ಪಿಎಸ್​​ಐ ನೇಮಕಾತಿ ಅಕ್ರಮ: ಮಗನ ಪರ ಡೀಲ್ ಮಾಡಿದ್ದ ತಂದೆಯನ್ನ ಬಂಧಿಸಿದ ಸಿಐಡಿ ಪೊಲೀಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 04, 2022 | 6:54 AM

ತಿಂಗಳ ಹಿಂದೆಯೇ ಅಭ್ಯರ್ಥಿ ಸುನಿಲ್ ನರಿಬೋಳ್​ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಮಗನ ಬಂದನ ನಂತರ ತಲೆಮರೆಸಿಕೊಂಡಿದ್ದ, ತಂದೆ ವಂಸತ್ ನರಿಬೋಳ್​ನನ್ನ ಕಳೆದ ರಾತ್ರಿ ಬಂಧಿಸಲಾಗಿದೆ. 

ಪಿಎಸ್​​ಐ ನೇಮಕಾತಿ ಅಕ್ರಮ: ಮಗನ ಪರ ಡೀಲ್ ಮಾಡಿದ್ದ ತಂದೆಯನ್ನ ಬಂಧಿಸಿದ ಸಿಐಡಿ ಪೊಲೀಸ್
ವಸಂತ್ ನರಿಬೋಳ್ ಬಂಧಿತ ಸುನಿಲ್ ತಂದೆ
Follow us on

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಾರ್ಯಾಚರಣೆ ಮಂದುವರಿದಿದ್ದು, ಮಗನ ಪರವಾಗಿ ಡೀಲ್ ಮಾಡಿದ್ದ ತಂದೆಯನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಂಸತ್ ನರಿಬೋಳ್ ಅನ್ನೋ ವ್ಯಕ್ತಿಯನ್ನ ಸಿಐಡಿ ಪೊಲೀಸರು ಬಂಧಿಸಿದ್ದು, ತನ್ನ ಮಗ ಸುನಿಲ್ ಪರವಾಗಿ ರುದ್ರಗೌಡ ಪಾಟೀಲ್ ಜೊತೆ ವಸಂತ್ ನರಿಬೋಳ್ ಡೀಲ್ ಮಾಡಿದ್ದ. ವಸಂತ್, ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿ. ತಿಂಗಳ ಹಿಂದೆಯೇ ಅಭ್ಯರ್ಥಿ ಸುನಿಲ್ ನರಿಬೋಳ್​ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಮಗನ ಬಂದನ ನಂತರ ತಲೆಮರೆಸಿಕೊಂಡಿದ್ದ ತಂದೆ ವಂಸತ್ ನರಿಬೋಳ್​ ನನ್ನ ಕಳೆದ ರಾತ್ರಿ ಬಂಧಿಸಲಾಗಿದೆ.

ಕಿಂಗ್​ಪಿನ್ ರುದ್ರಗೌಡ ಪಾಟೀಲ್​ನ ಮತ್ತಿಬ್ಬರು ಆಪ್ತರ ಅರೆಸ್ಟ್​

ಪ್ರಕರಣದಲ್ಲಿ ಕಿಂಗ್​ಪಿನ್ ರುದ್ರಗೌಡ ಪಾಟೀಲ್​ನ ಮತ್ತಿಬ್ಬರು ಆಪ್ತರನ್ನು ಅರೆಸ್ಟ್ ಮಾಡಲಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ಅಸ್ಲಂ ಮುಜಾವರ್ ಹಾಗೂ ಕರಜಗಿ ಗ್ರಾಮದ ಮೂಲದ ಮುನಾಫ್ ಜಮಾದಾರ್ ಬಂಧಿತರು. ಇವರಿಬ್ಬರೂ ರುದ್ರಗೌಡ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಗಳು ಬ್ಲೂಟೂತ್​ಗಳನ್ನು ಸರಬರಾಜು ಮಾಡುತ್ತಿದ್ದರು. ಜೊತೆಗೆ, ರುದ್ರಗೌಡ ಪಾಟೀಲ್ ಜೊತೆ ಸೇರಿ ಅಭ್ಯರ್ಥಿಗಳ ಜೊತೆ ಇವರಿಬ್ಬರೂ ಡೀಲ್ ಮಾಡುತ್ತಿದ್ದರು. ಅಕ್ರಮವಾಗಿ ಪರೀಕ್ಷೆ ಬರೆಯಲು ಸಿದ್ದರಿದ್ದವರನ್ನು ಹುಡುಕಿ ರುದ್ರಗೌಡ ಪಾಟೀಲ್​ಗೆ ಭೇಟಿ ಮಾಡಿಸುತ್ತಿದ್ದರು.

ಇದನ್ನೂ ಓದಿ: Horoscope Today- ದಿನ ಭವಿಷ್ಯ; ಹಣದ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು

ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾ ನಾಯಕ್ ಹೈದ್ರಾಬಾದ್​ನಲ್ಲಿ ಸೆರೆ

ಅದೇ ರೀತಿಯಾಗಿ ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾ ನಾಯಕ್ ಬಂಧಿಸಲಾಗಿದೆ. ಮೇ 30 ರಂದು ಮುಂಜಾನೆ ಇಬ್ಬರನ್ನೂ ಬಂಧಿಸಿ, ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿರೋ ಸಿಐಡಿ ಕಚೇರಿಗೆ ತರೆತರಲಾಗಿದೆ. ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾ ನಾಯಕ್ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ಸಿಐಡಿ ಕಚೇರಿಗೆ ಆಗಮಿಸಿದ್ದರು.

PSI ಹಗರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಲು ಚಿಂತನೆ; ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಹಗರಣದ ವಿಚಾರಣೆ ನಡೆಸಲು ವಿಶೇಷ ಕೋರ್ಟ್ (Special Court) ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸುತ್ತದೆ ಎಂದು ಶಿವಮೊಗ್ಗದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾಹಿತಿ ನೀಡಿದ್ದಾರೆ. ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ಆಗಲೆಂಬುದು ನನ್ನ ಅಪೇಕ್ಷೆ. ತನಿಖೆ ಮುಗಿದ ಬಳಿಕ ಈ ಬಗ್ಗೆ ಯೋಚಿಸುತ್ತೇವೆ. ಸ್ಪೆಷಲ್ ಕೋರ್ಟ್ ಬಗ್ಗೆ ವಿನಂತಿ ಮಾಡುತ್ತೇನೆ, ಏನಾಗುತ್ತೆ ನೋಡೋಣ ಎಂದರು. ಹೊಸದಾಗಿ ನಡೆಯುವ ಪಿಎಸ್ಐ ಪರೀಕ್ಷೆ ಬಗ್ಗೆ ದಿನಾಂಕ ನಿಗದಿ ಆಗಿಲ್ಲ. ಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ಸ್ವಲ್ಪ ದಿನ ಕಾಯಬೇಕಿದೆ ಅಂತ ಸಚಿವರು ತಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.