PSI Recruitment Scam: ಬಂಧಿತ ಶಾಂತಿಬಾಯಿ ದಂಪತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕಲಬುರಗಿ ನ್ಯಾಯಾಲಯ
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಾವಾಗಿದ್ದ ಶಾಂತಿಬಾಯಿ, ಪತಿ ಬಸ್ಯಾನಾಯಕ್ ಅವರ ಜಾಮೀನು ಅರ್ಜಿಯನ್ನು ಕಲಬುರಗಿ 3ನೇ JMFC ನ್ಯಾಯಾಲಯ ವಜಾ ಮಾಡಿದೆ.
ಕಲಬುರಗಿ: 545 ಪಿಎಸ್ಐ (PSI Recruitment Scam) ಹುದ್ದೆಗಳಿಗೆ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಾವಾಗಿದ್ದ ಶಾಂತಿಬಾಯಿ, ಪತಿ ಬಸ್ಯಾನಾಯಕ್ ಅವರ ಜಾಮೀನು ಅರ್ಜಿಯನ್ನು ಕಲಬುರಗಿ (Kalburagi) 3ನೇ JMFC ನ್ಯಾಯಾಲಯ ವಜಾ ಮಾಡಿದೆ. ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಶಾಂತಿಬಾಯಿ ಪರೀಕ್ಷೆ ಬರೆದು ಪಾಸಾಗಿದ್ದಳು. ಪರೀಕ್ಷಾ ಅಕ್ರಮ ಶಾಂತಿಬಾಯಿ, ಪತಿ ಬಸ್ಯಾನಾಯಕ್, ಮಕ್ಕಳ ಜತೆ ಹೊರಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಳು. ನಂತರ ಸಿಐಡಿ (CID) ಅಧಿಕಾರಿಗಳು ಮೇ 31ರಂದು ಹೈದರಾಬಾದ್ನಲ್ಲಿ ಶಾಂತಿಬಾಯಿಯನ್ನು ಬಂಧಿಸಿದ್ದರು. ಪಿಎಸ್ಐ ಅಕ್ರಮದಲ್ಲಿ ಬಂಧಿಸಿದ ಯಾರೊಬ್ಬರಿಗೂ ಕೂಡ ಜಾಮೀನು ಸಿಕ್ಕಿಲ್ಲ.
ಇದನ್ನು ಓದಿ: ಬ್ಯಾಡರಹಳ್ಳಿ ಪೊಲೀಸ್ ಠಾಣೆ PSI ಹರೀಶ್ನನ್ನು ಠಾಣೆಯಲ್ಲೇ ಬಂಧಿಸಿದ ಸಿಐಡಿ ಅಧಿಕಾರಿಗಳು
ಏನಿದು 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪ್ರಕರಣ
ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಹಗರಣದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮ ನಡೆದಿತ್ತು. ಸಿಐಡಿ ಪೊಲೀಸರು ಪ್ರಕರಣದ ತನಿಖೆಯನ್ನ ಮುಂದುವರೆಸಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ರುದ್ರಗೌಡ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈಗ ಮತ್ತೊಬ್ಬ PSI ಅಧಿಕಾರಿಯ ತೆಲೆದಂಡವಾಗಿದ್ದು, ಬ್ಯಾಡರಹಳ್ಳಿ ಠಾಣೆ PSI ಹರೀಶ್ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ
ಪರೀಕ್ಷೆ ಬರೆಯಲು 1. ಬ್ಲೂಟೂತ್ ಬಳಕೆ 2. ಒಎಂಆರ್ ಪ್ರತಿಯನ್ನ ಎಕ್ಸಾಂ ಸೆಂಟರ್ನಲ್ಲಿ ತಿದ್ದುಪಡಿ ಮಾಡಿದ್ದಾರೆ. 3. ನೇಮಕಾತಿ ವಿಭಾಗದಲ್ಲಿ ಒಎಂಆರ್ ಪ್ರತಿಯಲ್ಲಿ ಅಕ್ರಮ ತಿದ್ದುಪಡಿ ಮಾಡಿದ್ದಾರೆ. 4. ಸೀಟಿಂಗ್ ವ್ಯವಸ್ಥೆ ಮಾಡಿ ಅಕ್ರಮ ಎಸಗಿ ಬರೆಯಲಾಗಿದೆ. 5. ಫಿಸಿಕಲ್ ವೇಳೆ ಹಣ ನೀಡಿ ಅಕ್ರಮ ಎಸಗಿದ್ದಾರೆ. 6. ಸಂಪೂರ್ಣ ಹುದ್ದೆಯನ್ನು ಡೀಲ್ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ. 7. ಮೊದಲ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಬರೆಯಲಾಗಿದೆ. 8. ಎರಡನೆ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಪರೀಕ್ಷೆ ಬರೆಯಲಾಗಿದೆ. 9. ಎಕ್ಸಾಂ ಸೆಂಟರ್ ಬುಕ್ ಮಾಡಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.