಗುತ್ತದೆ ಬಡವರ ಅಕ್ಕಿ ಕಾಳ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸುವ ದಂದೆಕೋರರು, ತಮ್ಮ ಲಾಭವನ್ನು ಇಟ್ಟುಕೊಂಡು ಅದನ್ನು ಮಹಾರಾಷ್ಟ್ರಕ್ಕೆ ಕಳುಹಿಸುತ್ತಾರೆ. ಮಹರಾಷ್ಟ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ಖರೀದಿಸುವ ದೊಡ್ಡ ವ್ಯಾಪಾರಿಗಳೇ ಇದ್ದಾರಂತೆ. ಇಲ್ಲಿಂದ ಹೋಗುವ ಅಕ್ಕಿಯನ್ನು ಮತ್ತೆ ಪಾಲೀಶ್ ಮಾಡಿ, ಬೇರೆ ಬೇರೆ ಬ್ರ್ಯಾಂಡ್ ಗಳ ಪಾಕೆಟ್​ಗಳಲ್ಲಿ ಅಕ್ಕಿಯನ್ನು ಹಾಕಿ, ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಿಗೆ ದಂಧೆಕೋರರು ಕಳುಹಿಸುತ್ತಾರಂತೆ. ರಾಜ್ಯ ಸರ್ಕಾರ ನಮ್ಮ ಜನರಿಗೆ ಉಚಿತವಾಗಿ ನೀಡಿದ್ದ ಅಕ್ಕಿ, ಪಾಲಿಶ್​ಗೊಂಡು, ಬೇರೆ ಬ್ರ್ಯಾಂಡ್ ಹೆಸರಲ್ಲಿ ಹೊರದೇಶಗಳಿಗೆ ಹೋಗುತ್ತದೆ. ಆ ಮೂಲಕ ಕೋಟ್ಯಂತರ ರೂಪಾಯಿ ಲಾಭವನ್ನು ದಂದೆಕೋರರು ಮಾಡಿಕೊಳ್ಳುತ್ತಿದ್ದಾರೆ.

ಕಣ್ಣಿದ್ದು ಕುರುಡಾದ ಅಧಿಕಾರಿಗಳು ಕಲಬುರಗಿಯಲ್ಲಿ ಇಂತಹದೊಂದು ಅಕ್ರಮ ದಂಧೆ ನಡೆಯುತ್ತಿರುವುದು ಪೊಲೀಸ್ ಇಲಾಖೆಯವರಿಗೆ, ಆಹಾರ ಇಲಾಖೆಯವರಿಗೆ ಗೊತ್ತಿದೆ. ಆದರೆ ಎರಡು ಇಲಾಖೆಯವರು ಕಣ್ಣಿದ್ದು ಕುರುಡರಾಗಿದ್ದಾರೆ. ಕಾಳ ಸಂತೆಯಲ್ಲಿ ಅಕ್ರಮವಾಗಿ ಅಕ್ಕಿಯನ್ನು ಮಾರಾಟ ಮಾಡುವುದನ್ನು ತಡೆಯುವಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಯಾರು ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಾರೆ. ಯಾರಿಗೆ ಮಾರಾಟ ಮಾಡುತ್ತಾರೆ. ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿಯನ್ನು ಎಲ್ಲಿ ಇಡುತ್ತಾರೆ ಎನ್ನುವ ಎಲ್ಲಾ ಮಾಹಿತಿಯೂ ಆಹಾರ ಇಲಾಖೆಯ ಕೆಲ ಸಿಬ್ಬಂದಿಗೆ ಗೊತ್ತಿದೆ. ಆದರೂ ಆಹಾರ ಇಲಾಖೆಯವರು ಯಾವುದೇ ದಾಳಿ ನಡೆಸುವುದು, ಅಕ್ರಮ ಮಾಡುವವರನ್ನು ಪತ್ತೆ ಮಾಡುವ ಕೆಲಸವನ್ನು ಇಲ್ಲಿವರಗೆ ಮಾಡಿಲ್ಲ.

ಅಕ್ರಮ ದಂಧೆಯ ಇಂಚಿಚ್ಚು ಮಾಹಿತಿ ಕೂಡಾ ಕಲಬುರಗಿ ಪೊಲೀಸರಿಗೆ ಗೊತ್ತಿದೆ. ಆದರೆ ಪೊಲೀಸರು ಕೂಡಾ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸಾರ್ವಜನಿಕರು ದೂರು ನೀಡಿದಾಗ, ಸ್ಥಳಕ್ಕೆ ಹೋಗುವುದು, ಆಹಾರ ಇಲಾಖೆಯವರು ದೂರು ನೀಡಿದ ಮೇಲೆ ದೂರು ಪಡೆಯುವುದನ್ನು ಮಾತ್ರ ಮಾಡುತ್ತಿದ್ದಾರೆ. ಇನ್ನು ಅಕ್ರಮವಾಗಿ ಸಂಗ್ರಹಿಸಿರುವವರ ಮಾಹಿತಿ ಗೊತ್ತಿದ್ದರು ಕೂಡಾ ಅವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿರೋದರಿಂದ ಅಕ್ರಮ ದಂಧೆ ಎಗ್ಗಿಲ್ಲದೆ ನಡೆದಿದೆ.

ಕಲಬುರಗಿಯಲ್ಲಿ ಅಕ್ರಮ ಅಕ್ಕಿ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಸಾರ್ವಜನಿಕರು ದೂರು ನೀಡಿದ್ರು ಸರಿಯಾದ ಸಮಯಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸೋದಿಲ್ಲ. ಹೀಗಾಗಿ ಅವ್ಯಾಹತವಾಗಿ ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಯುತ್ತಿದೆ. ಇದಕ್ಕೆ ಮೇಲಾಧಿಕಾರಿಗಳು ಬ್ರೇಕ್ ಹಾಕುವ ಕೆಲಸ ಮಾಡಬೇಕು. ತಪ್ಪಿತಸ್ಥರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಯುವಸೇನೆ ಜಿಲ್ಲಾ ಅಧ್ಯಕ್ಷ, ಮಲ್ಲಿಕಾರ್ಜುನ ತಳಕೇರಿ ಹೇಳಿದ್ದಾರೆ.

ವಿಶೇಷ ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕನ್ನಡ, ಕಲಬುರಗಿ

ಇದನ್ನೂ ಓದಿ: ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು

ಇದನ್ನೂ ಓದಿ: ಕಲಬುರಗಿ: ಕಟ್ಟಿಗೆ ತರಲು ಹೋದ ಬಾಲಕಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಆರೋಪ!

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ