ಪಿಎಸ್ಐ ಅಕ್ರಮ ಪ್ರಕರಣ: ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಪಡೆದಿದ್ದ ಭೂಪ ಅರೆಸ್ಟ್

ಪಿಎಸ್ಐ ಅಕ್ರಮ ಪ್ರಕರಣ: ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಪಡೆದಿದ್ದ ಭೂಪ ಅರೆಸ್ಟ್
ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಪಡೆದಿದ್ದ ಭೂಪ ಅರೆಸ್ಟ್

PSI Recruitment Exam scam: ಬೇಸರದ ಸಂಗತಿಯೆಂದರೆ ಈ ಬಂಧಿತ ಆರೋಪಿ ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಸಹ ಪಡೆದಿದ್ದ! ವಿಶ್ವನಾಥ್ ಮಾನೆ ಬಂಧಿತ ಆರೋಪಿ

TV9kannada Web Team

| Edited By: sadhu srinath

Jun 20, 2022 | 10:42 PM

ಕಲಬುರಗಿ: ರಾಜ್ಯದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಿ ವ್ಯವಸ್ಥೆಗೇ ಸೆಡ್ಡು ಹೊಡೆದಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ (PSI Recruitment Exam scam) ಸಿಐಡಿ ಅಧಿಕಾರಿಗಳ (Kalaburagi CID Police) ಭರ್ಜರಿ ಕಾರ್ಯಾಚರಣೆ ಮುಂದುವರಿದಿದೆ. ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಮತ್ತೋರ್ವ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಬೇಸರದ ಸಂಗತಿಯೆಂದರೆ ಈ ಬಂಧಿತ ಆರೋಪಿ ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಸಹ ಪಡೆದಿದ್ದ! ವಿಶ್ವನಾಥ್ ಮಾನೆ(38) ಬಂಧಿತ ಆರೋಪಿ (Ex serviceman Vishwanath Mane).

ವಿಶ್ವನಾಥ್, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ನಿವಾಸಿ. ಈ ವಿಶ್ವನಾಥ್ ಮಾನೆ ಅದೇ ಕಿಂಗ್ ಪಿನ್ ರುದ್ರಗೌಡ ಪಾಟೀಲ ಜೊತೆ ಡೀಲ್ ಮಾಡಿಕೊಂಡು, ಅಕ್ರಮವಾಗಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಪಡೆದಿದ್ದಾನೆ. ಈ ವಿಶ್ವನಾಥ್  ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ. ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆದಲ್ಲಿ ವಿಶ್ವನಾಥ್ ಪರೀಕ್ಷೆ ಬರೆದಿದ್ದ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Also Read:

545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ; ದಿವ್ಯಾ ಹಾಗರಗಿ ಸೇರಿ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

Also Read:

PSI Recruitment Scam: ಬಂಧಿತ ಶಾಂತಿಬಾಯಿ ದಂಪತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕಲಬುರಗಿ ನ್ಯಾಯಾಲಯ

Follow us on

Related Stories

Most Read Stories

Click on your DTH Provider to Add TV9 Kannada